ನಿಮ್ಮ ಆಭರಣವನ್ನು ಆತ್ಮೀಯರಿಗೆ ಧರಿಸಲು ಕೊಡ್ತೀರಾ? ಈ ತಪ್ಪು ಎಂದಿಗೂ ಮಾಡ್ಲೇಬೇಡಿ
ಸೌಂದರ್ಯ ಹೆಚ್ಚಿಸುವ ಆಭರಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲಿ ಮಹಿಳೆಯರಿಗೆ ಒಡವೆಗಳ ಮೇಲೆ ಹೆಚ್ಚು ವ್ಯಾಮೋಹವಿರುತ್ತದೆ. ಕೈಗೆ, ಕೊರಳಿಗೆ ಕಿವಿ ಬಗೆ ಬಗೆಯ ವಿನ್ಯಾಸದ ಆಭರಣಗಳನ್ನು ಮಾಡಿ ಧರಿಸುತ್ತಾರೆ. ತಮ್ಮಲ್ಲಿ ಎಷ್ಟೇ ಒಡವೆಗಳಿದ್ದರೂ ಬೇರೆಯವರು ಧರಿಸುವ ಆಭರಣದ ಮೇಲೆ ಕಣ್ಣೀರುತ್ತದೆ. ಹೀಗಾಗಿ ನಿಮ್ಮ ಆತ್ಮೀಯರು ಅಥವಾ ಸ್ನೇಹಿತರು ಒಂದು ದಿನದ ಮಟ್ಟಿಗೆ ಈ ಆಭರಣ ಕೊಡುವೆಯಾ ಎಂದು ಕೇಳಿರುವ ಅನುಭವ ನಿಮಗಾಗಿರಬಹುದು. ಆದರೆ ನಿಮ್ಮ ಒಡವೆಗಳನ್ನು ಇತರರಿಗೆ ಧರಿಸಲು ನೀಡಬಾರದು ಎನ್ನುವುದು ಏಕೆ? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಹಬ್ಬ ಹರಿದಿನಗಳಿರಲಿ, ಶುಭ ಸಮಾರಂಭಗಳಿರಲಿ ಹೆಣ್ಣು ಮಕ್ಕಳು ಆಭರಣ (Jewellery)ಗಳನ್ನು ಧರಿಸುತ್ತಾರೆ. ಹೆಣ್ಣು ಮಕ್ಕಳಿಗೆ ಆಭರಣಕ್ಕೂ ಎಲ್ಲಿಲ್ಲದ ನಂಟಿದೆ. ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುವ ಈ ಒಡವೆಗಳು ಪ್ರತಿಷ್ಠೆಯ ಸಂಕೇತ ಕೂಡ ಆಗಿದೆ. ಅದರಲ್ಲಿಯೂ ತಮ್ಮಲ್ಲಿ ಬಗೆ ಬಗೆಯ ವಿನ್ಯಾಸದ ಅಭರಣಗಳಿದ್ದರೆ ತಮ್ಮ ಸ್ನೇಹಿತರು ಹಾಗೂ ಸುತ್ತಮುತ್ತಲಿನ ಮಹಿಳೆಯರು ಧರಿಸಿರುವ ಆಭರಣಗಳು ಇವರನ್ನು ಸೆಳೆಯುತ್ತವೆ. ಸಹೋದರಿಯರು, ಆತ್ಮೀಯರು ಅಥವಾ ಸ್ನೇಹಿತರಿದ್ದರೆ ತಮ್ಮ ಒಡವೆಗಳನ್ನು ವಿನಿಮಯ ಮಾಡಿಕೊಂಡು ಧರಿಸುತ್ತಾರೆ. ಆದರೆ ನೀವು ಧರಿಸುವ ಒಡವೆಗಳನ್ನು ಇತರರಿಗೆ ಯಾವುದೇ ಕಾರಣಕ್ಕೂ ಕೊಡಬಾರದು ಎಂದು ಹೇಳುವುದಿದೆ. ಇದರ ಹಿಂದೆ ಆರೋಗ್ಯ (Helath) ಕ್ಕೆ ಸಂಬಂಧಿತ ಹಾಗೂ ಆಧ್ಯಾತ್ಮಿಕ (Spiritual) ಕಾರಣಗಳು ಸೇರಿವೆ.
* ಹೆಣ್ಣಿನ ಹದಿನಾರು ಶೃಂಗಾರಗಳಲ್ಲಿ ಒಡವೆಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಒಬ್ಬ ಸ್ತ್ರೀ ಮನೆಯಲ್ಲಿರುವ ಆಭರಣವನ್ನು ಯಾರಿಗೂ ಕೂಡ ಕೊಡಬಾರದು. ಈ ಆಭರಣದಲ್ಲಿ ಲಕ್ಷ್ಮೀದೇವಿ ವಾಸವಾಗಿದ್ದಾಳೆ, ಹೀಗಾಗಿ ಮದುವೆಯಾದ ಸ್ತ್ರೀ ತನ್ನ ಒಡವೆಗಳನ್ನು ದಾನವಾಗಿ ಕೊಡಬಾರದು. ಒಂದು ಬೇರೆಯವರಿಗೆ ಒಡವೆಗಳನ್ನ ಧರಿಸಲು ಕೊಟ್ಟರೆ ಆಕೆಯ ಜೀವನದಲ್ಲಿ ಬಡತನ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ.
* ಹೆಚ್ಚಿನ ಮಹಿಳೆಯರು ಬೇರೆಯವರ ಆಭರಣವನ್ನು ಧರಿಸುತ್ತಾರೆ. ಅದರಲ್ಲಿ ಒಬ್ಬರು ಧರಿಸಿದ ಉಂಗುರವನ್ನು ಇಷ್ಟಪಟ್ಟು ಕೈ ಬೆರಳಿಗೆ ಹಾಕಿಕೊಳ್ಳುತ್ತಾರೆ. ಆದರೆ ಈ ತಪ್ಪನ್ನು ನೀವು ಎಂದಿಗೂ ಮಾಡಬಾರದಂತೆ. ನಿಮ್ಮ ಬೇರೆಯವರಿಗೆ ಉಂಗುರಗಳನ್ನು ಧರಿಸಲು ನೀಡಿದರೆ ನಿಮ್ಮ ಅದೃಷ್ಟವು ಕೈಕೊಡಬಹುದು ಎನ್ನುವ ನಂಬಿಕೆಯಿದೆ.
ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ
* ನಿಮ್ಮ ಆತ್ಮೀಯರು ಅಥವಾ ಸ್ನೇಹಿತರು ನಿಮ್ಮ ಆಭರಣ ಧರಿಸಲು ಕೇಳಿದರೆ ತೆಗೆದುಕೊಡಬೇಡಿ. ಒಂದು ವೇಳೆ ಯಾರಿಗಾದರೂ ಒಣ ಚರ್ಮ, ಇಸುಬು, ಸೋರಿಯಾಸಿಸ್, ಗಜಕರ್ಣದಂತಹ ಚರ್ಮದ ಸಮಸ್ಯೆಗಳು ಇದ್ದರೆ ಅದು ಹರಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದಲ್ಲದೇ ನಿಮ್ಮ ಆಭರಣ ಬೇರೆಯವರು ಧರಿಸಿದ್ದರೆ ಅದನ್ನು ಹಾಗೆಯೇ ನೀವು ಬಳಕೆ ಮಾಡಬೇಡಿ. ಅನಿವಾರ್ಯ ಸಂದರ್ಭದಲ್ಲಿ ಆಭರಣಗಳನ್ನು ಬೇರೆಯವರಿಗೆ ಧರಿಸಲು ಕೊಟ್ಟರೂ ನೀವು ಧರಿಸುವ ಮುನ್ನ ನೀರಿನಲ್ಲಿ ಅದ್ದಿ ತೆಳುವಾದ ಬಟ್ಟೆಯಲ್ಲಿ ಒರೆಸಿ ಧರಿಸುವುದು ಸೂಕ್ತ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Fri, 28 March 25