
ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಮಸಾಲೆ ಪದಾರ್ಥಗಳು ಪ್ರಮುಖ ಪಾತ್ರವಹಿಸುತ್ತದೆ. ಆದರಂತೆ ಅಡುಗೆಯ ರುಚಿ ಹಾಗೂ ಘಮವನ್ನು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಹೆಚ್ಚಿಸುತ್ತದೆ. ಕೆಲವು ಗೃಹಿಣಿಯರು ಅಡುಗೆ ಕೆಲಸ ಸುಲಭವಾಗಲೆಂದು ಮನೆಯಲ್ಲೇ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ ತಿಂಗಳುಗಟ್ಟಲೇ ಕಾಲ ಶೇಖರಿಸಿಡುತ್ತಾರೆ. ಶುಂಠಿ ಹಾಗೂ ಬೆಳ್ಳುಳ್ಳಿಯಿಲ್ಲದೇ ಯಾವ ಭಾರತೀಯ ಅಡುಗೆಯು ಪೂರ್ಣವಾಗುವುದೇ ಇಲ್ಲ. ಔಷಧೀಯ ತಯಾರಿಕೆ ಹಾಗೂ ಅಡುಗೆಯ ರುಚಿಯನ್ನು ಹೆಚ್ಚಿಸುವ ಈ ಎರಡು ಪದಾರ್ಥಗಳು ಎಲ್ಲರ ಅಡುಗೆ ಮನೆಯಲ್ಲಿಯೂ ಇದ್ದೆ ಇರುತ್ತದೆ. ಅದಲ್ಲದೇ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹೆಚ್ಚು ಉಪಯೋಗಿಸುವವರೇ ಹೆಚ್ಚು.ಆದರೆ ಕೆಲವರು ಫ್ರೆಶ್ ಆಗಿರಲೆಂದು ಮನೆಯಲ್ಲಿ ಈ ಮಿಶ್ರಣವನ್ನು ತಯಾರಿಸುತ್ತಾರೆ. ಯಾವುದೇ ಕಲಬೆರಕೆಯಿಲ್ಲದೇ ಸುಲಭವಾಗಿ ಈ ಪೇಸ್ಟನ್ನು ಮನೆಯಲ್ಲಿ ಮಾಡಿಕೊಳ್ಳುವುದು ಕಷ್ಟವೇನಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ