AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Nanak Jayanti 2024: ಗುರುನಾನಕ್‌ ಜಯಂತಿಯ ಆಚರಣೆ, ಶುಭ ಸಮಯ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಗುರು ನಾನಕ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಸಿಖ್‌ ಧರ್ಮದ ಜನರು ಪ್ರಕಾಶ್‌ ಪರ್ವ ಅಥವಾ ಗುರ ಪರ್ಬ ಎಂಬ ಹೆಸರಿನಲ್ಲಿ ಸಿಖ್‌ ಧರ್ಮ ಗುರುಗಳಾದ ಗುರು ನಾನಕ್‌ ಅವರ ಜಯಂತಿಯನ್ನು ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಯಾರಿ ಗುರುನಾನಕ್?‌ ಗುರು ನಾನಕ್‌ ಜಯಂತಿಯ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

Guru Nanak Jayanti 2024: ಗುರುನಾನಕ್‌ ಜಯಂತಿಯ ಆಚರಣೆ, ಶುಭ ಸಮಯ  ಮತ್ತು ಮಹತ್ವದ ಬಗ್ಗೆ ತಿಳಿಯಿರಿ
Guru Nanak Jayanti
ಮಾಲಾಶ್ರೀ ಅಂಚನ್​
| Edited By: |

Updated on: Nov 14, 2024 | 6:08 PM

Share

ಗುರುನಾನಕ್‌ ಜಯಂತಿ ಸಿಖ್‌ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಸಿಖ್‌ ಧರ್ಮದ ಜನರು ಸಿಖ್ಖರ 10 ಧರ್ಮ ಗುರುಗಳಲ್ಲಿ ಮೊದಲಿಗರಾದ ಗುರುನಾನಕ್‌ ಜೀ ಅವರ ಜಯಂತಿಯನ್ನು ಪ್ರಕಾಶ್‌ ಪರ್ವ ಅಥವಾ ಗುರು ಪರ್ಬ ಎಂಬ ಹೆಸರಿನಲ್ಲಿ ಬಹಳ ಭಕ್ತಿಯಿಂದ ಶ್ರದ್ಧಾಪೂರ್ವಕವಾಗಿ ಆಚರಿಸುತ್ತಾರೆ. ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಪ್ರಕಾಶ್‌ ಪರ್ವ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ 555 ನೇ ಗುರುನಾನಕ್‌ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ಗುರು ಪರ್ಬ ಆಚರಣೆಯ ಶುಭ ಸಮಯ ಮತ್ತು ಮಹತ್ವದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಗುರು ನಾನಕ್‌ ಜಯಂತಿಯ ಮುಹೂರ್ತ:

ಈ ಬಾರಿ ನವೆಂಬರ್‌ 15 ರ ಹುಣ್ಣಿಮೆಯ ದಿನ ಗುರುನಾನಕ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಪೂರ್ಣಿಮಾ ತಿಥಿಯು ನವೆಂಬರ್‌ 15, 2024 ಬೆಳಗ್ಗೆ 6:19 ಕ್ಕೆ ಆರಂಭವಾಗಿ ನವೆಂಬರ್‌ 16, 2024 ರ ಬೆಳಗ್ಗೆ 2:58 ಕ್ಕೆ ಕೊನೆಗೊಳ್ಳುತ್ತದೆ.

ಯಾರೀ ಗುರು ನಾನಕ್?

ಗುರುನಾನಕ್‌ ಅವರು ಸಿಖ್‌ ಧರ್ಮದ ಸಂಸ್ಥಾಪಕರು ಮತ್ತು ಮೊದಲ ಸಿಖ್‌ ಗುರು. ಅವರು 1469 ರಲ್ಲಿ ಕಾರ್ತಿಕ ಹುಣ್ಣಿಮೆಯಂದು ಇಂದಿನ ಪಾಕಿಸ್ತಾನದ ಲಹೋರ್‌ ಬಳಿಯ ತಲ್ವಾಂಡಿಯಲ್ಲಿ ಜನಿಸಿದರು. ಈ ಸ್ಥಳವನ್ನು ನಂಕಾನಾ ಸಾಹಿಬ್‌ ಎಂದು ಕರೆಯಲಾಗುತ್ತದೆ. ಸಣ್ಣ ವಯಸ್ಸಿನಿಂದಲೇ ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದ ಇವರು ಆಧ್ಯಾತ್ಮಿಕತೆ, ಶುದ್ಧತೆ, ಪಾವಿತ್ರ್ಯತೆ, ಸತ್ಯ, ಒಳ್ಳೆಯತನ ಮತ್ತು ಭಕ್ತಿಗೆ ಹೆಚ್ಚು ಆಕರ್ಷಿತರಾಗಿದ್ದರು. ನಂತರ ಇವರು ಏಕ್‌ ಓಂಕಾರ್‌ (ದೇವರು ಒಬ್ಬನೆ), ಸಮಾನತೆ, ಭ್ರಾತೃತ್ವ, ನಮ್ರತೆ, ಸೇವೆ, ಪ್ರೀತಿ, ಸದ್ಗುಣಗಳ ಜೀವನ ಸಂದೇಶವನ್ನು ಹರಡುವ ಮೂಲಕ ಮನುಕುಲವನ್ನು ಉದ್ಧಾರ ಮಾಡುವ ಕಾರ್ಯದಲ್ಲಿ ಹಾಗೂ ಸಮಾಜ ಸುಧಾರಣೆ ಮಾಡುವಲ್ಲಿ ತಮ್ಮ ಇಡೀ ಜೀವನವನ್ನು ಕಳೆದರು. ಅವರು ತಮ್ಮ ಬೋಧನೆಗಳ ಮೂಲಕ ಸಿಖ್‌ ಧರ್ಮಕ್ಕೆ ಅಡಿಪಾಯ ಹಾಕಿದರು.

ಗುರುನಾನಕ್‌ ಜಯಂತಿಯ ಆಚರಣೆ:

ಗುರುನಾನನಕ್‌ ಜಯಂತಿಯನ್ನು ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಇದನ್ನು ಪ್ರಕಾಶ್‌ ಪರ್ವ ಅಥವಾ ಗುರು ಪರ್ಬ ಎಂದು ಕರೆಯುತ್ತಾರೆ. ಈ ದಿನದಂದು ಸಿಖ್‌ ಸಮುದಾಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹೌದು ಗುರುದ್ವಾರಗಳಲ್ಲಿ ವಿವಿಧ ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಿಖ್‌ ಸಮುದಾಯದವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸಮುದಾಯದ ಭೋಜನವಾದ ಲಂಗರ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಕೀರ್ತನೆಗಳು ಮತ್ತು ಸ್ತೋತ್ರಗಳನ್ನು ಪಠಿಸುವ ಮೂಲಕ ಮೆರವಣಿಗೆಗಳನ್ನು ಸಹ ಈ ದಿನ ಮಾಡಲಾಗುತ್ತದೆ. ಒಟ್ಟಿನಲ್ಲಿ ಪ್ರಪಂಚದಾದ್ಯಂತ ಇರುವ ಸಿಖ್ಖರು ಈ ಹಬ್ಬವನ್ನು ಬಹಳ ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ.

ಇದನ್ನೂ ಓದಿ: ನವೆಂಬರ್ 14ರಂದೇ ಮಕ್ಕಳ ದಿನಾಚರಣೆ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಗುರು ನಾನಕ್‌ ಜಯಂತಿಯ ಮಹತ್ವ:

ಗುರುನಾನಕ್‌ ಜಯಂತಿಯು ಸಿಖ್‌ ಸಮುದಾಯದಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಈ ದಿನವನ್ನು ಜನರು ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ. ಗುರುದ್ವಾರಗಳನ್ನು ಹೂವು ಹಾಗೂ ದೀಪಗಳಿಂದ ಅಲಂಕರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಗುರು ಪರ್ಬ ಹಬ್ಬವನ್ನು ಆಚರಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ