PM Modi Address Today: ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಭಾಷಣ
Guru Tegh Bahadur Jayanti 2022: ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್ 21) ರಾತ್ರಿ 9.15ಕ್ಕೆ ಸಿಖ್ ಗುರು ತೇಜ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪುರಬ್ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ವಿವರ ಇಲ್ಲಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏಪ್ರಿಲ್ 21) ರಾತ್ರಿ 9.15ಕ್ಕೆ ಸಿಖ್ ಗುರು ತೇಜ್ ಬಹದ್ದೂರ್ (Sikh guru Tegh Bahadur) ಅವರ 400 ನೇ ಪ್ರಕಾಶ್ ಪುರಬ್ (ಜನ್ಮ ದಿನಾಚರಣೆ) ಸಂದರ್ಭದಲ್ಲಿ (400th Parkash Purab) ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಮೋದಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ಕೆಂಪು ಕೋಟೆಯಲ್ಲಿ ಸಚಿವಾಲಯವು ಆಯೋಜಿಸಿರುವ ಎರಡು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣವು ಕೇಂದ್ರ ಬಿಂದುವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. 400 ಸಿಖ್ ಸಂಗೀತಗಾರರು ‘ಶಾಬಾದ್ ಕೀರ್ತನೆ’ಗಳನ್ನು ಹಾಡಲಿದ್ದು, ನಂತರ ರಾತ್ರಿ 9:15 ರ ಸುಮಾರಿಗೆ ಪ್ರಧಾನಿಯವರು ಮಾತನಾಡಲಿದ್ದಾರೆ. ಅದರಲ್ಲಿ ಸರ್ವಧರ್ಮ ಶಾಂತಿಯ ಬಗ್ಗೆ ಪ್ರಧಾನಿ ಮಾತನಾಡುವ ನಿರೀಕ್ಷೆಗಳಿವೆ.
ಪ್ರಧಾನಿ ಮೋದಿ ಹಂಚಿಕೊಂಡ ಟ್ವೀಟ್:
At 9:15 PM tomorrow, 21st April, l will have the honour of taking part in the 400th Parkash Purab celebrations of Sri Guru Teg Bahadur Ji. The programme will be held at the iconic Red Fort. A commemorative coin and postage stamp will also be released. https://t.co/zmejDPbhJz
— Narendra Modi (@narendramodi) April 20, 2022
ಎರಡು ಕಾರಣಗಳಿಗಾಗಿ ಪ್ರಧಾನಿ ಕೆಂಪು ಕೋಟೆಯಿಂದ ಭಾಷಣ ಮಾಡಲಿದ್ದಾರೆ ಎಂದಿವೆ ಸಚಿವಾಲಯದ ಮೂಲಗಳು. ‘‘ಮೊದಲನೆಯದಾಗಿ, ಮೊಘಲ್ ದೊರೆ ಔರಂಗಜೇಬ್ 1675 ರಲ್ಲಿ ಗುರು ತೇಜ್ ಬಹದ್ದೂರ್ ಅವರನ್ನು ಗಲ್ಲಿಗೇರಿಸಲು ಆದೇಶ ನೀಡಿದ ಸ್ಥಳ ಇದಾಗಿದೆ. ಎರಡನೆಯದಾಗಿ, ಕೆಂಪು ಕೋಟೆಯ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಸ್ಥಳ. ಸರ್ವಧರ್ಮ ಶಾಂತಿಯ ಸಂದೇಶವನ್ನು ಜನರಿಗೆ ತಲುಪಿಸಲು ಇದು ಸೂಕ್ತವಾಗಿದೆ’’ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಲೇಸರ್ ಲೈಟ್ ಶೋ ಇರಲಿದೆ. ಎರಡು ದಿನಗಳ ಕಾಲ ಕೆಂಪು ಕೋಟೆಯ ಮುಂಭಾಗದಲ್ಲಿ ಸಿಖ್ ಗುರು ತೇಜ್ ಬಹದ್ದೂರ್ ಅವರ ಜೀವನ ದರ್ಶನದ ಪ್ರದರ್ಶನವೂ ಇರುತ್ತದೆ.
ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಶಿರೋಮಣಿ ಅಕಾಲಿದಳದೊಂದಿಗಿನ ಹಳೆಯ ಮೈತ್ರಿ ಮುರಿದುಬಿದ್ದ ನಂತರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ಸ್ಪರ್ಧಿಸಿತ್ತು. ಅಂದಿನಿಂದ ಬಿಜೆಪಿ ಸಿಖ್ ಸಮುದಾಯಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ. ಕಳೆದ ನವೆಂಬರ್‌ನಲ್ಲಿ ಗುರುನಾನಕ್ ಜಯಂತಿಯಂದೇ ಕೃಷಿ ತಿದ್ದುಪಡಿ ಮಸೂದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತೇಜ್ ಬಹದ್ದೂರ್ ಅವರ ಜನ್ಮ ದಿನಾಚರಣೆಗೆ ಸಂಬಂಧ ಪಟ್ಟಂತೆ ಹರ್ಯಾಣದಲ್ಲಿ ಏಪ್ರಿಲ್ 24ರಂದು ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿದೆ.
ಇದನ್ನೂ ಓದಿ: AYUSH Visa ಭಾರತವು ಶೀಘ್ರದಲ್ಲೇ ವಿದೇಶಿ ಪ್ರಜೆಗಳಿಗೆ ಆಯುಷ್ ವೀಸಾ ವರ್ಗವನ್ನು ಪರಿಚಯಿಸಲಿದೆ: ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಬೆದರಿಸಿ 1 ಕೋಟಿ ರೂಪಾಯಿಗೂ ಹೆಚ್ಚು ಹಣ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!