Hanuman Jayanti 2023: ಹನುಮನಿಗೆ ಈ ಸಿಹಿ ಪ್ರಸಾದ ಅರ್ಪಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 06, 2023 | 3:08 PM

ಕೇಸರಿಬಾತ್‌ನಿಂದ ಹಿಡಿದು ಮೋತಿಚೂರು ಲಡ್ಡೂವರೆಗೆ ನೀವು ಈ ಹನುಮಜಯಂತಿಯಂದು ಭಗವಾನ್ ಹನುಮನಿಗೆ ಅರ್ಪಿಸಬಹುದಾದ ಕೆಲವೊಂದು ಪ್ರಸಾದ ವಸ್ತುಗಳ ಮಾಹಿತಿ ಇಲ್ಲಿದೆ.

Hanuman Jayanti 2023: ಹನುಮನಿಗೆ ಈ ಸಿಹಿ ಪ್ರಸಾದ ಅರ್ಪಿಸಿ
ಸಾಂದರ್ಭಿಕ ಚಿತ್ರ
Follow us on

ರಾಮಭಕ್ತ ಹನುಮಂತನನ್ನು ಪೂಜಿಸದವರೇ ಇಲ್ಲ. ಹೆಚ್ಚಿನ ಜನರು ಹನುಮನ ಭಕ್ತರು. ಈ ಹನುಮ ಜಯಂತಿಯನ್ನು ಭಕ್ತರು ಭಕ್ತಿಪೂರ್ವಕವಾಗಿ ಆಚರಣೆ ಮಾಡುತ್ತಾರೆ. ಅವರ ಜನ್ಮದಿನದ ನಿಖರವಾದ ದಿನಾಂಕ ತಿಳಿದಿಲ್ಲವಾದರೂ, ಮಂಗಳವಾರದಂದು ಚೈತ್ರ ಪೂರ್ಣಿಮೆಯಂದು ಸುರ್ಯೋದಯದಲ್ಲಿ ಭಗವಾನ್ ಹುನುಮಂತ ಜನಿಸಿದರೆಂದು ಹೇಳಲಾಗುತ್ತದೆ. ಈ ಚೈತ್ರ ಪೂರ್ಣಿಮೆಯಂದು ಹನುಮ ಜಯಂತಿಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ವರ್ಷ ಹನುಮಂತ ದೇವರ ಜನ್ಮದಿನವನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತಿದೆ. ದೇವರಿಗೆ ಪ್ರಿಯವಾದ ವಸ್ತುಗಳನ್ನು ಅವರಿಗೆ ಅರ್ಪಿಸಿದಾಗ ಅವರು ನಮಗೆ ಒಲಿಯುತ್ತಾರೆ ಹಾಗೂ ನಮ್ಮ ಮೇಲೆ ಕೃಪೆ ತೋರುತ್ತಾರೆ ಎನ್ನುವ ನಂಬಿಕೆ ಇದೆ. ಅದೇ ನಂಬಿಕೆಯ ಕಾರಣದಿಂದ ದೇವರುಗಳಿಗೆ ಪ್ರಿಯವಾದ ವಸ್ತುಗಳನ್ನೇ ನಾವು ಅರ್ಪಿಸುತ್ತೇವೆ. ಈ ಬಾರಿಯ ಹನುಮ ಜಯಂತಿಯಂದು ಆಂಜನೇಯನಿಗೆ ಪ್ರಿಯವಾದ ಈ ವಸ್ತುಗಳನ್ನು ಅರ್ಪಿಸಿ.

ಮೋತಿಚೂರು ಲಡ್ಡೂ: ಅನೇಕ ಭಕ್ತರು ಪ್ರತಿ ಮಂಗಳವಾರ ಹನುಮಂತನಿಗೆ ಈ ಮೋತಿಚೂರು ಲಡ್ಡನ್ನು ಪ್ರಸಾದ ರೂಪದಲ್ಲಿ ಅರ್ಪಿಸುತ್ತಾರೆ. ಈ ಮೋತಿಚೂರು ಲಡ್ಡು ಹನುಮಂತನಿಗೆ ಪ್ರಿಯವಾದ ಖಾದ್ಯವಾಗಿದೆ. ಹನುಮ ಜಯಂತಿಯಂದು ಈ ಲಡ್ಡನ್ನು ಮನೆಯಲ್ಲಿಯೇ ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಬಹುದು.

ಜಾಂಗೀರ್ : ಈ ಜಾಂಗೀರ್ ಜಿಲೇಬಿಯಂತೆಯೇ ಇರುತ್ತದೆ. ತುಪ್ಪ ಅಥವಾ ಎಣ್ಣೆಯಿಂದ ಹುರಿಯಲಾಗುತ್ತದೆ. ಈ ಸಿಹಿಯಾದ ತಿನಿಸು ಕೂಡಾ ಹನುಮಂತನಿಗೆ ಬಲುಪ್ರಿಯವಾದದ್ದು. ಹನುಮ ಜಯಂತಿಯಂದು ಈ ಸಿಹಿಯನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಸಲ್ಲಿಸಬಹುದು.

ಇದನ್ನೂ ಓದಿ:Hanuman Jayanti: ಕೊಪ್ಪಳ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ದಂಡು, ರಾಮಭಕ್ತನ ಸನ್ನಿಧಿಯಲ್ಲಿ ಹನುಮ ಮಾಲೆ ವಿಸರ್ಜನೆ 

ಹಯಗ್ರೀವ: ಇದು ಹುರಿದ ಕಾಳು ಮತ್ತು ಬೆಲ್ಲದ ಸಿಹಿಯಾಗಿದೆ. ಇದು ಹನುಮಂತನ ನೆಚ್ಚಿನ ಸಿಹಿಯಾಗಿದೆ. ಇದನ್ನು ಕೂಡಾ ಭಗವಾನ್ ಹನುಮನಿಗೆ ಅರ್ಪಿಸಬಹುದು.

ಕೇಸರಿಬಾತ್: ಕೇಸರಿಬಾತ್ ಹನುಮಜಯಂತಿಯ ಜನಪ್ರಿಯ ಪ್ರಸಾದವಾಗಿದೆ. ಈ ಕೇಸರಿಬಾತ್‌ನ್ನು ಮನೆಯಲ್ಲಿಯೆ ತಯಾರಿಸುವ ಮೂಲಕ ಈ ಬಾರಿಯ ಹನುಮಜಯಂತಿಯ ದಿನದಂದು ಭಗವಂತ ಹನುಮಂತನಿಗೆ ಪ್ರಸಾದ ರೂಪದಲ್ಲಿ ಇದನ್ನು ಅರ್ಪಿಸಬಹುದು.

ತುಳಸಿ: ಈ ಬಾರಿಯ ಹನುಮಜಯಂತಿಯಂದು ಸಿಹಿ ನೈವೇದ್ಯ ಮಾತ್ರವಲ್ಲದೆ ಆಂಜನೇಯನಿಗೆ ಪವಿತ್ರ ತುಳಸಿಯ ಮಾಲೆಯನ್ನು ಅರ್ಪಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Thu, 6 April 23