ಒಬ್ಬ ವ್ಯಕ್ತಿಯು ನಿಮ್ಮ ಸ್ನೇಹವನ್ನು ಉಳಿಸಿಕೊಳ್ಳದಿರಬಹುದು. ಆದರೆ ಶ್ವಾನ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ಸದಾ ನಿಲ್ಲುವ ಮುಗ್ಧ ಜೀವಿ. ಶ್ವಾನವನ್ನು ವಿಶ್ವಾಸರ್ಹ ಹಾಗೂ ಸ್ನೇಹ ಜೀವಿ ಎಂದು ಪರಿಗಣಿಸಲಾಗುತ್ತದೆ. ಬೆಕ್ಕು ಅಥವಾ ಇತರ ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಸಾಕಿದ್ದರೂ, ನಾಯಿಯನ್ನು ಸಾಕುವುದು ವಿಭಿನ್ನ ಭಾವನೆಯನ್ನು ನೀಡುತ್ತದೆ. ನಾಯಿಯ ವಿಶೇಷತೆ ಎಂದರೆ ಅದು ಬೇಗನೆ ಸ್ನೇಹಪರವಾಗುತ್ತದೆ. ಜೊತೆಗೆ ಒಂದು ಉತ್ತಮ ಸ್ನೇಹ ಬಂಧವು ನಾಯಿ ಮತ್ತು ಅದರ ಮಾಲೀಕನ ನಡುವೆ ರೂಪುಗೊಳ್ಳುತ್ತದೆ. ಇತ್ತೀಚೆಗಷ್ಟೇ ನಡೆಸಿದ ಅಧ್ಯಯನವೊಂದರ ಪ್ರಕಾರ, ಮನೆಯಲ್ಲಿ ನಾಯಿಯನ್ನು ಸಾಕುವುದು ಮರೆವಿನಂತಹ ಗಂಭೀರ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.
ವಿಶ್ವದಲ್ಲೇ ಸುಮಾರು 55 ಮಿಲಿಯನ್ ಜನರು ಮರೆವಿನಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ. ಈ ಗಂಭೀರ ಕಾಯಿಲೆಯ ಲಕ್ಷಣಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತಿತ್ತು. ಆದರೆ ಬದಲಾಗುತ್ತಿರುವ ಪರಿಸರ ಮತ್ತು ಸಮಸ್ಯೆಗಳಿಂದಾಗಿ, ಇದು 40 ವರ್ಷ ವಯಸ್ಸಿನ ನಂತರದ ಜನರನ್ನು ಬಾಧಿಸಲು ಪ್ರಾರಂಭಿಸಿದೆ.
ಜಪಾನ್‌ನ ಟೋಕಿಯೊ ಮೆಟ್ರೋಪಾಲಿಟನ್ ಇನ್‌ಸ್ಟಿಟ್ಯೂಟ್ ಆಫ್ ಜೆರೊಂಟಾಲಜಿ, ಜಪಾನ್ ನಗರದಲ್ಲಿ ವಾಸಿಸುವ ಸುಮಾರು 12000 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಎಲ್ಲಾ ಜನರು ವಿವಿಧ ತಳಿಗಳ ನಾಯಿಗಳನ್ನು ಹೊಂದಿದ್ದರು. ಅಧ್ಯಯನದ ಪ್ರಕಾರ, ಮನೆಯಲ್ಲಿ ನಾಯಿ ಸಾಕಿರುವ ಜನರು ಬಯಸದೆಯೂ ಅನೇಕ ಚಟುವಟಿಕೆಗಳನ್ನು ಮಾಡುತ್ತಾರೆ. ಅಂದರೆ ವಾಕಿಂಗ್ ಅಭ್ಯಾಸವಿಲ್ಲದಿದ್ದರೂ, ತನ್ನ ಶ್ವಾನದೊಂದಿಗೆ ಹೊರಗೆ ವಾಕ್ ಹೋಗುವುದು,ಜನರೊಂದಿಗೆ ಮಾತನಾಡುವುದು ಮತ್ತು ಇತರ ಚಟುವಟಿಕೆಗಳನ್ನು ಮಾಡುತ್ತಿರುವುದು ಸಂಶೋಧಕರಿಗೆ ತಿಳಿದುಬಂದಿದೆ. ದೈನಂದಿನ ಜೀವನಕ್ರಮದಲ್ಲಿ ಇಂತಹ ಅಭ್ಯಾಸಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಇದನ್ನೂ ಓದಿ: ಜೇಬಿನಲ್ಲಿ ಲಕ್ಷ ಲಕ್ಷ ದುಡ್ಡಿಟ್ಟುಕೊಂಡಿದ್ದರೂ, ಹಸಿವಿನಿಂದ ಸಾವನ್ನಪಿದ್ದ ಭಿಕ್ಷುಕ
ನಾಯಿಯನ್ನು ಜೊತೆಯಲ್ಲಿ ಸಾಕಿಕೊಂಡರೆ ನೀವು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ ಎನ್ನುತ್ತಾರೆ ತಜ್ಞರು. ಹೊರಾಂಗಣ ಚಟುವಟಿಕೆಗಳ ಹೊರತಾಗಿ, ಮನೆಯ ವಾತಾವರಣವೂ ಸಕಾರಾತ್ಮಕವಾಗಿರುತ್ತದೆ. ಇದರಿಂದಾಗಿ ಮೆದುಳಿಗೆ ವ್ಯಾಯಾಮ ಸಿಗುತ್ತದೆ. ಈ ಕಾರಣದಿಂದ ಮರೆವಿನಂತಹ ಅಪಾಯಕಾರಿ ರೋಗಗಳು ನಿಮ್ಮಿಂದ ದೂರ ಉಳಿಯುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:57 pm, Fri, 8 December 23