Hair Care Tips : ಉಪ್ಪನ್ನು ಈ ರೀತಿ ಬಳಸಿ ಕೂದಲಿನ ಅಂದ ಹೆಚ್ಚುತ್ತೆ

ಉಪ್ಪಿಲ್ಲದ ಅಡುಗೆಯನ್ನು ತಿನ್ನುವುದು ಕಷ್ಟಕರ. ಅಡುಗೆಯ ರುಚಿ ಹೆಚ್ಚಿಸುವ ಉಪ್ಪಿನ ಪ್ರಯೋಜನ ಒಂದೆರಡಲ್ಲ. ನಿಯಮಿತವಾಗಿ ಉಪ್ಪು ಸೇವನೆಯೂ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ. ಅದೇ ರೀತಿ ಚರ್ಮ ಹಾಗೂ ಕೂದಲಿನ ಆರೈಕೆಗೂ ಈ ಉಪ್ಪನ್ನು ಬಳಸಬಹುದಾಗಿದೆ. ಹೌದು, ಉಪ್ಪು ಚರ್ಮದ ಜೊತೆಗೆ ಕೂದಲಿನ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹಾಗಾದ್ರೆ ಉಪ್ಪಿನ ಬಳಕೆಯೂ ಕೂದಲಿನ ಆರೈಕೆಗೆ ಹೇಗೆ ಸಹಕಾರಿಯಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

Hair Care Tips : ಉಪ್ಪನ್ನು ಈ ರೀತಿ ಬಳಸಿ ಕೂದಲಿನ ಅಂದ ಹೆಚ್ಚುತ್ತೆ
ಸಾಂದರ್ಭಿಕ ಚಿತ್ರ
Edited By:

Updated on: Jan 28, 2025 | 12:22 PM

ಮಹಿಳೆಯ ಅಂದ ಹೆಚ್ಚಿಸುವುದೇ ಉದ್ದ ಹಾಗೂ ದಟ್ಟವಾದ ಕೂದಲು. ಆದರೆ ಇತ್ತೀಚೆಗಿನ ದಿನಗಳಲ್ಲಿ ನಾನಾ ರೀತಿಯ ಕೂದಲಿನ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಕೂದಲಿನ ಆರೈಕೆಗೆ ಬಳಸುತ್ತಾರೆ. ಆದರೆ ಈ ಕೂದಲಿಗೆ ಬಳಸುವ ರಾಸಾಯನಿಕ ಮತ್ತು ಕೂದಲಿನ ಉತ್ಪನ್ನಗಳು ಕೂದಲ ಕಾಂತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಉಪ್ಪನ್ನು ವಿವಿಧ ರೀತಿಯಲ್ಲಿ ಬಳಸುವ ಮೂಲಕ ಕೂದಲಿನ ಆರೈಕೆಗೆ ಮಾಡಬಹುದು. ಈ ಮೂಲಕ ಸೊಂಪಾದ ದಟ್ಟವಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.

  • ನೀರಿಗೆ ಉಪ್ಪನ್ನು ಬೆರೆಸಿ ಕೂದಲು ತೊಳೆಯುವ ಮೂಲಕ ಕೂದಲಿನ ಆರೈಕೆ ಮಾಡಬಹುದು. ಇಲ್ಲವಾದರೆ ಶ್ಯಾಂಪೂವಿಗೆ ಉಪ್ಪು ಸೇರಿಸಿ ಕೂದಲನ್ನು ತೊಳೆಯುವುದು ಕೂಡ ಪರಿಣಾಮಕಾರಿಯಾಗಿದೆ. ಇದು ನೆತ್ತಿಯ ಸತ್ತ ಕೋಶಗಳನ್ನು ತೆಗೆದುಹಾಕಿ, ತೈಲ ಗ್ರಂಥಿಗಳ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಿಂದ ಕೂದಲಿನಲ್ಲಿರುವ ಹೆಚ್ಚುವರಿ ಎಣ್ಣೆ ಅಂಶವು ಕಡಿಮೆಯಾಗುತ್ತದೆ.
  • ಉಪ್ಪಿನಿಂದ ತಲೆಗೆ ಮಸಾಜ್ ಮಾಡುವ ಮೂಲಕ ಕೂದಲು ಉದುರುವಿಕೆ ಸಮಸ್ಯೆಗೆ ರಾಮಬಾಣವಾಗಿದೆ. ಉಪ್ಪನ್ನು ನೆತ್ತಿಯ ಮೇಲೆ ಉಜ್ಜುವುದರಿಂದ ಇದು ಕೊಳೆಯನ್ನು ತೆಗೆದು ಹಾಕುತ್ತದೆ. ಅದಲ್ಲದೇ, ನೆತ್ತಿಯ ರಂಧ್ರಗಳು ಸುಲಭವಾಗಿ ತೆರೆದುಕೊಂಡು ಕೂದಲನ್ನು ಬಲಪಡಿಸುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
  • ನಿಯಮಿತವಾಗಿ ಕೂದಲಿಗೆ ಉಪ್ಪನ್ನು ಅನ್ವಯಿಸುವುದರಿಂದ ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಉಪ್ಪಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿದ್ದು, ಇದು ಕೂದಲಿನಲ್ಲಿ ತೇವಾಂಶವನ್ನು ಕಾಪಾಡುವ ಮೂಲಕ ತಲೆಹೊಟ್ಟು ಹೋಗಲಾಡಿಸಲು ಸಹಕಾರಿಯಾಗಿದೆ.
  • ಉಪ್ಪಿನಲ್ಲಿರುವ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಹಾಗೂ ಸೆಲೆನಿಯಮ್ ಖನಿಜಗಳು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಶ್ಯಾಂಪೂಗೆ ಉಪ್ಪು ಸೇರಿಸಿ ತಲೆಗೆ ನಿಧಾನವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದವರೆಗೆ ಕೂದಲನ್ನು ಹಾಗೆ ಬಿಡಿ. ಆ ಬಳಿಕ ತಣ್ಣೀರಿನಿಂದ ಕೂದಲು ತೊಳೆಯುವುದರಿಂದ ಹೊಳೆಯುವುಳ್ಳ ಮತ್ತು ದಪ್ಪ ಕೂದಲು ನಿಮ್ಮದಾಗುತ್ತದೆ.
  • ಕೂದಲು ಉದುರುವ ಸಮಸ್ಯೆ ಮತ್ತು ತಲೆಹೊಟ್ಟು ಸಮಸ್ಯೆಯಿದ್ದು ಕೂದಲು ಸೊಂಪಾಗಿ ಬೆಳೆಯುತ್ತಿಲ್ಲ ಎನ್ನುವವರು ವಾರಕ್ಕೆ ಎರಡು ಬಾರಿಯಾದರೂ ಎಣ್ಣೆ ಹಾಗೂ ಉಪ್ಪನ್ನು ಬೆರೆಸಿ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕೂದಲು ವೇಗವಾಗಿ ಹಾಗೂ ಸೊಂಪಾಗಿ ಬೆಳೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ