AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಲೆ ಕಾಯಿಯಲ್ಲಿದೆ ಸಕಲರೋಗಗಳನ್ನು ನಿವಾರಿಸುವ ಗುಣ, ಇಲ್ಲಿದೆ ಸರಳ ಮನೆ ಮದ್ದು

ಭಾರತೀಯ ಗಿಡ ಮೂಲಿಕೆಯ ಔಷಧಿಗಳಲ್ಲಿ ಪ್ರತಿಯೊಂದು ಸಸ್ಯವು ಪ್ರಯೋಜನಕಾರಿಯಾಗಿದೆ. ಗಿಡಮೂಲಿಕೆ ಸಸ್ಯಗಳ ಬಗ್ಗೆ ಅಷ್ಟಾಗಿ ಅರಿವು ಇಲ್ಲದಿದ್ದರೆ ಸಣ್ಣ ಪುಟ್ಟ ಕಾಯಿಲೆಗಳು ಬಂದಾಗ ಮನೆ ಮದ್ದಿನ ಮೂಲಕ ಗುಣಪಡಿಸಲು ಮುಂದಾದಾಗಲೇ ಅಂತಹ ಸಸ್ಯಗಳತ್ತ ಗಮನ ಕೊಡುತ್ತೇವೆ. ಅಂತಹ ಗಿಡಮೂಲಿಕೆ ಸಸ್ಯಗಳಲ್ಲಿ ಅಳಲೆಕಾಯಿ ಕೂಡ ಒಂದು. ಹಲವಾರು ರೋಗಗಳನ್ನು ಗುಣಪಡಿಸುವ ಈ ಅಳಲೆಕಾಯಿಯು ಅದ್ಭುತ ಮೆಡಿಸಿನ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಳಲೆ ಕಾಯಿಯಲ್ಲಿದೆ ಸಕಲರೋಗಗಳನ್ನು ನಿವಾರಿಸುವ ಗುಣ, ಇಲ್ಲಿದೆ ಸರಳ ಮನೆ ಮದ್ದು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Feb 27, 2024 | 3:51 PM

Share

ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯವೆಂದರೆ ಅಳಲೆ ಕಾಯಿ ಸಸ್ಯ. ಅಡುಗೆಮನೆಯ ವೈದ್ಯೆ ಎನ್ನಲಾಗುವ ಅಳಲೆಕಾಯಿಯಲ್ಲಿ ಸಕಲರೋಗಗಳನ್ನು ಶಮನ ಮಾಡುವ ಗುಣವಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಅಳಲೆ ಕಾಯಿಯನ್ನು ಮನೆ ಮದ್ದಾಗಿ ಬಳಸಲಾಗುತ್ತದೆ. ಇದನ್ನು ಮನೆ ಮದ್ದಿನ ರೂಪದಲ್ಲಿ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಬಳಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ.

* ಅಳಲೆ ಕಾಯಿಯ ಸಿಪ್ಪೆಯ ಕಾಲುಭಾಗವನ್ನು ಜೇನುತುಪ್ಪದಲ್ಲಿ ತೇಯ್ದು ಮುಂಜಾನೆ ಹಾಗೂ ರಾತ್ರಿಯ ವೇಳೆ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

* ಅಳಲೆಕಾಯಿ, ನೆಲ್ಲಿಕಾಯಿ ಮತ್ತು ಜೇಷ್ಠ ಮಧು ಇವುಗಳನ್ನು ಸಮಭಾಗದಲ್ಲಿ ತೆಗೆದುಕೊಂಡು ಪುಡಿ ಮಾಡಿ, ಅದಕ್ಕೆ ಸಕ್ಕರೆ ಸೇರಿಸಿ ಹಾಲಿನಲ್ಲಿ ಹಾಕಿಕೊಂಡು ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.

* ಅಳಲೆಕಾಯಿ, ದ್ರಾಕ್ಷಿ, ಹಿಪ್ಪಲಿ ಸಮಪ್ರಮಾಣದಲ್ಲಿ ಅರೆದು ಮಾತ್ರೆಗಳಂತೆ ಮಾಡಿಕೊಂಡು ಸೇವಿಸಿದರೆ ಕೆಮ್ಮಿಗೆ ಉತ್ತಮ ಔಷಧಿ.

* ಅರ್ಧ ಚಮಚ ಅಳಲೆ ಕಾಯಿ ಸಿಪ್ಪೆಯನ್ನು ಪುಡಿ ಮಾಡಿ ಅರ್ಧ ಚಮಚ ಶುದ್ದ ಹರಳೆಣ್ಣೆಯಲ್ಲಿ ಬೆರೆಸಿ ಪ್ರತಿದಿನ ಬೆಳಗ್ಗೆ ಒಂದು ವಾರ ಕಾಲ ಸೇವಿಸುತ್ತಿದ್ದರೆ ಕೀಲುನೋವು ಗುಣಮುಖವಾಗುತ್ತದೆ.

* ಮೂಲವ್ಯಾಧಿ ಸಮಸ್ಯೆ ಇದ್ದವರು ಅಳಲೆ ಕಾಯಿ ಪುಡಿಗೆ ಬೆಲ್ಲ ಸೇರಿಸಿ ತಿಂದರೆ ಶಮನವಾಗುತ್ತದೆ.

* ಅಳಲೆ ಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಸಿವಾಗುವುದನ್ನು ಹೆಚ್ಚಿಸುತ್ತದೆ.

* ಅಳಲೆಕಾಯಿ ತೇಯ್ದು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

* ಬೆಲ್ಲದೊಂದಿಗೆ ಅಳಲೆಕಾಯಿಯನ್ನು ಸೇವಿಸಿದರೆ ತ್ರಿದೋಷಗಳು ದೂರವಾಗುತ್ತದೆ.

* ಅಳಲೆಕಾಯಿಯನ್ನು ಒಣ ಶುಂಠಿಯೊಂದಿಗೆ ಸೇವಿಸಿದರೆ ಕಫ ಸಮಸ್ಯೆಯು ದೂರವಾಗುತ್ತದೆ.

* ಪಿತ್ತವಿದ್ದರೆ ಅಳಲೆಕಾಯಿಗೆ ತುಪ್ಪ ಬೆರೆಸಿ ಸೇವಿಸುವುದು ಉತ್ತಮ.

ಇದನ್ನೂ ಓದಿ: ಹೊಸ ಹೊಸ ಅವಿಷ್ಕಾರದ ಫಲವಾಗಿ ಮಾನವನ ಜೀವನದ ಹಾದಿ ಇನ್ನಷ್ಟು ಸುಗಮ

* ಅಳಲೆಕಾಯಿಯೊಂದಿಗೆ ಸೈಂಧವಲವಣ ಸೇರಿಸಿ ಸೇವಿಸಿದರೆ ವಾತಕ್ಕೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.

* ಅಳಲೆ ಕಾಯಿ ಬೇಯಿಸಿ ತಿಂದರೆ ಅತಿಸಾರ ಸಮಸ್ಯೆಗೆ ರಾಮಬಾಣ.

* ಅಳಲೆ ಕಾಯಿ ಚೂರ್ಣ ಒಣ ಶುಂಠಿ ಸೇರಿಸಿ ಕಷಾಯ ತಯಾರಿಸಿ, ನಂತರ ಜೇನು ಬೆರೆಸಿ ಕುಡಿದರೆ ಕೆಮ್ಮು ಕಫದ ಸಮಸ್ಯೆಯು ದೂರವಾಗುತ್ತದೆ.

* ಕಾಲು ಉರಿ ಸಮಸ್ಯೆಯಿದ್ದರೆ ಅಳಲೆ ಕಾಯಿ ಚೂರ್ಣವನ್ನು ಹಚ್ಚುವುದು ಪರಿಣಾಮಕಾರಿಯಾಗಿದೆ.

* ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಹಾಗೂ ವಸಡಿಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುತ್ತದೆ.

* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುವುದಲ್ಲದೆ, ಅನಗತ್ಯ ಕೊಬ್ಬು ನಿವಾರಣೆಯಾಗುತ್ತದೆ.

ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Tue, 27 February 24

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!