Relationship Tips : ಲವ್ ಪ್ರಪೋಸ್ ಮಾಡಿದ ಕೂಡ್ಲೇ ಹುಡುಗಿಯರು ಈ ಕಾರಣದಿಂದಲೇ ಓಕೆ ಹೇಳಲ್ವಂತೆ
ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ, ಈ ಪ್ರೀತಿ’ ಎಂಬ ಪದ ಚಿಕ್ಕದಿರಬಹುದು. ಆದರೆ ಈ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವದ್ದಾಗಿದೆ. ಆದರೆ ಹುಡುಗಿಯರು ತಕ್ಷಣಕ್ಕೆ ಹುಡುಗರ ಪ್ರೀತಿ ಗೆ ಓಕೆ ಹೇಳುವುದೇ ಇಲ್ಲ. ಈ ಅನುಭವವು ಎಷ್ಟೋ ಹುಡುಗರಿಗೆ ಆಗಿರುತ್ತದೆ. ಲವ್ ಪ್ರಪೋಸ್ ಮಾಡಿದ ಕೂಡಲೇ ಹುಡುಗಿಯೂ ಓಕೆ ಹೇಳಲ್ಲ. ಅದಕ್ಕೆ ಈ ಕೆಲವು ಕಾರಣಗಳು ಸೇರಿರಬಹುದು.
ನಮಗೆ ಯಾರಾದರೂ ಇಷ್ಟವಾದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದಕ್ಕಿಂತ ಹೇಳಿ ಬಿಟ್ಟರೆ ಮನಸ್ಸಿಗೆ ನೆಮ್ಮದಿ. ಆ ಬಳಿಕ ಅವರಿಗೂ ನೀವು ಇಷ್ಟವಾದರೆ ಸಂಬಂಧ ಮುಂದುವರಿಯುತ್ತದೆ. ಇಲ್ಲವಾದರೆ ಮನಸ್ಸಿಗೆ ಖಂಡಿತ ಬೇಜಾರುಗುತ್ತದೆ. ಆದರೆ ಕೆಲವೊಮ್ಮೆ ಹುಡುಗನು ಪ್ರೇಮನಿವೇದನೆ ಮಾಡಿಕೊಂಡರೂ, ಹುಡುಗಿಯೂ ತಕ್ಷಣವೇ ಉತ್ತರಿಸಲ್ಲ. ಅತ್ತ ಓಕೆ ಹೇಳದೇನೇ, ನೋ ಹೇಳದೇನೇ ಕಾಯಿಸುವುದಿದೆ. ಆದರೆ ಈ ವೇಳೆಯಲ್ಲಿ ಹುಡುಗಿಯೂ ಈ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
- ಹುಡುಗಿಯೂ ಹುಡುಗನ ಪ್ರೀತಿಗೆ ತಕ್ಷಣವೇ ಒಪ್ಪಿಗೆ ಸೂಚಿಸದೇ ಇರುವುದಕ್ಕೆ ಆತನ ಗುಣ ಸ್ವಭಾವ ಹೇಗಿದೆ ಎನ್ನುವ ಭಯ ಆಕೆಯಲ್ಲಿ ಇರುತ್ತದೆ. ಆತನು ಒಳ್ಳೆಯವನೇ ಎಂದು ಪರೀಕ್ಷಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಾಳೆ. ಆತನ ಗುಣವನ್ನು ಪರೀಕ್ಷಿಸಿ ಹುಡುಗನು ಒಳ್ಳೆಯವನಾಗಿದ್ದರೆ ಆಕೆಯಿಂದ ಪ್ರೀತಿಗೆ ಸಮ್ಮತಿ ಸಿಗುತ್ತದೆ.
- ತನ್ನನ್ನು ಪ್ರೀತಿಸುವ ಹುಡುಗನ ಪ್ರೀತಿಯೂ ನಿಜವೇ ಅಥವಾ ಸುಳ್ಳಾ, ಟೈಮ್ ಪಾಸ್ ಪ್ರೀತಿ ಮಾಡಲು ತನ್ನ ಹಿಂದೆ ಬಿದ್ದಿದ್ದಾನೆಯೇ ಎಂದು ತಿಳಿದುಕೊಳ್ಳುವ ಸಲುವಾಗಿ ತಕ್ಷಣವೇ ಯಾವುದೇ ಪ್ರತಿಕ್ರಿಯೆಯನ್ನು ಕೊಡುವುದಿಲ್ಲ.
- ಹುಡುಗನು ಲವ್ ಪ್ರಪೋಸ್ ಮಾಡಿದ ಕೂಡಲೇ ತನ್ನ ಮನೆಯವರು ಹೇಗೆ ಪ್ರತಿಕ್ರಿಯೆ ನೀಡಬಹುದು ಎನ್ನುವ ಭಯವೊಂದು ಆಕೆಯಲ್ಲಿ ಕಾಡುತ್ತದೆ. ಹೀಗಾಗಿ ಹುಡುಗಿಯೂ ಹುಡುಗನನ್ನು ಎಲ್ಲಾ ರೀತಿಯಿಂದಲು ಪರೀಕ್ಷಿಸಿ ಮನೆಯವರು ಪ್ರೀತಿ ಪ್ರೇಮ ಬೆಂಬಲವಿದ್ದರೆ ಮಾತ್ರ ಸಮ್ಮತಿ ಸೂಚಿಸುತ್ತಾಳೆ.
- ಈಗಿನ ಕಾಲದಲ್ಲಿ ಒಳ್ಳೆಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡು ಪ್ರೀತಿಗೆ ಬೀಳಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಹುಡುಗನ ಹಿನ್ನಲೆಯ ಜೊತೆಗೆ ಆತನ ಕುಟುಂಬದ ಬಗ್ಗೆ ತಿಳಿದುಕೊಂಡು ಎಲ್ಲಾ ರೀತಿಯಲ್ಲಿ ಹೊಂದಾಣಿಕೆ ಆದರೆ ಮಾತ್ರ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡುತ್ತಾಳೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ