ಕೂದಲು ಉದುರುವಿಕೆ (Hair loss) ಸಮಸ್ಯೆ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯಾಗಿದೆ. ಸರಿಯಾದ ಪೋಷಣೆಯಿಲ್ಲದೆ ಕೂದಲು ದುರ್ಬಲವಾಗುತ್ತದೆ. ವಯಸ್ಸಿನ ಹೊರತಾಗಿಯೂ, ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರ ಹಾಗೂ ಮಾಲಿನ್ಯದಿಂದಾಗಿ ಕೂದಲು ಉದುರಿವಿಕೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ನೆತ್ತಿಯೊಳಗೆ ಕಾಲಜನ್ ಹಾನಿಯಿಂದಾಗಿ ಕೂದಲಿನ ಕಿರುಚೀಲಗಳು ದುರ್ಬಲಗೊಳ್ಳುತ್ತವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕೆಲವೊಂದು ಮನೆಮದ್ದು(Home Remedies) ಗಳ ಮೂಲಕ ಕೂದಲು ಉದುರುವಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಮೊದಲು ಪೇರಳೆ ಎಲೆಗಳನ್ನು ತೆಗೆದುಕೊಂಡು ತೊಳೆದುಕೊಳ್ಳಿ. ನಂತರ ಈ ಎಲೆಗಳನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ನೆತ್ತಿಯಿಂದ ಕೂದಲಿನ ತುದಿಯ ವರೆಗೆ ಚೆನ್ನಾಗಿ ಹಚ್ಚಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ ಮತ್ತು ಒಂದು ತಿಂಗಳೊಳಗೆ ಉತ್ತಮ ಫಲಿತಾಂಶವನ್ನು ಕಾಣಬಹುದು.
ಪೇರಳೆ ಎಲೆಗಳನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಬಿಸಿನೀರಿನಲ್ಲಿ ಹಾಕಿ ಕುದಿಸಿ. ತಣ್ಣಗಾದ ನಂತರ ಸೋಸಿಕೊಳ್ಳಿ. ಈಗ ಈ ಮದ್ದನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಒಂದು ಗಂಟೆಯ ನಂತರ, ತಲೆಗೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಉದ್ದವಾಗಿ ಬೆಳೆಯುತ್ತದೆ. ಯಾವುದೇ ರಾಸಾಯನಿಕಗಳನ್ನು ಬಳಸುವ ಬದಲು ಪೇರಳೆ ಎಲೆಗಳನ್ನು ಬಳಸುವುದರಿಂದ ಈ ಕೂದಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು.
ಇದನ್ನೂ ಓದಿ: ಒಂದು ವಾರದಲ್ಲೇ ಮೊಡವೆ ಸಮಸ್ಯೆ ಹೋಗಲಾಡಿಸಲು ಪುದೀನಾ ಫೇಸ್ ಪ್ಯಾಕ್
ಪೇರಳೆ ಎಲೆಗಳಲ್ಲಿ ಹಲವಾರು ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿವೆ. ಈ ಎಲೆ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಪೇರಳೆ ಎಲೆಗಳಲ್ಲಿ ಕಂಡುಬರುವ ಲೈಕೋಪೀನ್ ಎಂಬ ರಾಸಾಯನಿಕ ಸಂಯುಕ್ತವು ಕೂದಲನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಪೇರಲ ಎಲೆಗಳಿಂದ ಕೂದಲು ಮಾತ್ರವಲ್ಲದೆ ನೆಗಡಿ, ಕೆಮ್ಮು, ಬಾಯಿ ಹುಣ್ಣು, ಗಂಟಲು ನೋವು ಮುಂತಾದ ಸಮಸ್ಯೆಗಳನ್ನೂ ನಿವಾರಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:17 pm, Thu, 16 November 23