AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲಾ ಲಜಪತ್ ರಾಯ್ ಅವರಿಗೆ ಪಂಜಾಬ್ ಸಿಂಹ ಎಂದು ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ

Lala Lajpat Rai Birth Anniversary 2025 : ಪಂಜಾಬ್ ಸಿಂಹ ಎಂದೇ ಖ್ಯಾತರಾದ ಲಾಲಾ ಲಜಪತ್ ರಾಯ್ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡಿದ ಹೋರಾಟಗಾರರಲ್ಲಿ ಒಬ್ಬರು. ತಮ್ಮ ಬಲವಾದ ನಿರ್ಣಯ, ತೀಕ್ಷ ಮಾತು ಹಾಗೂ ಧೈರ್ಯದ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದವರು. ಜನವರಿ 28 ರಂದು ರಾಯ್ ಅವರ 160 ನೇ ಜನ್ಮದಿನವಾಗಿದ್ದು, ಇವರು ಬದುಕಿನ ಹಾದಿ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಲಾಲಾ ಲಜಪತ್ ರಾಯ್ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಲಾಲಾ ಲಜಪತ್ ರಾಯ್ ಅವರಿಗೆ ಪಂಜಾಬ್ ಸಿಂಹ ಎಂದು ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ
ಲಾಲಾ ಲಜಪತ್ ರಾಯ್
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 27, 2025 | 6:02 PM

Share

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಲಾಲಾ ಲಜಪತ್ ರಾಯ್ ಕೂಡ ಒಬ್ಬರು. ಲೇಖಕರು ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡವರು. ಜನವರಿ 28 ರಂದು ಇವರ ಜನ್ಮದಿನವಾಗಿದ್ದು, ರಾಯ್ ಅವರು ಪಂಜಾಬ್‌ನ ಲುಧಿಯಾನ ಬಳಿಯ ಧುಡಿಕೆಯಲ್ಲಿ ಜನವರಿ 28,1865ರಂದು ಜನಿಸಿದರು. ಈ ಬಾರಿ 160 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಭಾರತಕ್ಕೆ ಸ್ವಾತ್ರಂತ್ರ್ಯ ಸಿಗುವಲ್ಲಿ ರಾಯ್ ನೀಡಿದ ಕೊಡುಗೆಗಳೇನು? ಎನ್ನುವ ಕುತೂಹಲದಾಯಕ ಸಂಗತಿಯನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

ಲಾಲಾ ಲಜಪತ್ ರಾಯ್ ಹೋರಾಟದ ಹಾದಿ

ಕಾನೂನು ಅಧ್ಯಯನ ಮಾಡಿದ ಲಾಲಾ ಲಜಪತ್ ರಾಯ್ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಲಕ್ಷ್ಮಿ ನ್ಯಾಷನಲ್ ಬ್ಯಾಂಕ್‌ನ ಅನೇಕ ರಾಷ್ಟ್ರೀಯತಾವಾದಿ ಚಟುವಟಿಕೆಗಳಲ್ಲಿ ಭಾಗಿಯಾದರು. ಆ ವಯಸ್ಸಿಗೆ ಬ್ರಿಟಿಷರ ವಿರುದ್ಧ ಅವರಿಗಿದ್ದ ಸಿಟ್ಟು ಹೋರಾಟದ ಕಿಚ್ಚು ಹಚ್ಚುವಂತೆ ಮಾಡಿತ್ತು. 1881ರಲ್ಲಿ ಅವರು 16ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿಕೊಂಡರು. 1885ರಲ್ಲಿ ಲಾಹೋರ್‌ನಲ್ಲಿ ದಯಾನಂದ ಆಂಗ್ಲೋ-ವೇದಿಕ್ ಶಾಲೆಯನ್ನು ಸ್ಥಾಪನೆ ಮಾಡಿದರು. ತದನಂತರದಲ್ಲಿ ಸ್ವದೇಶಿ ಸರಕುಗಳ ಬಳಕೆಯನ್ನು ತೀವ್ರವಾಗಿ ಪ್ರತಿಪಾದಿಸಿದರು.

ಹೀಗೆ ಲಾಲಾ ಲಜಪತ ರಾಯ್ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ, ವರದಕ್ಷಿಣೆ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಇತರ ಅಮಾನವೀಯ ಆಚರಣೆಗಳ ವಿರುದ್ಧ ಧ್ವನಿ ಎತ್ತಿದರು. ಈ ಹಿನ್ನಲೆಯಲ್ಲಿ ‘ಸರ್ವಂಟ್ಸ್ ಆಫ್ ದಿ ಪೀಪಲ್ ಸೊಸೈಟಿ’ಯನ್ನು ಸ್ಥಾಪನೆ ಮಾಡಿದರು. ಹೀಗೆ ಸದಾ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ರಾಯ್ ಲಾಹೋರ್‌ನಲ್ಲಿ ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡರು.

ತೀವ್ರತೆರೆನಾದ ಹಲ್ಲೆಗೊಳಗಾದ ರಾಯ್ ಇಹಲೋಕ ತ್ಯಜಿಸಿದರು. ಇವರ ಮರಣದ ನಂತರ ಬ್ರಿಟಿಷರ ಆಡಳಿತದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು ಲಾಲಾಜಿಯವರ ಸಾವಿಗೆ ಸೇಡು ತೀರಿಸಿಕೊಳ್ಳಲು 17 ಡಿಸೆಂಬರ್ 1928 ರಂದು ಬ್ರಿಟಿಷ್ ಪೊಲೀಸ್ ಅಧಿಕಾರಿ ಸೌಂಡರ್ಸ್ ಅವರನ್ನು ಗುಂಡಿಕ್ಕಿ ಕೊಂದರು. ತನ್ನ ಸ್ಪಷ್ಟ ಉದ್ದೇಶ, ನೇರ ನುಡಿ, ಬಲವಾದ ನಿರ್ಣಯಗಳು ಹಾಗೂ ಉಗ್ರ ಸ್ವಭಾವದಿಂದಲೇ ‘ಪಂಜಾಬ್‌ನ ಸಿಂಹ’ ಎಂದು ಜನಪ್ರಿಯರಾದರು.

ಇದನ್ನೂ ಓದಿ: ತಣ್ಣೀರು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಏಕೆ ಒಳ್ಳೆಯದಲ್ಲ, ಇಲ್ಲಿದೆ ನೋಡಿ ಕಾರಣ

ಲಾಲಾ ಲಜಪತ್ ರಾಯ್ ಪ್ರಸಿದ್ಧ ನುಡಿಮುತ್ತುಗಳು

* ಸೋಲು ಮತ್ತು ವೈಫಲ್ಯ ಕೆಲವೊಮ್ಮೆ ಗೆಲುವಿನ ಪ್ರಮುಖ ಹಂತಗಳಾಗಿವೆ.

* ನನ್ನ ಮೇಲೆ ಹೊಡೆದ ಹೊಡೆತಗಳು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಶವಪೆಟ್ಟಿಗೆಯ ಕೊನೆಯ ಮೊಳೆಗಳು ಎಂದು ನಾನು ಘೋಷಿಸುತ್ತೇನೆ.

* ಹಲವು ವಿಷಯಗಳ ಬಗ್ಗೆ ನನ್ನ ಮೌನವು ದೀರ್ಘಾವಧಿಯಲ್ಲಿ ಪ್ರಯೋಜನವಾಗಲಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ.

* ದೇಶಕ್ಕೆ ಸಮರ್ಪಣೆ ಮತ್ತು ನಿಸ್ವಾರ್ಥದಿಂದ ಸೇವೆ ಮಾಡಿ. ನಿಮ್ಮ ಉದ್ದೇಶವನ್ನು ನೀವು ಕಂಡುಕೊಳ್ಳುತ್ತೀರಿ.

* ನಿಜವಾದ ದೇಶಭಕ್ತಿಯು ಅನ್ಯಾಯದ ಬಗ್ಗೆ ನಿರ್ಭೀತ ಮನೋಭಾವವನ್ನು ಬಯಸುತ್ತದೆ.

* ಶಿಕ್ಷಣವು ಸಬಲೀಕರಣದ ಕೀಲಿಯಾಗಿದೆ; ಇದು ಪ್ರಗತಿಯ ಹಾದಿಯನ್ನು ಬೆಳಗಿಸುತ್ತದೆ.

* ಪ್ರಗತಿಯು ಕೇವಲ ಆರ್ಥಿಕವಲ್ಲ, ಇದು ಪ್ರತಿಯೊಬ್ಬ ನಾಗರಿಕನ ಯೋಗಕ್ಷೇಮವನ್ನು ಒಳಗೊಳ್ಳಬೇಕು.

* ಹೋರಾಟಗಳು ನೋವಿನಿಂದ ಕೂಡಿರಬಹುದು, ಆದರೆ ಅವು ಪ್ರಗತಿಗೆ ಮೆಟ್ಟಿಲುಗಳಾಗಿವೆ.

* ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡದೆ ಸಮಾಜದ ಸಾಮೂಹಿಕ ಕಲ್ಯಾಣಕ್ಕಾಗಿ ಕೆಲಸ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ