ಕಾಂತಿಯುಕ್ತ ತ್ವಚೆಗಾಗಿ ಉಪ್ಪು ನೀರಿನಿಂದ ಮುಖ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ
ಒತ್ತಡಜೀವನ ಶೈಲಿಯಿಂದಾಗಿ ಸೌಂದರ್ಯ ಹಾಗೂ ದೇಹಾರೋಗ್ಯದ ಕಡೆಗೆ ಗಮನ ಕೊಡುವುದು ಕಷ್ಟವಾಗಬಹುದು. ಆದರೆ ಬಿಡುವು ಸಿಕ್ಕಾಗ ಮಾಡುವ ಕೆಲವು ಅಭ್ಯಾಸಗಳು ನಮ್ಮ ತ್ವಚೆ ಅಂದವು ಹಾಳಾಗದಂತೆ ನೋಡಿಕೊಳ್ಳಲು ಸಹಾಯಕವಾಗಿದೆ. ಸಾಮಾನ್ಯವಾಗಿ ಎಲ್ಲರೂ ಆಹಾರದ ರುಚಿ ಹೆಚ್ಚಿಸಲು ಉಪ್ಪನ್ನು ಬಳಸುತ್ತಾರೆ. ಹೀಗಾಗಿ ಮನೆಯಲ್ಲಿರುವ ಉಪ್ಪನ್ನು ನೀರಿಗೆ ಹಾಕಿ ಇದರಿಂದ ಮುಖವನ್ನು ತೊಳೆಯುವುದರಿಂದ ಸಾಕಷ್ಟು ಬದಲಾವಣೆಗಳಾಗುತ್ತದೆ. ಈ ಸಣ್ಣ ಅಭ್ಯಾಸವನ್ನು ರೂಢಿಸಿಕೊಂಡರೆ ತ್ವಚೆಯ ಅಂದವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಮಾತಿದೆ. ಮನೆಯಲ್ಲಿ ಯಾವುದೇ ಆಹಾರ ಮಾಡಿದರೂ ಅದಕ್ಕೆ ಉಪ್ಪು ಇಲ್ಲದೆ ಹೋದರೆ ಆಹಾರವು ರುಚಿಸುವುದೇ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಹಾಕಲೇಬೇಕು. ಆದರೆ ವಿಪರೀತ ಉಪ್ಪಿನಾಂಶವಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ರುಚಿ ಹೆಚ್ಚಿಸುವ ಈ ಉಪ್ಪಿನಿಂದ ನಾನಾ ರೀತಿಯ ಪ್ರಯೋಜನಗಳಿದ್ದು, ಉಪ್ಪು ನೀರಿನಿಂದ ಮುಖ ತೊಳೆಯುವುದು ಕೂಡ ಆರೋಗ್ಯಕರ ಅಭ್ಯಾಸವಾಗಿದೆ. ನಿಮ್ಮ ತ್ವಚೆಯನ್ನು ಸುರಕ್ಷಿತವಾಗಿ ಕಾಪಾಡಲು ಈ ವಿಧಾನವನ್ನು ಬಳಸಬಹುದು.
* ನೀರಿಗೆ ಉಪ್ಪು ಬೆರೆಸಿ ಮುಖವನ್ನು ತೊಳೆಯುವುದರಿಂದ ಚರ್ಮದ ಮೇಲಿರುವ ಕಲೆಗಳು ನಿವಾರಣೆಯಾಗುತ್ತದೆ. ದೇಹದ ಭಾಗದಲ್ಲಿರುವ ಕಲೆಗಳ ನಿವಾರಣೆಗೆ ಈ ಉಪ್ಪು ನೀರು ಪರಿಣಾಮಕಾರಿಯಾಗಿದೆ.
* ಉಪ್ಪು ಮಿಶ್ರಿತ ನೀರಿನಿಂದ ಮುಖ ತೊಳೆಯುವ ಅಭ್ಯಾಸದಿಂದ ಚರ್ಮವು ಮೃದುವಾಗುತ್ತದೆ. ಉಪ್ಪಿನಲ್ಲಿ ಮೆಗ್ನೀಸಿಯಮ್ ಇರುವ ಕಾರಣ ಇದು ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ.
* ಮುಖವನ್ನು ಉಪ್ಪು ನೀರಿನಿಂದ ತೊಳೆದರೆ ಚರ್ಮ ಬಿಗಿಯಾಗಿ, ಸದಾ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
* ಉಪ್ಪು ನೀರಿನಿಂದ ಮುಖ ತೊಳೆಯುವ ಅಭ್ಯಾಸವು ಮೊಡವೆಗಳಿಂದ ಮುಕ್ತಗೊಳಿಸುತ್ತದೆ.
* ನೀರ್ಜಿವ ಕೋಶಗಳನ್ನು ದೂರ ಮಾಡಿ ಮುಖದ ಕಾಂತಿಯು ಹೆಚ್ಚಾಗುತ್ತದೆ.
* ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರು ಉಪ್ಪು ನೀರಿನಿಂದ ಮುಖ ತೊಳೆಯುವುದು ಪರಿಣಾಮಕಾರಿಯಾಗಿದೆ. ಇದು ಎಣ್ಣೆಯುಕ್ತ ಚರ್ಮವನ್ನು ದೂರ ಮಾಡುತ್ತದೆ.
* ಉಪ್ಪು ನೀರಿನಲ್ಲಿರುವ ಖನಿಜಗಳು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಿ, ತ್ವಚೆಯ ಹೊಳಪನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇದನ್ನೂ ಓದಿ: ಅಳಲೆ ಕಾಯಿಯಲ್ಲಿದೆ ಸಕಲರೋಗಗಳನ್ನು ನಿವಾರಿಸುವ ಗುಣ, ಇಲ್ಲಿದೆ ಸರಳ ಮನೆ ಮದ್ದು
* ಉಪ್ಪು ನೀರಿನಿಂದ ಅಭ್ಯಾಸವನ್ನು ಬೆಳೆಸಿಕೊಂಡರೆ ಚರ್ಮದ ಉರಿಯೂತದಿಂದ ಉಂಟಾಗುವ ಎಸ್ಜಿಮಾ ಅಥವಾ ಸೋರಿಯಾಸಿಸ್ ಸೇರಿದಂತೆ ಇನ್ನಿತ್ತರ ಚರ್ಮದ ಸಮಸ್ಯೆಗಳನ್ನು ದೂರ ಮಾಡಿ ಚರ್ಮವನ್ನು ರಕ್ಷಿಸುತ್ತದೆ.
* ಉಪ್ಪು ನೀರಿನಿಂದ ಮುಖ ತೊಳೆಯುವುದರಿಂದ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಆದರೆ ಉಪ್ಪು ನೀರಿನಿಂದ ಮುಖ ತೊಳೆಯುವುದು ಎಲ್ಲಾ ಸ್ಕಿನ್ ಟೋನ್ ಗಳಿಗೂ ಆಗಿ ಬರುವುದಿಲ್ಲ. ಕೆಲವರಿಗೆ ಉಪ್ಪು ಮಿಶ್ರಿತ ನೀರಿನಿಂದ ಮುಖ ತೊಳೆದರೆ ಕಿರಿಕಿರಿ ಸೇರಿದಂತೆ ಇನ್ನಿತ್ತರ ಅಡ್ಡಪರಿಣಾಮಗಳಾಗಬಹುದು. ಹೀಗಾಗಿ ನಿಮ್ಮ ಚರ್ಮಕ್ಕೆ ಸೂಕ್ತವೆನಿಸಿದರೆ ಮಾತ್ರ ಉಪ್ಪು ನೀರಿನಿಂದ ಮುಖ ತೊಳೆದುಕೊಳ್ಳುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




