ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ರವೆ ಇಡ್ಲಿ, ಗೋಧಿ ಹಿಟ್ಟಿನ ಇಡ್ಲಿ, ಮಲ್ಲಿಗೆ ಇಡ್ಲಿ, ಅವಲಕ್ಕಿ ಹಾಕಿ ಹೀಗೆ ವಿವಿಧ ರೀತಿಯ ಇಡ್ಲಿ ರೆಸಿಪಿಯನ್ನು ಸವಿದ್ದಿರಬಹುದು. ಅದಲ್ಲದೇ ಈಗಂತೂ ಇಡ್ಲಿಯಲ್ಲಿ ನಾನಾ ರೀತಿಯ ವೆರೈಂಟಿಗಳು ಬಂದಿದ್ದು, ಅದರಲ್ಲಿ ಒಂದು ಈ ಗೋಲಿ ಇಡ್ಲಿ. ನೋಡುವುದಕ್ಕೆ ರಸಗುಲ್ಲಾದಂತಿದ್ದು, ಮೃದುವಾಗಿರುವ ಈ ತಿನಿಸು ಮಸಾಲೆಯ ಸುವಾಸನೆಯಿಂದಾಗಿ ಒಮ್ಮೆ ತಿಂದರೆ ಮತ್ತೆ ತಿನ್ನಬೇಕೇನಿಸುತ್ತದೆ. ಮಾಡುವುದಕ್ಕೂ ಸ್ವಲ್ಪ ಸಮಯ ತೆಗೆದುಕೊಳ್ಳುವ ಈ ತಿಂಡಿಯನ್ನು ಎಲ್ಲರೂ ಇಷ್ಟ ಪಟ್ಟೆ ಇದನ್ನು ಸವಿಯುತ್ತಾರೆ.
* ಅಕ್ಕಿ ಹಿಟ್ಟು
* ಶುಂಠಿ
* ಕರಿಬೇವು
* ಎಣ್ಣೆ
* ಇಂಗು
* ಉದ್ದಿನ ಬೇಳೆ
* ಕಡಲೆ ಬೇಳೆ
* ಹಸಿ ಮೆಣಸು
* ತುಪ್ಪ
ಇದನ್ನೂ ಓದಿ: ಕೇರಳದ ಸ್ಪೆಷಲ್ ಹಬ್ಬದೂಟ ‘ಓಣಂ ಸದ್ಯ’, ಬೆಂಗಳೂರಿನ ಈ ತಾಣಗಳಲ್ಲಿ ಸಿಗುತ್ತೆ ವಿಶಿಷ್ಟ ಭೋಜನ
* ಸ್ಟವ್ ಮೇಲೆ ಒಂದು ಪಾತ್ರೆಯನ್ನಿಟ್ಟು ಅರ್ಧ ಗ್ಲಾಸ್ ನೀರು ಹಾಕಿ, ಆ ನೀರಿಗೆ ಉಪ್ಪು ತುಪ್ಪ ಹಾಕಿ ಚೆನ್ನಾಗಿ ಕುದಿಯಲು ಬಿಡಿ.
* ಬಳಿಕ ಅದಕ್ಕೆ ಒಂದೂವರೆ ಬಟ್ಟಲು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ ಈ ಹಿಟ್ಟು ಹುಡಿ ಹುಡಿಯಾಗುವವರೆಗೂ ಬೇಯಿಸಿಕೊಳ್ಳಿ.
* ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟು ನಂತರ ಮೃದುವಾದ ಹಿಟ್ಟನ್ನು ಮಾಡಿಕೊಳ್ಳಿ. ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಹಬೆಯಲ್ಲಿ ಬೇಯಿಸಿಕೊಳ್ಳಿ.
* ತದನಂತರದಲ್ಲಿ ಸ್ಟವ್ ಮೇಲೆ ಒಂದು ಪಾತ್ರೆಯನ್ನಿಟ್ಟು ಎಣ್ಣೆ ಹಾಕಿ ಕಾಯುತ್ತಿದ್ದಂತೆ ಸಾಸಿವೆ, ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
* ಆ ಬಳಿಕ ಇದಕ್ಕೆ ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈಗಾಗಲೇ ಬೇಯಿಸಿಕೊಂಡ ಇಡ್ಲಿಯನ್ನು ಹಾಕಿ ಕೈಯಾಡಿಸಿದರೆ ರುಚಿಕರವಾದ ಗೋಲಿ ಇಡ್ಲಿ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ