Tips for Success : ಈ ಎಲ್ಲವನ್ನು ಎಲ್ಲರಿಗೂ ಹೇಳ್ಬೇಡಿ , ಇದೇ ನೋಡಿ ಯಶಸ್ಸಿನ ಸೀಕ್ರೆಟ್
ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಬಯಸುತ್ತಾರೆ. ಆದರೆ ಕೆಲವರು ಮಾಡುವ ಈ ತಪ್ಪುಗಳಿಂದ ತಾವಂದುಕೊಂಡಂತೆ ಬದುಕುವುದು ದೂರದ ಮಾತಾಗಿರುತ್ತದೆ. ಆದರೆ ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ಕೆಲವು ನಿಯಮ ಪಾಲಿಸಿಬೇಕು ಎನ್ನಲಾಗಿದೆ. ಹಾಗಾದ್ರೆ ಯಶಸ್ಸಿನ ಸೀಕ್ರೆಟ್ ಏನು, ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾರಿಗೂ ಕೂಡ ಕಷ್ಟಪಡದೇ ಯಶಸ್ಸು ಸಿಗುವುದಿಲ್ಲ. ಹೀಗಾಗಿ ಯಶಸ್ವೀ ವ್ಯಕ್ತಿಗಳೆಲ್ಲರ ಜೀವನವನ್ನು ನೋಡಿದಾಗ ಅವರು ಒಂದಷ್ಟು ನಿಯಮಗಳನ್ನು ಪಾಲಿಸುತ್ತಾರೆ. ಅದಲ್ಲದೇ ಈ ಕೆಲವು ವಿಚಾರಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಹಾಗಾದ್ರೆ ನಾವು ಅಂದುಕೊಂಡ ಗುರಿಯನ್ನು ತಲುಪಬೇಕಾದರೆ ಈ ನಿಯಮಗಳನ್ನು ಪಾಲಿಸುವುದು ಬಹುಮುಖ್ಯ.
* ರಹಸ್ಯಗಳನ್ನು ಕಾಪಾಡಿಕೊಳ್ಳಿ: ಕೆಲವರಿಗೆ ಎಲ್ಲವನ್ನು ಹೇಳಿ ಬಿಡುವ ಅಭ್ಯಾಸವಿರುತ್ತದೆ. ಆದರೆ ಯಶಸ್ಸು ಗಳಿಸಬೇಕೆಂದುಕೊಂಡವರು ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಕೆಲವು ವಿಚಾರಗಳನ್ನು ಯಾರಿಗೂ ಕೂಡ ಹೇಳಿಕೊಳ್ಳದೆ ನೀವಂದುಕೊಂಡ ಕೆಲಸವನ್ನು ಮಾಡಿ. ವೈಯುಕ್ತಿಕ ಮಾಹಿತಿಗಳು ನಿಮಗಷ್ಟೇ ತಿಳಿದಿದ್ದರೆ ಸಾಕು. ಇದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.
* ಇತರರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ: ಜೀವನದಲ್ಲಿ ಯಶಸ್ಸು ಗಳಿಸಬೇಕೆಂದರೆ ಮೊದಲು ಬೇರೆಯವರ ಅಭಿಪ್ರಾಯಗಳಿಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಡಬೇಕು. ಅವರು ಹಾಗೆ ಅಂದುಕೊಳ್ಳುತ್ತಾರೆ, ಇವರು ಹೀಗೆ ಮಾತನಾಡುತ್ತಾರೆ ಎಂದು ಗಮನಿಸಿದರೆ ನಿಮ್ಮ ಸಮಯವು ಹಾಳಾಗುತ್ತದೆ. ನಿಮ್ಮ ಯಶಸ್ಸನ್ನು ಸಹಿಸಲಾಗದೇ ಅಭಿಪ್ರಾಯವನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಿರುತ್ತದೆ.
* ವೈಯಕ್ತಿಕ ನಿರ್ಧಾರಗಳ ಕುರಿತು ಚರ್ಚೆ ಬೇಡ: ಯಾವುದಾದರೂ ಕೆಲಸಕ್ಕೆ ಕೈ ಹಾಕುವ ಮುನ್ನ ಅದಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ಕೈ ಗೊಳ್ಳುವುದು ಸಹಜ. ಆದರೆ ಈ ಕೆಲವು ನಿರ್ಧಾರ ಗಳ ಬಗ್ಗೆ ಬೇರೆಯಾವರೊಂದಿಗೆ ಚರ್ಚಿಸುವುದಿದೆ. ಈ ಕೆಲಸವನ್ನು ಮಾಡಲೇಬೇಡಿ. ಕೆಲವೊಮ್ಮೆ ನಿಮ್ಮ ನಿರ್ಧಾರ ಸರಿಯಿದ್ದು, ಇತರರು ಅವರ ಅಭಿಪ್ರಾಯವನ್ನು ತಿಳಿಸಿ ನಿಮ್ಮ ಕೆಲಸವು ಪೂರ್ಣಗೊಳ್ಳದ ರೀತಿ ಮಾಡಬಹುದು.
* ಆರೋಗ್ಯದ ಬಗ್ಗೆ ಕಾಳಜಿಯಿರಲಿ : ನಾವು ಅಂದುಕೊಂಡದ್ದನ್ನು ಸಾಧಿಸಬೇಕೆನ್ನುವ ಭರದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಆರೋಗ್ಯಕ್ಕಿಂತ ದೊಡ್ಡದಾದ ಸಿರಿ ಸಂಪತ್ತು ಮತ್ತೊಂದಿಲ್ಲ. ಹೀಗಾಗಿ ಊಟ ತಿಂಡಿ, ನಿದ್ದೆ, ವಿಶ್ರಾಂತಿ ಈ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ಆರೋಗ್ಯವಿದ್ದರೆ ಯಾವಾಗ ಬೇಕಾದರೂ ಗುರಿಯನ್ನು ಮುಟ್ಟಬಹುದು
* ಅದೃಷ್ಟವನ್ನೇ ನಂಬಿ ಕೂರುವುದು ಸರಿಯಲ್ಲ : ಕೆಲವರು ಅದೃಷ್ಟವನ್ನೇ ನಂಬಿ ಕೂರುತ್ತಾರೆ. ಆದರೆ ಈ ಅದೃಷ್ಟವು ಎಲ್ಲಾ ಸಮಯದಲ್ಲಿಯೂ ಕೈಹಿಡಿಯುವುದಿಲ್ಲ. ಕಷ್ಟ ಪಟ್ಟು ದುಡಿಯುವುದು ಕೂಡ ಯಶಸ್ಸಿನ ಮೂಲ ನಿಯಮ. ಕೆಲವೊಮ್ಮೆ ಅದೃಷ್ಟ ಜೊತೆಗಿಲ್ಲದಿದ್ದರೂ ಶ್ರಮ ವಹಿಸಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು.
* ಬೇರೆಯವರ ಅನುಮತಿ, ನಿರ್ಧಾರಕ್ಕೆ ಕಾಯಬೇಡಿ : ನೀವು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ, ಶ್ರಮವಹಿಸಿ ಮಾಡುವುದು ಮುಖ್ಯ. ಬೇರೆಯವರ ಅನುಮತಿ ಹಾಗೂ ನಿರ್ಧಾರದ ಬಗ್ಗೆ ಕೇಳುವುದು ಸರಿಯಲ್ಲ. ಇದರಿಂದ ನಿಮ್ಮ ನಿರ್ಧಾರಗಳು ಹಾಗೂ ಬೇರೆಯವರ ನಿರ್ಧಾರಗಳಲ್ಲಿ ಕೇಳಿ ಕೊಂಡು ಗೊಂದಲ ಉಂಟಾಗಬಹುದು. ಇದರಿಂದ ಸುಮ್ಮನೆ ಸಮಯ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚು.
* ಹಣದ ಹಿಂದೆ ಹೋಗಬೇಡಿ : ಯಶಸ್ವಿ ಜೀವನದ ನಿಯಮಗಳಲ್ಲಿ ಇದನ್ನು ಮುಖ್ಯವಾಗಿ ಪಾಲಿಸಬೇಕು. ಹಣದ ಹಿಂದೆ ಹೋಗುವವರು ಕೆಲವೇ ಹಣಕ್ಕೆ ಮಾತ್ರ ಬೆಲೆ ಕೊಡುತ್ತಾರೆ. ದುಡ್ಡು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಶ್ರಮವಹಿಸಿ ಪ್ರಾಮಾಣಿಕವಾಗಿ ಗುರಿಯತ್ತ ಮುನ್ನುಗ್ಗಿ ದುಡ್ಡು ತಾನಾಗಿಯೇ ನಿಮ್ಮ ಹಿಂದೆ ಬರುತ್ತದೆ.
* ಸಂಬಳದ ಬಗ್ಗೆ ಯಾರೊಂದಿಗೂ ಹೇಳಬೇಡಿ : ನಿಮ್ಮ ಗಳಿಕೆಯ ಬಗ್ಗೆ ಯಾರೊಂದಿಗೂ ಹೇಳಬಾರದಂತೆ. ನಿಮ್ಮ ಸಂಬಳದ ಬಗ್ಗೆ ತಿಳಿದರೆ ಕೆಲವರಿಗೆ ಸಹಿಸಿ ಕೊಳ್ಳಲು ಸಾಧ್ಯವಾಗದೇ ನಿಮ್ಮ ಜೀವನದ ಯಶಸ್ಸಿಗೆ ಮುಳುವಾಗುವ ಸಾಧ್ಯತೆಯೇ ಅಧಿಕವಂತೆ. ಹೀಗಾಗಿ ಈ ವಿಷಯಗಳ ಬಗ್ಗೆ ಹೇಳಿಕೊಳ್ಳುವ ಮುನ್ನ ಎಚ್ಚರವಹಿಸಿ.
ಇದನ್ನೂ ಓದಿ: ಅಲಾರಂ ಆಗದ ಹೊರತು ಎಚ್ಚರ ಆಗೋದಿಲ್ವಾ? ಈ ಅಪಾಯ ತಪ್ಪಿದ್ದಲ್ಲ
* ಮನಸ್ಸನ್ನು ನಿಯಂತ್ರಿಸಿ : ಮನಸ್ಸು ಮಂಗನಂತೆ, ಒಂದು ಕ್ಷಣ ಇದ್ದಂತೆ ಮತ್ತೊಂದು ಕ್ಷಣವಿರುವುದಿಲ್ಲ. ಹೀಗಾಗಿ ನಿಮ್ಮ ಗುರಿಯನ್ನು ಸಾಧಿಸಲು ಮನಸ್ಸನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಲೆ ಗೊತ್ತಿರಬೇಕು. ಹೀಗಿದ್ದರೆ ಮಾತ್ರ ಯಶಸ್ವಿ ಜೀವನವು ನಿಮ್ಮದಾಗಲು ಸಾಧ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ