Sign In

By signing in or creating an account, you agree with Associated Broadcasting Company's Terms & Conditions and Privacy Policy.

Social Media: ಸಾಮಾಜಿಕ ಮಾಧ್ಯಮದ ಹೋಲಿಕೆಯಿಂದ ಪ್ರಭಾವಿತರಾಗುವುದನ್ನು ಹೇಗೆ ನಿಲ್ಲಿಸಬಹುದು? ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮಕ್ಕೆ ಸುಲಭವಾಗಿ ಪ್ರವೇಶ ಸಿಗುತ್ತಿರುವುದರಿಂದ ಸಾಮಾಜಿಕ ಮಾಧ್ಯಮದ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಹೊರತಾಗಿ ಬೇರೆಯವರ ಬಗೆಗೆ ಅವರ ಜೀವನದ ಬಗ್ಗೆ ಆಲೋಚನೆ ಹೆಚ್ಚಾಗುವ ಹಾಗೆ ಮಾಡಿದೆ ಇದನ್ನೇ ನಾವು ಸಾಮಾಜಿಕ ಮಾಧ್ಯಮ ಹೋಲಿಕೆ ಎನ್ನುತ್ತೇವೆ.

Social Media: ಸಾಮಾಜಿಕ ಮಾಧ್ಯಮದ ಹೋಲಿಕೆಯಿಂದ ಪ್ರಭಾವಿತರಾಗುವುದನ್ನು ಹೇಗೆ ನಿಲ್ಲಿಸಬಹುದು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Apr 06, 2023 | 1:56 PM

ಇತ್ತೀಚೆಗೆ ಭಾರತದಲ್ಲಿ ಸಾಮಾಜಿಕ ಮಾಧ್ಯಮ (Social Media) ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮಾನವ ಸಮಾಜ ಮತ್ತು ಸಂಘ ಜೀವಿ ಎಂಬುದನ್ನು ಸಾಮಾಜಿಕ ಮಾಧ್ಯಮಗಳು ಸಾಬೀತು ಮಾಡಿವೆ. ವಯಸ್ಸಿನ ನಿರ್ಬಂಧದ ಕೊರತೆ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಸುಲಭವಾಗಿ ಪ್ರವೇಶ ಸಿಗುತ್ತಿರುವುದರಿಂದ ಸಾಮಾಜಿಕ ಮಾಧ್ಯಮದ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಹೊರತಾಗಿ ಬೇರೆಯವರ ಬಗೆಗೆ, ಅವರ ಜೀವನದ ಬಗ್ಗೆ ಆಲೋಚನೆ ಹೆಚ್ಚಾಗುವ ಹಾಗೆ ಮಾಡಿದೆ ಇದನ್ನೇ ನಾವು ಸಾಮಾಜಿಕ ಮಾಧ್ಯಮ ಹೋಲಿಕೆ ಎನ್ನುತ್ತೇವೆ. ಸಾಮಾಜಿಕ ಮಾಧ್ಯಮ ಬರಿ ಮನೋರಂಜನೆಯಾಗಿರದೇ ಹೋಲಿಕೆಯ ಒಂದು ವಿದ್ಯಮಾನವಾಗಿದ್ದು, ವ್ಯಕ್ತಿಗಳು ತಮ್ಮ ಸ್ವಂತ ಜೀವನ ಮತ್ತು ಸಾಧನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ಪಡಿಸುತ್ತಾರೆ ಅಲ್ಲದೆ ಅವುಗಳಿಗೆ ಮೆಚ್ಚುಗೆ ನೀಡಬೇಕು ಎಂದು ಬಯಸುತ್ತಾರೆ. ಕೆಲವರು ಬೇರೆಯವರ ಜೀವನ ನೋಡಿ ತಮ್ಮ ಜೀವನ ಅಭದ್ರತೆಯಲ್ಲಿದೆ ಎಂದು ಚಿಂತೆ ಮಾಡುತ್ತಾರೆ. ಹಾಗಾಗಿ ಇವೆಲ್ಲವೂ ಖಿನ್ನತೆಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮದ ಹೋಲಿಕೆಯ ಅಪಾಯವೆಂದರೆ ವ್ಯಕ್ತಿಗಳು ತಮ್ಮ ಮೌಲ್ಯಗಳು ಮತ್ತು ಗುರಿಗಳಿಗಿಂತ ಹೆಚ್ಚಾಗಿ ಬಾಹ್ಯ ಮೌಲ್ಯೀಕರಣ ಮತ್ತು ಇತರರ ಅಭಿಪ್ರಾಯಗಳಿಗೆ ಆದ್ಯತೆ ನೀಡುವಂತೆ ಮಾಡುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವ ಚಿತ್ರಗಳು ಮತ್ತು ಪೋಸ್ಟ್‌ಗಳು ಯಾರೊಬ್ಬರ ಜೀವನದ ಸಂಪೂರ್ಣ ನೈಜತೆಯನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಸಾಮಾಜಿಕ ಮಾಧ್ಯಮದ ಬಳಕೆಯನ್ನು ಒಂದು ಮಿತಿಯಲ್ಲಿ ಬಳಕೆ ಮಾಡಿ. ಬೇರೆಯವರ ಜೀವನ ನಮ್ಮದಲ್ಲ. ಅವರಿಗೂ ಹೇಳಿಕೊಳ್ಳಲಾದ ಕಷ್ಟವಿರಬಹುದು ಹಾಗು ಸ್ವಯಂ ಸಹಾನುಭೂತಿ ಬೆಳಿಸಿಕೊಳ್ಳುವುದರಿಂದ ಸಾಮಾಜಿಕ ಮಾಧ್ಯಮದ ಹೋಲಿಕೆಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಸಾಮಾಜಿಕ ಮಾಧ್ಯಮ ಹೋಲಿಕೆಯನ್ನು ತಡೆಯಲು ಇಲ್ಲಿವೆ ಐದು ಮಾರ್ಗಗಳು:

ನಿಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸಿ: ನೀವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಸಮಯವನ್ನು ಕಳೆಯುತ್ತೀರಿ ಎಂಬುದಕ್ಕೆ ಒಂದು ಸಮಯ ನಿಗದಿಪಡಿಸಿ ಅದರ ಹೊರತಾಗಿ ನೀವು ಹೆಚ್ಚು ಸಮಯ ವ್ಯರ್ಥ ಮಾಡಬಾರದು. ಅಲ್ಲದೆ ಬೇರೆಯವರು ಹಾಕಿದ ಪೋಸ್ಟ್ ಗಳಿಗೆ ನಿಮ್ಮನ್ನು ಹೋಲಿಸಿಕೊಳ್ಳಬಾರದು.

ಸ್ವಯಂ ಜಾಗೃತಿ ಅಗತ್ಯ: ನೀವು ಸಾಮಾಜಿಕ ಮಾಧ್ಯಮ ಬಳಸುವಾಗ ಬೇರೆಯವರು ಹಾಕಿದ ಫೋಟೋ ಅಥವಾ ಇನ್ನಿತರ ಬರಹ ನೋಡಿ ನಿಮಗೆ ಹೇಗೆ ಅನಿಸುತ್ತದೆ ಎಂಬುದರ ಬಗ್ಗೆ ಗಮನ ಕೊಡಿ. ನೀವು ಅಸೂಯೆ, ಅಥವಾ ದುಃಖ, ನಕಾರಾತ್ಮಕ ಭಾವನೆಗಳು ನಿಮ್ಮ ಅನುಭವಕ್ಕೆ ಬಂದರೆ, ವಿರಾಮ ತೆಗೆದುಕೊಳ್ಳಿ ಅದರ ಬದಲಾಗಿ ನಿಮಗೆ ಒಳ್ಳೆಯ ಭಾವನೆ ನೀಡುವ, ಅಥವಾ ನಿಮಗೆ ಖುಷಿ ನೀಡುವ ಕೆಲಸ ಮಾಡಿ.

ಇದನ್ನೂ ಓದಿ: Social Media Influencers: ಸಾಮಾಜಿಕ ಮಾಧ್ಯಮ ಪ್ರಭಾವಿಗಳೇ ಎಚ್ಚರ; ಬಂದಿದೆ ಹೊಸ ನಿಯಮ, ತಪ್ಪಿದರೆ 50 ಲಕ್ಷ ದಂಡ

ಕೃತಜ್ಞತೆಯನ್ನು ಬೆಳೆಸಿಕೊಳ್ಳಿ: ನಿಮ್ಮ ಜೀವನದಲ್ಲಿ ನಡೆದಿರುವ ಒಳ್ಳೆಯ ವಿಷಯಗಳ ಮೇಲೆ ಕೇಂದ್ರೀಕರಿಸಿ ಮತ್ತು ಅವುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಗಮನವನ್ನು ನಿಮ್ಮ ಬಳಿ ಇರುವಲ್ಲಿ ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ನೀವು ಬೇರೆಯವರ ಜೀವನದ ಬಗ್ಗೆಯೇ ಯೋಚನೆ ಮಾಡುತ್ತೀರಿ.

ನಿಮ್ಮ ಗುರಿಗಳು ಮತ್ತು ಮೌಲ್ಯಗಳ ಮೇಲೆ ಕೇಂದ್ರೀಕರಿಸಿ: ನಿಮ್ಮನ್ನು ಇತರರೊಂದಿಗೆ ಹೋಲಿಸುವ ಬದಲು, ನಿಮ್ಮ ಸ್ವಂತ ಗುರಿಗಳು ಮತ್ತು ಮೌಲ್ಯಗಳ ಮೇಲೆ ಕೇಂದ್ರೀಕರಿಸಿ. ಮತ್ತು ಅವು ಈಡೇರಲು ಹೆಚ್ಚು ಕೆಲಸ ಮಾಡಿ, ಅಲ್ಲದೆ ನಿಮಗೆ ಜೀವನದಲ್ಲಿ ನಿಮಗೆ ಮುಖ್ಯವಾದುದನ್ನು ನೆನಪಿಸಿಕೊಳ್ಳಿ.

ಅಧಿಕೃತ ಸಂಬಂಧ ಬೆಸೆಯಲಿ: ಸಾಮಾಜಿಕ ಮಾಧ್ಯಮದ ಬಗ್ಗೆ ಹೆಚ್ಚು ಗಮನ ಕೊಡುವ ಬದಲು, ನಿಜ ಜೀವನದಲ್ಲಿ ಜನರೊಂದಿಗೆ ಅಧಿಕೃತ ಸಂಬಂಧ ಬೆಸೆಯಲು ಸಮಯ ನೀಡಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ನಿಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ಕ್ಲಬ್‌ಗಳು ಅಥವಾ ಗುಂಪುಗಳನ್ನು ಸೇರಿಕೊಳ್ಳಿ.

Published On - 12:30 pm, Thu, 6 April 23

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ