Sign In

By signing in or creating an account, you agree with Associated Broadcasting Company's Terms & Conditions and Privacy Policy.

Spinach face mask: ಒಂದು ವಾರದಲ್ಲೇ ಮೊಡವೆ ಸಮಸ್ಯೆ ಹೋಗಲಾಡಿಸಲು ಪುದೀನಾ ಫೇಸ್ ಪ್ಯಾಕ್

ಹದಿಹರೆಯದವರಲ್ಲಿ ಹೆಚ್ಚಾಗಿ ಮೊಡವೆ ಸಮಸ್ಯೆಗಳು ಕಂಡುಬರುತ್ತವೆ. ಜೊತೆಗೆ ಮೊಡವೆಗಳ ಕಲೆಗಳು ಕೂಡ ಹಾಗೆಯೇ ಮುಖದ ಮೇಲೆ ಉಳಿದುಬಿಡುತ್ತದೆ. ಇದು ನಿಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಆದ್ದರಿಂದ ಕಲೆಮುಕ್ತ ಕಾಂತಿಯುತ ತ್ವಚೆಯನ್ನು ಪಡೆಯಲು ಪುದೀನಾ ಫೇಸ್ ಪ್ಯಾಕ್ ಟ್ರೈ ಮಾಡಿ.

Spinach face mask: ಒಂದು ವಾರದಲ್ಲೇ ಮೊಡವೆ ಸಮಸ್ಯೆ ಹೋಗಲಾಡಿಸಲು ಪುದೀನಾ ಫೇಸ್ ಪ್ಯಾಕ್
Spinach Face Mask Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Nov 15, 2023 | 11:23 AM

ಪುದೀನಾ ಸೊಪ್ಪನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಅಂಶಗಳು ಸಮೃದ್ಧವಾಗಿದ್ದು, ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಿ ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹದಿಹರೆಯದವರಲ್ಲಿ ಹೆಚ್ಚಾಗಿ ಮೊಡವೆ ಸಮಸ್ಯೆಗಳು ಕಂಡುಬರುತ್ತವೆ. ಜೊತೆಗೆ ಮೊಡವೆಗಳ ಕಲೆಗಳು ಕೂಡ ಹಾಗೆಯೇ ಮುಖದ ಮೇಲೆ ಉಳಿದುಬಿಡುತ್ತದೆ. ಇದು ನಿಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಆದ್ದರಿಂದ ಕಲೆಮುಕ್ತ ಕಾಂತಿಯುತ ತ್ವಚೆಯನ್ನು ಪಡೆಯಲು ಪುದೀನಾ ಫೇಸ್ ಪ್ಯಾಕ್ ಟ್ರೈ ಮಾಡಿ.

ಪುದೀನಾದಲ್ಲಿ ವಿಟಮಿನ್ ಕೆ ಮತ್ತು ಫೋಲೇಟ್​​​ ಅಂಶ ಹೇರಳವಾಗಿರುವುದರಿಂದ ಇದು ಮೊಡವೆ ಮತ್ತು ದದ್ದುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮುಖದ ಮೇಲಿನ ಸುಕ್ಕುಗಳು, ಸೂಕ್ಷ್ಮ ರೇಖೆಗಳು ಮತ್ತು ಕಲೆಗಳನ್ನು ತೆಗೆದುಹಾಕುವಲ್ಲಿ ಉಪಯುಕ್ತವಾಗಿದೆ. ಚರ್ಮಕ್ಕೆ ಹೊಳಪು ನೀಡಿ ಕಲೆಗಳನ್ನೂ ಕಡಿಮೆ ಮಾಡುತ್ತದೆ. ಇದಲ್ಲದೇ ಪುದೀನಾದಲ್ಲಿರುವ ವಿಟಮಿನ್​​​ ಬಿ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಆದ್ದರಿಂದ ಪ್ರತಿದಿನ ಪುದೀನಾ ಸೊಪ್ಪನ್ನು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ನಿಮ್ಮ ದೈನಂದಿನ ಆಹಾರದಲ್ಲಿ ಪುದೀನಾ ಸೇರಿಸುವುದರಿಂದ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಬಹುದು.

ಇದನ್ನೂ ಓದಿ: ಪಪ್ಪಾಯಿ ಫೇಸ್​ಪ್ಯಾಕ್ ಬಳಸಿದರೆ ಮೊಡವೆ ಕಡಿಮೆಯಾಗುತ್ತಾ?

ಪುದೀನಾ ಫೇಸ್​​ ಪ್ಯಾಕ್​:

ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಪುದೀನಾ ಸಹಾಯ ಮಾಡುತ್ತದೆ. ಪುದೀನಾ ಫೇಸ್​​​ ಪ್ಯಾಕ್​​ ತಯಾರಿಸಲು ಪುದೀನಾ ಸೊಪ್ಪು ತೆಗೆದುಕೊಂಡು ನಯವಾದ ಪೇಸ್ಟ್​​​​ ತಯಾರಿಸಿ. ನಂತರ ಈ ಮಿಶ್ರಣವನ್ನು ಮೊಡವೆಗಳ ಮೇಲೆ ಹಚ್ಚಿ. 30 ನಿಮಿಷಗಳ ಕಾಲ ಮುಖದ ಮೇಲೆ ಹಾಗೆ ಇಡಿ. ನಂತರ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ತ್ವಚೆಯ ಸಮಸ್ಯೆಗಳನ್ನು ತಡೆಗಟ್ಟಲು ಪುದೀನಾ ಹಾಗೂ ಮೊಸರು ಫೇಸ್ ಪ್ಯಾಕ್ ಪ್ರಯತ್ನಿಸಬಹುದು. ಪುದೀನಾ ಮತ್ತು ಮೊಸರು ಮಿಶ್ರಣ ಮಾಡಿ ಪೇಸ್ಟ್ ಮಾಡಿ ಮತ್ತು ಚರ್ಮದ ಮೇಲೆ ಹಚ್ಚಿ. ಹದಿನೈದು ನಿಮಿಷಗಳ ನಂತರ ತೊಳೆದರೆ ಪಿಗ್ಮೆಂಟೇಶನ್ ಸಮಸ್ಯೆ ದೂರವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: