ಯೂರಿಕ್ ಆ್ಯಸಿಡ್ ರೂಪುಗೊಳ್ಳಲು ಕಾರಣವೇನು? ನೋವು ನಿವಾರಣೆ ಹೇಗೆ?
ಪ್ಯೂರಿನ್ಸ್ ಎಂಬ ಧಾತುವು ವಿಘಟನೆಗೊಂಡು ದೇಹದಲ್ಲಿ ರೂಪುಗೊಂಡಾಗ ಯೂರಿಕ್ ಆ್ಯಸಿಡ್ ರೂಪುಗೊಳ್ಳುತ್ತದೆ. ಕೆಟ್ಟ
ಪ್ಯೂರಿನ್ಸ್ ಎಂಬ ಧಾತುವು ವಿಘಟನೆಗೊಂಡು ದೇಹದಲ್ಲಿ ರೂಪುಗೊಂಡಾಗ ಯೂರಿಕ್ ಆ್ಯಸಿಡ್ ರೂಪುಗೊಳ್ಳುತ್ತದೆ. ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರದಿಂದ, ಇತ್ತೀಚಿಗೆ ಜನರು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪ್ಯೂರಿನ್ಸ್ ಎಂಬ ಧಾತುವು ವಿಘಟನೆಗೊಂಡು ದೇಹದಲ್ಲಿ ರೂಪುಗೊಂಡಾಗ ಯೂರಿಕ್ ಆಸಿಡ್ ರೂಪುಗೊಳ್ಳುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾದಾಗ, ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ.
ಯೂರಿಕ್ ಯಾಸಿಡ್ ರಚನೆಯು ಹೊಸ ವಿಷಯವಲ್ಲ. ಇದು ನಮ್ಮೆಲ್ಲರ ದೇಹದಲ್ಲಿ ತಯಾರಾಗುತ್ತದೆ. ಯೂರಿಕ್ ಆ್ಯಸಿಡ್ ರೂಪುಗೊಂಡಾಗ ಇದು ಗೌಟ್ಗೆ ಕಾರಣವಾಗಿದೆ. ಗೌಟ್ ಎಂದರೆ ಕೀಲು ನೊಪ್ಪುಗಳು ಜಾಯಿಂಟ್ಗಳನ್ನು ಜಾಮ್ ಮಾಡುವುದು ಇತ್ಯಾದಿ.
ಯೂರಿಕ್ ಆ್ಯಸಿಡ್ ಸಾಮಾನ್ಯವಾಗಿ ಪ್ರೋಟೀನ್ (protein) ಸಮೃದ್ಧವಾಗಿರುವ ಆಹಾರಗಳೊಂದಿಗೆ ಸಂಬಂಧ ಹೊಂದಿದೆ, ಆದರೆ ಇತ್ತೀಚಿನ ಅಧ್ಯಯನಗಳು ಸಕ್ಕರೆಯಿಂದಾಗಿಯೂ ಯೂರಿಕ್ ಆಸಿಡ್ ಹೆಚ್ಚಾಗುತ್ತೆ ಎಂದು ತಿಳಿಸಿದೆ.
ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗುತ್ತದೆ. ಇದು ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತದೆ. ನಿಮ್ಮ ಕಿಡ್ನಿ ಮೊದಲು ಯೂರಿಕ್ ಆಸಿಡ್ ಮತ್ತು ಇತರ ತ್ಯಾಜ್ಯಗಳ ಬದಲಿಗೆ ಮದ್ಯಪಾನನಿಂದ ಉಂಟಾಗುವ ಉತ್ಪನ್ನಗಳನ್ನು ಫಿಲ್ಟರ್ ಮಾಡಬೇಕಾಗಿರುವುದರಿಂದ ಯೂರಿಕ್ ಆಸಿಡ್ ಹೆಚ್ಚುತ್ತದೆ. ಬಿಯರ್ ನಂತಹ ಆಲ್ಕೋಹಾಲ್ ಹೆಚ್ಚಿನ ಪ್ರಮಾಣದ ಪ್ಯೂರಿನ್ ಗಳನ್ನು ಹೊಂದಿರುತ್ತದೆ.
ನಿಮ್ಮ ಆಹಾರದಲ್ಲಿ ಹೆಚ್ಚಿನ ಸಕ್ಕರೆ, ಕಾರ್ನ್ ಸಿರಪ್ ಮತ್ತು ಇತರ ವಸ್ತುಗಳನ್ನು ಬಳಸೋದ್ರಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಿಸುತ್ತೆ. ಸಂಸ್ಕರಿಸಿದ ಆಹಾರಗಳು ಸಕ್ಕರೆ ಫ್ರಕ್ಟೋಸ್ ಅನ್ನು ಹೊಂದಿದ್ದು, ಇದು ಒಂದು ರೀತಿಯ ಸಾಮಾನ್ಯ ಸಕ್ಕ. ಈ ಸಕ್ಕರೆಗಳು ಯೂರಿಕ್ ಆಸಿಡ್ ಗೆ ಕಾರಣವಾಗುತ್ತೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಲ್ಲದೆ, ಶುಗರ್ ಡ್ರಿಂಕ್ಸ್, ಸೋಡಾಗಳು ಮತ್ತು ಹಣ್ಣಿನ ಜ್ಯೂಸ್ ಸಹ ಸಕ್ಕರೆಯನ್ನು ಹೊಂದಿರುತ್ತವೆ.
ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ಕಿಡ್ನಿ ಯೂರಿಕ್ ಆಮ್ಲವನ್ನು ತ್ವರಿತವಾಗಿ ಹೊರ ಹಾಕಲು ಸಾಧ್ಯವಾಗುತ್ತದೆ. ಹಾಗಾಗಿ ಯಾವಾಗಲೂ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.
ನೀವು ಅಧಿಕ ತೂಕ ಹೊಂದಿದ್ದರೆ, ಅದು ಯೂರಿಕ್ ಆಸಿಡ್ ಅನ್ನು ಹೆಚ್ಚಿಸುತ್ತೆ, ಕೊಬ್ಬಿನ ಕೋಶಗಳು ಸ್ನಾಯು ಕೋಶಗಳಿಗಿಂತ ಹೆಚ್ಚು ಯೂರಿಕ್ ಆ್ಯಸಿಡ್ ತಯಾರಿಸುತ್ತವೆ. ಇದಲ್ಲದೆ, ಅಧಿಕ ತೂಕ ಹೊಂದಿರುವುದು ನಿಮ್ಮ ಕಿಡ್ನಿಗೆ ಯೂರಿಕ್ ಆಮ್ಲ ಫಿಲ್ಟರ್ ಮಾಡಲು ಕಷ್ಟವಾಗುತ್ತದೆ. ನೀವು ಅಲಾರಂ ಫಿಕ್ಸ್ ಮಾಡಿ, ಆಗಾಗ ನೀರು ಕುಡಿಯುತ್ತಿದ್ದರೆ ಉತ್ತಮ ಆರೋಗ್ಯ ಕಾಪಾಡಲು ಸಹಾಯಕವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ