Ganesha Chaturthi 2023: ಗಣೇಶನಿಗೆ ಪ್ರಿಯವಾದ ಮೋದಕದಲ್ಲಿದೆ ಹಲವು ಆರೋಗ್ಯ ಪ್ರಯೋಜನ

Health Benefits Of  Modaka: ಮೋದಕವನ್ನು ಗಣೇಶನಿಗೆ ಅತ್ಯಂತ ಪ್ರಿಯವಾದ ನೈವೇದ್ಯವೆಂದು ಹೇಳಲಾಗುತ್ತದೆ. ಗಣೇಶನ ಪ್ರತಿಯೊಂದ ಪೂಜೆಯಲ್ಲೂ ಮೋದಕವನ್ನು ಅರ್ಪಿಸಲಾಗುತ್ತದೆ. ಮೋದಕವು ತಿನ್ನಲು ರುಚಿಕರವಾದುದು  ಮಾತ್ರವಲ್ಲದೇ  ಅದನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಕೂಡಾ ಲಭಿಸುತ್ತದೆ.  ಹಾಗಾದರೆ ಮೋದಕದ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ. 

Ganesha Chaturthi 2023: ಗಣೇಶನಿಗೆ ಪ್ರಿಯವಾದ ಮೋದಕದಲ್ಲಿದೆ ಹಲವು ಆರೋಗ್ಯ ಪ್ರಯೋಜನ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2023 | 6:06 PM

ಗಣೇಶ ಚತುರ್ಥಿಯಂದು (Ganesha Chaturthi) ಗೌರಿ ಪುತ್ರನಿಗೆ ಮೋದಕವನ್ನು ಮಾಡಿ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ.  ಏಕೆಂದರೆ ಗಣೇಶನಿಗೆ ಮೋದಕವೆಂದರೆ ಪಂಚಪ್ರಾಣ. ಹಾಗಾಗಿ ಗಣಪತಿಯ ಪ್ರತಿಯೊಂದು ಪೂಜೆಯಲ್ಲೂ ಮೋದಕವನ್ನು ಅರ್ಪಿಸಲಾಗುತ್ತದೆ.  ಅದರಲ್ಲೂ ಗಣೇಶ ಚತುರ್ಥಿಯಂದು ಸಾಮಾನ್ಯವಾಗಿ  ಎಲ್ಲರ ಮನೆಯಲ್ಲೂ ಮೋದಕವನ್ನು ತಯಾರಿಸಲಾಗುತ್ತದೆ. ಇದು ತಿನ್ನಲು ರುಚಿಕರವಾದುದು ಮಾತ್ರವಲ್ಲದೆ, ಇದನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳೂ ಲಭಿಸುತ್ತದೆ. ಹೌದು ಮೋದಕವನ್ನು ಅಕ್ಕಿ ತೆಂಗಿನಕಾಯಿ ಮತ್ತು ಬೆಲ್ಲದಿಂದ ತಯಾರಿಸಿ ಅದನ್ನು  ಹಬೆಯಲ್ಲಿ ಬೇಯಿಸಲಾಗುತ್ತದೆ. ಈ  ರುಚಿಕರವಾದ ಮೋದಕವು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಿದ್ದರೆ ಮೋದಕವನ್ನು ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು ಏನೆಂಬುವುದನ್ನು ನೋಡೋಣ.

ಮೋದಕವನ್ನು ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:

ಮಲಬದ್ಧತೆ ಸಮಸ್ಯೆಯಿಂದ  ಪರಿಹಾರವನ್ನು ನೀಡುತ್ತದೆ:

ಮೋದಕದ ತಯಾರಿಕೆಯಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ತುಪ್ಪವು ಮಲಬದ್ಧತೆಯನ್ನು ನಿವಾರಿಸಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಡುತ್ತದೆ. ವಾಸ್ತವವಾಗಿ ತುಪ್ಪವು ಕರುಳಿನ ಲೋಳೆಯ ಪದರವನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಇದು ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ. ಅಲ್ಲದೆ ತುಪ್ಪದಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಇದು ದೇಹವು ಕ್ಯಾಲ್ಸಿಯಂ ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಹಲ್ಲಿನ ಕೊಳೆತವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ತುಪ್ಪದಲ್ಲಿ ಕಂಡುಬರುವ ಬ್ಯುಟರಿಕ್ ಆಮ್ಲವು  ದೇಹದ ಪ್ರತಿಯೊಂದು ಅಂಗಾಂಶಗಳಲ್ಲಿ ವಿಶೇಷವಾಗಿ ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ರಕ್ತದೊತ್ತಡವನ್ನು ನಿವಾರಿಸಲು ಸಹಕಾರಿ:

ಮೋದಕದಲ್ಲಿನ ಹೂರಣವನ್ನು ತೆಂಗಿನಕಾಯಿ ತುರಿಯಿಂದ ತಯಾರಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ ಟ್ರೈ-ಗ್ಲಿಸರೈಡ್ ಗಳು ಕಂಡುಬರುತ್ತವೆ, ಇದು ರಕ್ತದೊತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ತೆಂಗಿನಕಾಯಿಯಲ್ಲಿರುವ ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ.

ಕೊಲೆಸ್ಟ್ರಾಲ್​​​ನ್ನು ನಿಯಂತ್ರಣದಲ್ಲಿಡಲು ಸಹಕಾರಿ:

ಮೋದಕದಲ್ಲಿ ಒಣಹಣ್ಣುಗಳನ್ನು ಕೂಡಾ ಬಳಸಲಾಗುತ್ತದೆ. ಒಣಹಣ್ಣುಗಳು ಪ್ಲಾಂಟ್ ಸ್ಟೆರಾಲ್ ಗಳನ್ನು ಹೊಂದಿರುತ್ತವೆ, ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ಹೊರಹಾಕಲು ಮತ್ತು ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಇದರಿಂದ ಹೃದಯವೂ ಆರೋಗ್ಯಕರವಾಗಿರುತ್ತದೆ.

ಥೈರಾಯ್ಡ್ ಗ್ರಂಥಿಗಳನ್ನು ಆರೋಗ್ಯಕರವಾಗಿಡುತ್ತದೆ:

ಮೋದಕವು ವಯಸ್ಸಾಗುವಿಕೆಯ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಥೈರಾಯ್ಡ್ ಗ್ರಂಥಿಗಳನ್ನು ಆರೋಗ್ಯಕರವಾಗಿರಿಸುತ್ತದೆ. ಮಾತ್ರವಲ್ಲದೆ  ಮೋದಕವನ್ನು ಸೇವಿಸುವುದರಿಂದ ಮಧುಮೇಹವನ್ನೂ ನಿಯಂತ್ರಿಸಬಹುದು. ಏಕೆಂದರೆ ಇದರಲ್ಲಿ ಗ್ಲೈಸೆಮಿಕ್ ಸೂಚಿಯು ಬಹಳ ಕಡಿಮೆಯಿದೆ.

ತೂಕ ಇಳಿಕೆಗೂ ಸಹಕಾರಿ:

ಸಾಂಪ್ರದಾಯಿಕವಾಗಿ ಮೋದಕವನ್ನು ಬೆಲ್ಲದಿಂದ ತಯಾರಿಸಲಾಗುತ್ತದೆ.  ಮೋದಕದಲ್ಲಿ ಗ್ಲೈಸೆಮಿಕ್ ಸೂಚಿಯು ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಜೊತೆಗೆ ಇದು ಆರೋಗ್ಯಕ ಕೊಬ್ಬಿನ ಉತ್ತಮ ಮೂಲವಾಗಿದೆ. ಅಷ್ಟೇ ಅಲ್ಲ ಬೆಲ್ಲವು ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಯಕೃತ್ತು, ಕರುಳು ಮತ್ತು ಹೊಟ್ಟೆಯನ್ನು ಶುದ್ಧೀಕರಿಸುವ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಇದು ತೂಕನಷ್ಟಕ್ಕೆ ಸಹಾಯ ಮಾಡುತ್ತದೆ.  ಹಾಗಾಗಿ ತೂಕ ಇಳಿಕೆಯ ಪ್ರಯಾಣದಲ್ಲಿ ಸಿಹಿತಿನಿಸುಗಳನ್ನು ತಿನ್ನುವ ಹಂಬಲವಾದರೆ ಮೋದಕವನ್ನು ಸೇವನೆ ಮಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್