Anant Ambani: ಕೇವಲ 18 ತಿಂಗಳಲ್ಲಿ 108 ಕೆಜಿ ಇಳಿಸಿದ್ದ ಅನಂತ್ ಅಂಬಾನಿ; ಇಲ್ಲಿದೆ ಡಯೆಟ್ ಪ್ಲಾನ್

Weight Loss: ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಅವರ ನಿಶ್ಚಿತಾರ್ಥದ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಅನಂತ್ ಅಂಬಾನಿ ತೂಕ ಇದ್ದಕ್ಕಿದ್ದಂತೆ ಮತ್ತೆ ಹೆಚ್ಚಳಗೊಂಡಿದ್ದರ ಬಗ್ಗೆ ಚರ್ಚೆಗಳು ನಡೆದಿತ್ತು. ಏಕೆಂದರೆ, ಕೆಲವು ವರ್ಷಗಳ ಹಿಂದೆ ಅನಂತ್ ಅಂಬಾನಿ 108 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದರು. ಇದು ಸಾಧ್ಯವಾಗಿದ್ದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Anant Ambani: ಕೇವಲ 18 ತಿಂಗಳಲ್ಲಿ 108 ಕೆಜಿ ಇಳಿಸಿದ್ದ ಅನಂತ್ ಅಂಬಾನಿ; ಇಲ್ಲಿದೆ ಡಯೆಟ್ ಪ್ಲಾನ್
ಅನಂತ್ ಅಂಬಾನಿ
Follow us
|

Updated on: Feb 27, 2024 | 12:08 PM

ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ (Nita Ambani) ಅವರ ಮಗ ಅನಂತ್ ಅಂಬಾನಿ (Anant Ambani) ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ 108 ಕೆ.ಜಿ ಇಳಿಸಿಕೊಂಡು ಭಾರೀ ಸುದ್ದಿಯಾಗಿದ್ದರು. ವಿಪರೀತ ದಪ್ಪವಾಗಿದ್ದ ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ 108 ಕೆಜಿ ಇಳಿಸಿಕೊಂಡು ಚಾಕೋಲೇಟ್ ಬಾಯ್ ರೀತಿ ಆಗಿದ್ದು ಅನೇಕರ ಹುಬ್ಬೇರಿಸಿತ್ತು. 208 ಕೆಜಿ ಇದ್ದ ಅನಂತ್ ಅಂಬಾನಿ 100 ಕೆಜಿಗೆ ತಮ್ಮ ತೂಕವನ್ನು ಇಳಿಸಿಕೊಂಡಿದ್ದು (Weight Loss) ಕೇವಲ ಕಟ್ಟುನಿಟ್ಟಾದ ಡಯೆಟ್ ಮತ್ತು ಫಿಟ್​ನೆಸ್​ ಪ್ಲಾನ್​ನಿಂದ (Fitness Plan) ಎಂಬುದು ವಿಶೇಷ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ 108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್ ಅಂಬಾನಿಗೆ ಫಿಟ್​ನೆಸ್ ಕೋಚ್ ಆಗಿದ್ದವರು ವಿನೋದ್ ಖನ್ನಾ.

ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ ಅವರು ವಿನ್ಯಾಸಗೊಳಿಸಿದ ದಿನಚರಿಯನ್ನು ಅನುಸರಿಸುವ ಮೂಲಕ ಅನಂತ್ ಅಂಬಾನಿ ಪ್ರಭಾವಶಾಲಿ 18 ತಿಂಗಳೊಳಗೆ 108 ಕೆಜಿ ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಯೋಗ, ಕ್ರಿಯಾತ್ಮಕ ತರಬೇತಿ, ತೂಕ ಎತ್ತುವಿಕೆ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಿದ್ದ ಅನಂತ್ ಅಂಬಾನಿ ದಿನವೂ 21 ಕಿಮೀ ಓಡುತ್ತಿದ್ದರು. ಅಂದರೆ, ದಿನಕ್ಕೆ ಐದರಿಂದ 6 ಗಂಟೆಗಳನ್ನು ಅವರು ಫಿಟ್​ನೆಸ್​ಗಾಗಿ ಮೀಸಲಿಡುತ್ತಿದ್ದರು.

ಇದನ್ನೂ ಓದಿ: ಕ್ಯಾನ್ಸರ್, ಮಧುಮೇಹದಿಂದ ಮಹಿಳೆಯರನ್ನು ಕಾಪಾಡುವ ಡಯೆಟ್ ಇಲ್ಲಿದೆ

2017ರಲ್ಲಿ ಅನಂತ್ ಅಂಬಾನಿಯವರ ತಾಯಿ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. “ಅನಂತ್ ಅಂಬಾನಿಯ ದೇಹದ ತೂಕದ ಬಗ್ಗೆ ಅನೇಕರು ಅಪಹಾಸ್ಯ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಆದರೆ, ಅನಂತ್​ಗೆ ಆರೋಗ್ಯ ಸಮಸ್ಯೆ ಇತ್ತು. ಅನಂತ್​ ಆಸ್ತಮಾದಿಂದ ಬಳಲುತ್ತಿದ್ದರು. ಆದ್ದರಿಂದ ನಾವು ಅವರಿಗೆ ಸಾಕಷ್ಟು ಸ್ಟೀರಾಯ್ಡ್​ಗಳನ್ನು ನೀಡಬೇಕಾಯಿತು. ಇದರಿಂದ ಅವರ ದೇಹದ ತೂಕ ಹೆಚ್ಚುತ್ತಾ ಹೋಯಿತು.” ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಇದೀಗ ಅನಂತ್ ಅಂಬಾನಿಯ ತೂಕ ಮತ್ತೆ ಹೆಚ್ಚಾಗಿದೆ. ಇದಕ್ಕೆ ಕಾರಣವೇನಿರಬಹುದು ಎಂಬುದರ ಬಗ್ಗೆ ಆನ್‌ಲೈನ್‌ನಲ್ಲಿ ತಜ್ಞರು ಚರ್ಚೆ ಮಾಡುತ್ತಿದ್ದಾರೆ. ಆಸ್ತಮಾ ಮತ್ತು ಸ್ಟೀರಾಯ್ಡ್‌ಗಳು ತೂಕ ಹೆಚ್ಚಾಗಲು ಹೇಗೆ ಕೊಡುಗೆ ನೀಡುತ್ತವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಈ ವರ್ಷ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಮಾರ್ಚ್ 1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಅವರ ವಿವಾಹದ ಪೂರ್ವ ಸಂಭ್ರಮಗಳು ನಡೆಯಲಿವೆ. ಅನಂತ್ ಅಂಬಾನಿ ಅವರ ತೂಕ ಇಳಿಕೆ ಮತ್ತು ನಂತರದ ಹೆಚ್ಚಳದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಗಾದರೆ, ಅನಂತ್ ಅಂಬಾನಿ ಕೆಲವೇ ತಿಂಗಳುಗಳಲ್ಲಿ 108 ಕೆಜಿ ತೂಕವನ್ನು ಹೇಗೆ ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು ಎಂಬುದನ್ನು ನಾವು ನೋಡೋಣ.

ಇದನ್ನೂ ಓದಿ: Weight Loss: ಬೆಳಗಿನ ಈ ತಿಂಡಿಯಿಂದ ಆರೋಗ್ಯ, ಫಿಟ್​ನೆಸ್ ಕಾಪಾಡಿಕೊಳ್ಳುವುದು ಸುಲಭ

ಅನಂತ್ ತಮ್ಮ ತೂಕ ಇಳಿಸುವ ಪಯಣಕ್ಕೆ ಬದ್ಧರಾಗಿದ್ದು, ಅತಿಯಾಗಿ ತಿನ್ನುವ ಅಭ್ಯಾಸ ಮತ್ತು ಜಂಕ್ ಫುಡ್‌ ಸೇವನೆಯನ್ನು ಸಂಪೂರ್ಣವಾಗಿ ನಿ್ಲಲಿಸಿದ್ದರು. ಹೆಚ್ಚಿನ ಪ್ರೊಟೀನ್, ಹೈ ಫೈಬರ್ ಮತ್ತು ಕಡಿಮೆ ಕಾರ್ಬ್ ಆಹಾರಗಳನ್ನು ಒಳಗೊಂಡಂತೆ ಅನಂತ್ ಅಂಬಾನಿಗಾಗಿ ವಿಶೇಷ ಡಯೆಟ್ ಪ್ಲಾನ್ ರಚಿಸಲಾಗಿತ್ತು. ಅವರ ಆಹಾರದಲ್ಲಿ ಸಾಕಷ್ಟು ತರಕಾರಿಗಳು, ಕಾಟೇಜ್ ಚೀಸ್, ಮಸೂರಗಳು, ಕಾಳುಗಳು ಮತ್ತು ಅರ್ಧ ಟೀಚಮಚ ತುಪ್ಪ ಸೇರಿಸಲಾಗುತ್ತಿತ್ತು. ಇದು ಅವರು ಅನುಸರಿಸಬೇಕಾದ ಏಕೈಕ ಡಯೆಟ್ ಆಗಿತ್ತು. ಒಂದು ದಿನದಲ್ಲಿ ಅವರ ಕ್ಯಾಲೋರಿ ಸೇವನೆಯು 1200 -1400 ಕ್ಯಾಲೋರಿಗಳು ಮಾತ್ರ ಇತ್ತು” ಎಂದು ವಿನೋದ್ ಚನ್ನಾ ಹೇಳಿದ್ದಾರೆ.

ಅನಂತ್ ಅಂಬಾನಿ ಜಂಕ್ ಫುಡ್ ತ್ಯಜಿಸಿ ತೂಕ ಇಳಿಸಿಕೊಳ್ಳಲು ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರವನ್ನು ಅನುಸರಿಸಿದರು. ಅವರು ಆಗಾಗ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸುತ್ತಿದ್ದರು. ಯಥೇಚ್ಛವಾಗಿ ನೀರು ಕುಡಿಯುತ್ತಿದ್ದರು. ಪಾಸಿಟಿವ್ ಮನಸ್ಥಿತಿಗಾಗಿ ಅನಂತ್ ಅಂಬಾನಿ ಧ್ಯಾನ, ಯೋಗವನ್ನು ಮಾಡುತ್ತಿದ್ದರು.

ವಿನೋದ್ ಚನ್ನಾ ಅನಂತ್ ಅಂಬಾನಿಯವರಿಗೆ ಮಾತ್ರವಲ್ಲದೆ, ನೀತಾ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ, ಅನನ್ಯಾ ಬಿರ್ಲಾ ಮತ್ತು ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ ಕುಂದ್ರಾ, ಹರ್ಷವರ್ಧನ್ ರಾಣೆ, ವಿವೇಕ್ ಒಬೆರಾಯ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ವೈಯಕ್ತಿಕ ಫಿಟ್​ನೆಸ್ ತರಬೇತುದಾರರಾಗಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್