ಮಾತೃದೇವೋ ಭವ, ಪಿತೃದೇವೋ ಭವ ‘ತಾಯಿ ತಂದೆ ದೇವರಿಗೆ ಸಮಾನ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರ ಪಾತ್ರವನ್ನು ವಿವರಿಸಲು ಅಸಾಧ್ಯ. ತಮ್ಮ ಮಕ್ಕಳ ಏಳಿಗೆಗಾಗಿ ತಮ್ಮ ಜೀವಮಾನದ ಗಳಿಕೆಯನ್ನೇ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಜೀವನವನ್ನು ಕಟ್ಟಿಕೊಡುವ ತಂದೆ ತಾಯಿಯರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಪೋಷಕರು ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಡುವ, ತಂದೆ ತಾಯಂದಿರ ನಿಸ್ವಾರ್ಥ, ಪ್ರೀತಿ ವಾತ್ಸಲ್ಯವನ್ನು ಗೌರವಿಸುವ ಸಲುವಾಗಿ ಪೋಷಕರ ಜಾಗತಿಕ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಮತ್ತು ಸಾಮಾಜಿಕ ಅಭಿವೃದ್ಧಿ ಆಯೋಗವು 1983ರಲ್ಲಿ ಪೋಷಕರ ಜಾಗತಿಕ ದಿನದ ಆರಂಭಕ್ಕೆ ಮುಂದಾಯಿತು. 1989ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 1994 ಅನ್ನು ಅಂತರಾಷ್ಟ್ರೀಯ ಕೌಟುಂಬಿಕ ವರ್ಷವೆಂದು ಘೋಷಣೆ ಮಾಡಿತು. ವಿಶ್ವದಾದ್ಯಂತ ಪೋಷಕರ ಪಾತ್ರವನ್ನು ಗೌರವಿಸುವ ಸಲುವಾಗಿ 2012ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೂನ್ 1 ಅನ್ನು ಅಧಿಕೃತವಾಗಿ ಜಾಗತಿಕ ಪಾಲಕರ ದಿನವನ್ನಾಗಿ ಘೋಷಿಸಿತು.
ಇದನ್ನೂ ಓದಿ: ವಿಶ್ವ ಹಾಲು ದಿನ; ಕೋಟ್ಯಂತರ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾದ ಕ್ಷೀರೋದ್ಯಮ
ಮಕ್ಕಳನ್ನು ಬೆಳೆಸುವಲ್ಲಿ ಹಾಗೂ ಮಕ್ಕಳ ಬದುಕನ್ನು ರೂಪಿಸುವ ಈ ಪೋಷಕರ ಪಾತ್ರವನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಜಾಗತಿಕ ಫೋಷಕರ ದಿನವು ಮಹತ್ವದ್ದಾಗಿದೆ. ಈ ದಿನದಂದು ವಿವಿಧ ದೇಶಗಳಲ್ಲಿ ಮಕ್ಕಳು ತಂದೆ ತಾಯಂದಿರಿಗೆ ಶುಭಾಶಯಗಳನ್ನು ಕೋರಿ, ಉಡುಗೊರೆಯನ್ನು ನೀಡುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 9:19 am, Sat, 1 June 24