Guru Tegh Bahadur Jayanti 2022: ಗುರು ತೇಜ್ ಬಹದ್ದೂರ್ ಜಯಂತಿ; ಈ ದಿನದ ಇತಿಹಾಸ, ಮಹತ್ವ ಏನು? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: Apr 21, 2022 | 12:18 PM

Prakash Parv 2022: ಗುರು ತೇಜ್ ಬಹದ್ದೂರ್ ಅವರನ್ನು ಯೋಧ ಗುರು ಎಂದು ಸ್ಮರಿಸಲಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರು ವಿದ್ವಾಂಸ ಮತ್ತು ಕವಿಯೂ ಆಗಿದ್ದರು. ಸಿಖ್ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹಿಬ್‌ಗೆ ಹೆಚ್ಚಿನ ಕೊಡುಗೆಯನ್ನೂ ತೇಜ್ ಬಹದ್ದೂರ್ ನೀಡಿದ್ದಾರೆ.

Guru Tegh Bahadur Jayanti 2022: ಗುರು ತೇಜ್ ಬಹದ್ದೂರ್ ಜಯಂತಿ; ಈ ದಿನದ ಇತಿಹಾಸ, ಮಹತ್ವ ಏನು? ಇಲ್ಲಿದೆ ಮಾಹಿತಿ
ಗುರು ತೇಜ್ ಬಹದ್ದೂರ್ (ಸಂಗ್ರಹ ಚಿತ್ರ)
Follow us on

ಇಂದು (ಏ.21) ಸಿಖ್ ಧರ್ಮದ ಒಂಬತ್ತನೇ ಗುರು ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮದಿನೋತ್ಸವ. ಈ ದಿನವನ್ನು ‘ಗುರು ತೇಜ್ ಬಹದ್ದೂರ್ ಜಯಂತಿ 2022’ ಅಥವಾ ‘ಪ್ರಕಾಶ್ ಪರ್ವ್ 2022’ ಆಗಿ ಆಚರಿಸಲಾಗುತ್ತಿದೆ. 1621 ರಲ್ಲಿ ಜನಿಸಿದ ತೇಜ್ ಬಹದ್ದೂರ್ ಗುರು ಹರಗೋವಿಂದ್ ಅವರ ಕಿರಿಯ ಮಗ. ಗುರು ತೇಜ್ ಬಹದ್ದೂರ್ ಅವರನ್ನು ಯೋಧ ಗುರು ಎಂದು ಸ್ಮರಿಸಲಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರು ವಿದ್ವಾಂಸ ಮತ್ತು ಕವಿಯೂ ಆಗಿದ್ದರು. ಸಿಖ್ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹಿಬ್‌ಗೆ ಹೆಚ್ಚಿನ ಕೊಡುಗೆಯನ್ನೂ ತೇಜ್ ಬಹದ್ದೂರ್ ನೀಡಿದ್ದಾರೆ. ಅವರ 400ನೇ ಜನ್ಮೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 9.15ಕ್ಕೆ ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಕಾಶ್ ಪುರಬ್ ಆಚರಣೆಯಲ್ಲಿ ಭಾಗವಹಿಸುವ ಪ್ರಧಾನಿ, ತೇಜ್ ಬಹದ್ದೂರ್ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಗುರು ತೇಜ್ ಬಹದ್ದೂರ್ ಅವರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಮತ್ತು ಅವರ ಜೀವನ ಮತ್ತು ಬೋಧನೆಗಳನ್ನು ನೆನಪಿಟ್ಟುಕೊಳ್ಳಲು ಪ್ರಕಾಶ್ ಪರ್ವವನ್ನು ಆಚರಿಸಲಾಗುತ್ತದೆ. ಮೊಘಲ್ ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯ ಸಂದರ್ಭದಲ್ಲಿ ಜನರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು. ಆ ಸಮಯದಲ್ಲಿ, ಗುರು ತೇಜ್ ಬಹದ್ದೂರ್ ಬಲವಂತದ ಮತಾಂತರವನ್ನು ವಿರೋಧಿಸಿ ಹೋರಾಟ ನಡೆಸಿದರು. 1675 ರಲ್ಲಿ ದೆಹಲಿಯಲ್ಲಿ ಗುರು ತೇಜ್ ಬಹದ್ದೂರ್ ಅವರಿಗೆ ಮರಣದಂಡನೆ ವಿಧಿಸಲಾಯಿತು.

ಗುರು ತೇಜ್ ಬಹದ್ದೂರ್ ಅವರ ಮರಣದಂಡನೆ ಮತ್ತು ದಹನದ ಸ್ಥಳಗಳನ್ನು ದೆಹಲಿಯ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಮತ್ತು ಗುರುದ್ವಾರ ರಕಬ್ ಗಂಜ್ ಸಾಹಿಬ್ ಎಂದು ಸಿಖ್ ಪವಿತ್ರ ಸ್ಥಳಗಳಾಗಿ ಪರಿವರ್ತಿಸಲಾಯಿತು. ಅವರನ್ನು ಗಲ್ಲಿಗೇರಿಸಿದ ದಿನವಾದ ನವೆಂಬರ್ 24 ರಂದು ಗುರು ತೇಜ್ ಬಹದ್ದೂರ್ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: PM Modi Address Today: ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಭಾಷಣ

ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, ಸಿಎಂ ಬೊಮ್ಮಾಯಿಯವರಿಂದ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ