Neem Side Effects: ಯಾವ ಪ್ರಮಾಣದಲ್ಲಿ ಬೇವು ಸೇವಿಸಿದರೆ ಒಳಿತು, ಅತಿಯಾದರೆ ಆಗುವ ಅಡ್ಡಪರಿಣಾಮಗಳೇನು?

| Updated By: ನಯನಾ ರಾಜೀವ್

Updated on: Sep 21, 2022 | 1:04 PM

ಬೇವಿನ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇದರ ವೈಶಿಷ್ಟ್ಯಗಳ ಬಗ್ಗೆ ಎಷ್ಟೇ ಚರ್ಚೆ ಮಾಡಿದರೂ ಕಡಿಮೆ ಎಂದೇ ಹೇಳಬೇಕು. ನಮ್ಮಲ್ಲಿ ಹೆಚ್ಚಿನವರು ಬೇವಿನ ಮರದ ಬಗ್ಗೆ ಮಾತನಾಡುತ್ತಾರೆ.

Neem Side Effects: ಯಾವ ಪ್ರಮಾಣದಲ್ಲಿ ಬೇವು ಸೇವಿಸಿದರೆ ಒಳಿತು, ಅತಿಯಾದರೆ ಆಗುವ ಅಡ್ಡಪರಿಣಾಮಗಳೇನು?
Neem Leaves
Follow us on

ಬೇವಿನ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇದರ ವೈಶಿಷ್ಟ್ಯಗಳ ಬಗ್ಗೆ ಎಷ್ಟೇ ಚರ್ಚೆ ಮಾಡಿದರೂ ಕಡಿಮೆ ಎಂದೇ ಹೇಳಬೇಕು. ನಮ್ಮಲ್ಲಿ ಹೆಚ್ಚಿನವರು ಬೇವಿನ ಮರದ ಬಗ್ಗೆ ಮಾತನಾಡುತ್ತಾರೆ. ಆದರೆ ಅದರ ಪ್ರತಿಯೊಂದು ಭಾಗವೂ ನಮ್ಮ ಆರೋಗ್ಯಕ್ಕೆ ಒಂದೊಂದು ರೀತಿಯ ಪ್ರಯೋಜನವನ್ನು ನೀಡುತ್ತದೆ.

ಭಾರತದಲ್ಲಿ ಇದಕ್ಕೆ ವಿಶೇಷವಾದ ಮಹತ್ವವಿದೆ. ಹೊಟ್ಟೆನೋವಿನ ಸಮಸ್ಯೆಯಾಗಲಿ ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿ, ಪ್ರತಿ ಸಣ್ಣ ಸಮಸ್ಯೆಗೆ ಬೇವು ಬಳಸುವುದು ಒಳ್ಳೆಯದು. ಈ ಸಮಸ್ಯೆಗಳನ್ನು ಹೋಗಲಾಡಿಸಲು ಬೇವಿನ ಎಲೆಗಳು ಸಹ ಪರಿಣಾಮಕಾರಿ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ.

ಹೌದು, ಬೇವಿನ ಎಲೆಗಳನ್ನು ಅತಿಯಾಗಿ ಸೇವಿಸುವುದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಒಂದು ದಿನದಲ್ಲಿ ಎಷ್ಟು ಬೇವಿನ ಎಲೆಗಳನ್ನು ತಿನ್ನಬೇಕು ಎಂದು ತಿಳಿಯೋಣ.

ದಿನಕ್ಕೆ ಎಷ್ಟು ಬೇವಿನ ಎಲೆಗಳನ್ನು ತಿನ್ನಬೇಕು?
ಬೇವಿನ ಎಲೆಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಆರೋಗ್ಯಕರ. ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ಆದರೆ ನೀವು ಬೇವಿನ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದು ನಿಮಗೆ ಹಾನಿ ಮಾಡುತ್ತದೆ.

ದಿನಕ್ಕೆ 6 ರಿಂದ 8 ಬೇವಿನ ಎಲೆಗಳನ್ನು ಸೇವಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನು ಮೀರಿ ಬೇವಿನ ಎಲೆಗಳನ್ನು ಸೇವಿಸುವುದರಿಂದ ಹಾನಿಯಾಗುತ್ತದೆ.

ಬೇವಿನ ಸೊಪ್ಪನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅನನುಕೂಲಗಳು
ನೀವು ಬೇವಿನ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ: ಇಂತಹ ಸಮಯದಲ್ಲಿ ಬೇವಿನ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಗಿಯುತ್ತಿದ್ದರೆ. ಸಕ್ಕರೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಗರ್ಭಿಣಿಯರು ಬೇವಿನ ಎಲೆಗಳನ್ನು ಸೇವಿಸುವ ಮೊದಲು ತಜ್ಞರನ್ನು ಸಂಪರ್ಕಿಸಬೇಕು. ಬೇವಿನ ಸೊಪ್ಪಿನ ರಸವು ಕಣ್ಣಿಗೆ ಬಿದ್ದರೆ ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ ಹಾಗೂ ಕೆಂಪಾಗುತ್ತದೆ. ಬೇವಿನ ರಸವನ್ನು ಕೂದಲಿಗೆ ಹಚ್ಚುವಾಗ ಅದು ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ.

ಬೇವಿನ ಸೊಪ್ಪನ್ನು ಅತಿಯಾಗಿ ಸೇವಿಸುವುದರಿಂದ ಬಾಯಿ ರುಚಿ ಕೆಡುತ್ತದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ