
ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯವೆಂದರೆ ಅಳಲೆ ಕಾಯಿ ಸಸ್ಯ. ಅಡುಗೆಮನೆಯ ವೈದ್ಯೆ ಎನ್ನಲಾಗುವ ಅಳಲೆಕಾಯಿಯಲ್ಲಿ ಸಕಲರೋಗಗಳನ್ನು ಶಮನ ಮಾಡುವ ಗುಣವಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಅಳಲೆ ಕಾಯಿಯನ್ನು ಮನೆ ಮದ್ದಾಗಿ ಬಳಸಲಾಗುತ್ತದೆ. ಇದನ್ನು ಮನೆ ಮದ್ದಿನ ರೂಪದಲ್ಲಿ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಬಳಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ.
* ಅಳಲೆ ಕಾಯಿಯ ಸಿಪ್ಪೆಯ ಕಾಲುಭಾಗವನ್ನು ಜೇನುತುಪ್ಪದಲ್ಲಿ ತೇಯ್ದು ಮುಂಜಾನೆ ಹಾಗೂ ರಾತ್ರಿಯ ವೇಳೆ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.
* ಅಳಲೆಕಾಯಿ, ನೆಲ್ಲಿಕಾಯಿ ಮತ್ತು ಜೇಷ್ಠ ಮಧು ಇವುಗಳನ್ನು ಸಮಭಾಗದಲ್ಲಿ ತೆಗೆದುಕೊಂಡು ಪುಡಿ ಮಾಡಿ, ಅದಕ್ಕೆ ಸಕ್ಕರೆ ಸೇರಿಸಿ ಹಾಲಿನಲ್ಲಿ ಹಾಕಿಕೊಂಡು ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.
* ಅಳಲೆಕಾಯಿ, ದ್ರಾಕ್ಷಿ, ಹಿಪ್ಪಲಿ ಸಮಪ್ರಮಾಣದಲ್ಲಿ ಅರೆದು ಮಾತ್ರೆಗಳಂತೆ ಮಾಡಿಕೊಂಡು ಸೇವಿಸಿದರೆ ಕೆಮ್ಮಿಗೆ ಉತ್ತಮ ಔಷಧಿ.
* ಅರ್ಧ ಚಮಚ ಅಳಲೆ ಕಾಯಿ ಸಿಪ್ಪೆಯನ್ನು ಪುಡಿ ಮಾಡಿ ಅರ್ಧ ಚಮಚ ಶುದ್ದ ಹರಳೆಣ್ಣೆಯಲ್ಲಿ ಬೆರೆಸಿ ಪ್ರತಿದಿನ ಬೆಳಗ್ಗೆ ಒಂದು ವಾರ ಕಾಲ ಸೇವಿಸುತ್ತಿದ್ದರೆ ಕೀಲುನೋವು ಗುಣಮುಖವಾಗುತ್ತದೆ.
* ಮೂಲವ್ಯಾಧಿ ಸಮಸ್ಯೆ ಇದ್ದವರು ಅಳಲೆ ಕಾಯಿ ಪುಡಿಗೆ ಬೆಲ್ಲ ಸೇರಿಸಿ ತಿಂದರೆ ಶಮನವಾಗುತ್ತದೆ.
* ಅಳಲೆ ಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಸಿವಾಗುವುದನ್ನು ಹೆಚ್ಚಿಸುತ್ತದೆ.
* ಅಳಲೆಕಾಯಿ ತೇಯ್ದು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
* ಬೆಲ್ಲದೊಂದಿಗೆ ಅಳಲೆಕಾಯಿಯನ್ನು ಸೇವಿಸಿದರೆ ತ್ರಿದೋಷಗಳು ದೂರವಾಗುತ್ತದೆ.
* ಅಳಲೆಕಾಯಿಯನ್ನು ಒಣ ಶುಂಠಿಯೊಂದಿಗೆ ಸೇವಿಸಿದರೆ ಕಫ ಸಮಸ್ಯೆಯು ದೂರವಾಗುತ್ತದೆ.
* ಪಿತ್ತವಿದ್ದರೆ ಅಳಲೆಕಾಯಿಗೆ ತುಪ್ಪ ಬೆರೆಸಿ ಸೇವಿಸುವುದು ಉತ್ತಮ.
ಇದನ್ನೂ ಓದಿ: ಹೊಸ ಹೊಸ ಅವಿಷ್ಕಾರದ ಫಲವಾಗಿ ಮಾನವನ ಜೀವನದ ಹಾದಿ ಇನ್ನಷ್ಟು ಸುಗಮ
* ಅಳಲೆಕಾಯಿಯೊಂದಿಗೆ ಸೈಂಧವಲವಣ ಸೇರಿಸಿ ಸೇವಿಸಿದರೆ ವಾತಕ್ಕೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.
* ಅಳಲೆ ಕಾಯಿ ಬೇಯಿಸಿ ತಿಂದರೆ ಅತಿಸಾರ ಸಮಸ್ಯೆಗೆ ರಾಮಬಾಣ.
* ಅಳಲೆ ಕಾಯಿ ಚೂರ್ಣ ಒಣ ಶುಂಠಿ ಸೇರಿಸಿ ಕಷಾಯ ತಯಾರಿಸಿ, ನಂತರ ಜೇನು ಬೆರೆಸಿ ಕುಡಿದರೆ ಕೆಮ್ಮು ಕಫದ ಸಮಸ್ಯೆಯು ದೂರವಾಗುತ್ತದೆ.
* ಕಾಲು ಉರಿ ಸಮಸ್ಯೆಯಿದ್ದರೆ ಅಳಲೆ ಕಾಯಿ ಚೂರ್ಣವನ್ನು ಹಚ್ಚುವುದು ಪರಿಣಾಮಕಾರಿಯಾಗಿದೆ.
* ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಹಾಗೂ ವಸಡಿಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುತ್ತದೆ.
* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುವುದಲ್ಲದೆ, ಅನಗತ್ಯ ಕೊಬ್ಬು ನಿವಾರಣೆಯಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Tue, 27 February 24