Onam Sadhya In Banglore 2024: ಕೇರಳದ ಸ್ಪೆಷಲ್ ಹಬ್ಬದೂಟ ‘ಓಣಂ ಸದ್ಯ’, ಬೆಂಗಳೂರಿನ ಈ ತಾಣಗಳಲ್ಲಿ ಸಿಗುತ್ತೆ ವಿಶಿಷ್ಟ ಭೋಜನ
ಕೇರಳದ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದು ಈ ಓಣಂ. ವಿಷ್ಣುವಿನ ಅವತಾರವಾದ ವಾಮನ ದೇವರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಕೇರಳಿಗರು ಈ ಹಬ್ಬವನ್ನು 10 ದಿನಗಳ ಕಾಲ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಓಣಂ ಹಬ್ಬದಲ್ಲಿ ತಯಾರಿಸಲಾಗುವ ಈ ವಿಶೇಷ ಭೋಜನವನ್ನು ಓಣಂ ಸದ್ಯ ಎಂದು ಕೂಡ ಕರೆಯಲಾಗುತ್ತದೆ. ನೀವೇನಾದರೂ ಬೆಂಗಳೂರಿನಲ್ಲಿದ್ದರೆ ಈ ಬಾರಿಯ ಓಣಂ ಭೋಜನವನ್ನು ಸವಿಯಲು ಈ ತಾಣಗಳಿಗೆ ಭೇಟಿ ನೀಡಬಹುದು.
ದೇವರನಾಡು ಕೇರಳದ ವಿಶೇಷ ಖಾದ್ಯ ಈ ಓಣಂ. ಈ ಬಾರಿ ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 15 ರವರೆಗೆ ಸರಿಸುಮಾರು ಹತ್ತು ದಿನಗಳ ಕಾಲ ಈ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷತೆಯೆಂದರೆ ಬಗೆ ಬಗೆಯ ಖಾದ್ಯಗಳು. ಓಣಂ ಔತಣವನ್ನು ಸದ್ಯ ಎಂದು ಕೂಡ ಕರೆಯಲಾಗುತ್ತದೆ. ಬೆಂಗಳೂರಿನ ಹಲವು ರೆಸ್ಟೋರೆಂಟ್‌ಗಳಲ್ಲಿ ಓಣ ಸದ್ಯ ಸಿಗಲಿದೆ. ಇದುವರೆಗೆ ಓಣಂ ಸದ್ಯ ಟ್ರೈ ಮಾಡದಿದ್ದರೆ ಒಮ್ಮೆ ಟ್ರೈ ಮಾಡಬಹುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬೆಂಗಳೂರಿನ ಈ ತಾಣಗಳಿಗೆ ತೆರಳಿದರೆ ಕೇರಳದ ಅತ್ಯುತ್ತಮವಾದ ಅಡುಗೆಗಳನ್ನು ನೀವು ಸಹ ಸವಿಯಬಹುದಾಗಿದೆ.
* ಬೆಂಗಳೂರು ಮ್ಯಾರಿಯಟ್ ಹೋಟೆಲ್ ವೈಟ್‌ಫೀಲ್ಡ್ : ಓಣಂ ಹಬ್ಬದ ರೋಮಾಂಚಕ ಅನುಭವವನ್ನು ಪಡೆಯಲು ಹಬ್ಬದಡುಗೆಯನ್ನು ಸವಿಯಲು, ಬೆಂಗಳೂರಿನ ಮ್ಯಾರಿಯಟ್ ಹೋಟೆಲ್ ವೈಟ್‌ಫೀಲ್ಡ್ ಗೆ ತೆರಳಬಹುದು. ಹಬ್ಬದ ಭೋಜನ ಸವಿಯಬೇಕೆನ್ನುವವರಿಗೆ ಈ ಹೋಟೆಲ್ ಓಣಂ ಸದ್ಯ ಔತಣಕ್ಕಾಗಿ ಭೋಜನ ಪ್ರಿಯರನ್ನು ಸ್ವಾಗತಿಸುತ್ತಿದೆ. ಸೆಪ್ಟೆಂಬರ್ 05 ರಿಂದ ಸೆಪ್ಟೆಂಬರ್ 15, ಅಂದರೆ 10 ದಿನಗಳ ಕಾಲ ಅವಿಲ್, ಎಳನೀರ್ ಮತ್ತು ಕೂಟು ಕರಿ ಸೇರಿದಂತೆ ವಿವಿಧ ಖಾದ್ಯಗಳು ಇಲ್ಲಿ ಸವಿಯಲು ಸಿದ್ಧವಿದೆ.
* ಶೆರಟನ್ ಗ್ರ್ಯಾಂಡ್ ಬೆಂಗಳೂರು ವೈಟ್‌ಫೀಲ್ಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ : ಶೆರಟಾನ್ ಗ್ರ್ಯಾಂಡ್ ತಮ್ಮ ರುಚಿಕರವಾದ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಓಣಂ ಹಬ್ಬದಡುಗೆಯನ್ನು ಇಲ್ಲಿ ಸವಿಯಬಹುದು. ಸೆಪ್ಟೆಂಬರ್ 15 ರಂದು ನಿಮ್ಮ ಟೇಬಲ್‌ಗಳನ್ನು ಬುಕ್ ಮಾಡಿ ಕುಟುಂಬದ ಸದಸ್ಯರೊಂದಿಗೆ ಭೋಜನ ಸವಿಯಬಹುದು. * ಹಯಾತ್ ಸೆಂಟ್ರಿಕ್ ಎಂಜಿ ರಸ್ತೆ ಬೆಂಗಳೂರು : ಬೆಂಗಳೂರಿನ ಎಂಜಿ ರೋಡ್ ಬಳಿಯಿರುವ ಹಯಾಟ್ ಸೆಂಟ್ರಿಕ್ ಓಣಂ ಹಬ್ಬದ ಅಡುಗೆಯನ್ನು ಸವಿಯುವುದಕ್ಕೆ ಗ್ರಾಹಕರನ್ನು ಆಹ್ವಾನಿಸಲು ಸಿದ್ಧವಾಗಿದೆ. ಓಣಂ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 15 ರಂದು ಟಿಫಿನ್ ಟ್ರೇಟ್, ಸಾಂಪ್ರದಾಯಿಕ ಕೇರಳದ ಖಾದ್ಯಗಳಿಂದ ತುಂಬಿದ ಓಣಂ ಪವರ್ ಮೀಲ್, ಸ್ಟಾರ್ಟರ್ ಗಳನ್ನು ಒಳಗೊಂಡ 3- ಕೋರ್ಸ್ ಸೆಟ್ ಮೆನು, ಮುಖ್ಯ ಕೋರ್ಸ್ ಹಾಗೂ ಸಿಹಿತಿಂಡಿಯನ್ನು ನೀಡಲು ಮುಂದಾಗಿದೆ.
* ಕಪ್ಪ ಚಕ್ಕ ಕಂಧಾರಿ, ಕೋರಮಂಗಲ : ಬೆಂಗಳೂರಿನಲ್ಲಿರುವ ಅಚ್ಚುಮೆಚ್ಚಿನ ಕೇರಳದ ರೆಸ್ಟೋರೆಂಟ್ ಕಪ್ಪಾ ಚಕ್ಕ ಕಂಧಾರಿ ಓಣಂ ಸದ್ಯ ಅನುಭವವನ್ನು ನೀಡಲು ಸಜ್ಜಾಗಿದೆ. ನಿಮ್ಮ ಮನೆಯಲ್ಲಿರುವ ಸೌಕರ್ಯವು ಈ ರೆಸ್ಟೋರೆಂಟ್‌ನಲ್ಲಿದ್ದು, ಹಬ್ಬದ ಊಟವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯೂ ಸೆಪ್ಟೆಂಬರ್ 14 ಮತ್ತು 15 ರಂದು ಲಭ್ಯವಿದ್ದು, ವಿವಿಧ ಖಾದ್ಯಗಳನ್ನು ಸವಿಯಬಹುದು.
ಇದನ್ನೂ ಓದಿ: ಲವ್ ಪ್ರಪೋಸ್ ಮಾಡಿದ ಕೂಡ್ಲೇ ಹುಡುಗಿಯರು ಈ ಕಾರಣದಿಂದಲೇ ಓಕೆ ಹೇಳಲ್ವಂತೆ
* ಕ್ವಾಟ್ರೊ, ಲೀಲಾ ಭಾರತೀಯ ನಗರ : ಲೀಲಾ ಭಾರತೀಯ ನಗರದಲ್ಲಿರುವ ಉನ್ನತ ಮಟ್ಟದ ರೆಸ್ಟೋರೆಂಟ್ ಕ್ವಾಟ್ರೊದಲ್ಲಿ ಈ ಬಾರಿಯ ಓಣಂಗೆ ವಿಶೇಷ ಸದ್ಯದ ಜೊತೆಗೆ ವರ್ಣರಂಜಿತ ಓಣಂ ಹಬ್ಬದ ಅನುಭವವನ್ನು ತಂದು ಕೊಡುವ ಮೂಲಕ ವೈವಿಧ್ಯಮಯ ಖಾದ್ಯಗಳನ್ನು ನೀಡಲು ಮುಂದಾಗಿದೆ. ಪ್ರತಿ ಖಾದ್ಯವನ್ನು ತಾಜಾ ತೆಂಗಿನಕಾಯಿ, ಮಸಾಲೆಗಳು ಮತ್ತು ಕೇರಳದ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಇಲ್ಲಿಗೆ ಬಂದರೆ ಹಬ್ಬದಡುಗೆಯ ರುಚಿ ಸವಿಯದರೊಂದಿಗೆ ಖುಷಿಯಿಂದ ಆತ್ಮೀಯರೊಂದಿಗೆ ಸಮಯ ಕಳೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Sat, 7 September 24