Beauty Tips: ಸೌಂದರ್ಯಕ್ಕೂ, ಸ್ಟಾರ್ ಫ್ರೂಟ್ಗೂ ಏನು ಸಂಬಂಧ?
ಸ್ಟಾರ್ ಫ್ರೂಟ್ ಪೋಷಕಾಂಶಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. ಆದ್ದರಿಂದ, ಸ್ಟಾರ್ ಫ್ರೂಟ್ ಫೇಸ್ ಮಾಸ್ಕ್, ಹೇರ್ ಮಾಸ್ಕ್ ಮತ್ತು ಸ್ಮೂಥಿಯನ್ನು ತಯಾರಿಸಿ ಬಳಸಬಹುದು.
ತಂಪಾದ ಜಾಗದಲ್ಲಿ ಅದರಲ್ಲೂ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಬೆಳೆಯುವ ಸ್ಟಾರ್ ಫ್ರೂಟ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಹಾಗೆಯೇ ಹೆಚ್ಚಿನ ಫೈಬರ್ ಅಂಶ ಕಂಡು ಬರುತ್ತವೆ. ಹಾಗೇ, ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಬಿ 5, ಕ್ಯಾಲ್ಸಿಯಂ, ಸೋಡಿಯಂ, ಫೋಲೇಟ್, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಅಂಶಗಳಿವೆ.
ಸ್ಟಾರ್ ಫ್ರೂಟ್ ಗಂಟಲು ನೋವನ್ನು ಕಡಿಮೆ ಮಾಡಿ, ಉಸಿರಾಟ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಕೂಡ ಸುಧಾರಿಸುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸಲು ಇದು ಸಹಕಾರಿಯಾಗಿದೆ. ಈ ಸ್ಟಾರ್ ಫ್ರೂಟ್ನಿಂದ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?
ಇದನ್ನೂ ಓದಿ: ದೀಪಾವಳಿ ಹಬ್ಬದಲ್ಲಿ ಮಧುಮೇಹಿಗಳು ಡಯಾಬಿಟಿಸ್ ನಿಯಂತ್ರಿಸುವುದು ಹೇಗೆ?
ಸ್ಟಾರ್ ಫ್ರೂಟ್ ಪೋಷಕಾಂಶಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. ಆದ್ದರಿಂದ, ಸ್ಟಾರ್ ಫ್ರೂಟ್ ಫೇಸ್ ಮಾಸ್ಕ್, ಹೇರ್ ಮಾಸ್ಕ್ ಮತ್ತು ಸ್ಮೂಥಿಯನ್ನು ತಯಾರಿಸಿ ಬಳಸಬಹುದು.
ಕೂದಲ ಬೆಳವಣಿಗೆಗೆ ಸಹಕಾರಿ:
ಹುಳಿ- ಸಿಹಿ ರುಚಿಯನ್ನು ಹೊಂದಿರುವ ಸ್ಟಾರ್ ಫ್ರೂಟ್‌ನಲ್ಲಿರುವ ತಾಮ್ರ, ಮೆಗ್ನೀಸಿಯಮ್, ಫೋಲೇಟ್ ಮತ್ತು ವಿಟಮಿನ್ ಎ, ಬಿ 5 ಮತ್ತು ಸಿ ಪೋಷಕಾಂಶಗಳು ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳನ್ನು ಬಲಪಡಿಸುತ್ತದೆ ಮತ್ತು ಪೋಷಿಸುತ್ತದೆ. ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ ಬಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಉಗುರುಗಳ ಆರೋಗ್ಯಕ್ಕೆ ಸಹಕಾರಿ:
ಸ್ಟಾರ್ ಫ್ರೂಟ್‌ನಲ್ಲಿರುವ ಬಿ ಜೀವಸತ್ವ ಉಗುರುಗಳನ್ನು ಬಲಪಡಿಸುತ್ತದೆ, ತುಂಡಾಗುವಿಕೆಯನ್ನು ತಡೆಯುತ್ತದೆ ಮತ್ತು ಉಗುರುಗಳು ಬೆಳೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?
ಚರ್ಮದ ಸೌಂದರ್ಯಕ್ಕೆ ಉಪಯುಕ್ತ:
ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ ಎ ಚರ್ಮದ ಕೋಶಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಮೊಡವೆಗಳನ್ನು ಗುಣಪಡಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆಗೊಳಿಸುತ್ತದೆ. ಹಾಗೇ, ವಿಟಮಿನ್ ಸಿ ಕಾಲಜನ್ ಅನ್ನು ಹೆಚ್ಚಿಸುತ್ತದೆ, ಉರಿಯೂತವನ್ನು ಶಾಂತಗೊಳಿಸುತ್ತದೆ ಮತ್ತು ಕಪ್ಪು ಕಲೆಗಳನ್ನು ಮಸುಕಾಗಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ