Love Horoscope : ಮೇಷರಾಶಿಯ ಮಹಿಳೆಯರು ಈ ರಾಶಿಗಳ ಪುರುಷರೊಂದಿಗೆ ಪ್ರೀತಿಸಂಬಂಧ ಹೊಂದಬಹುದು

Aries Woman and Love Compatibility: ಪ್ರೀತಿ-ಸಂಬಂಧದ ವಿಷಯವಾಗಿ ಮೇಷರಾಶಿಯ ಮಹಿಳೆಯರಿಗೆ ಯಾವ ಯಾವ ರಾಶಿಯ ಪುರುಷರೊಂದಿಗೆ ಅನ್ಯೋನ್ಯತೆ ಸಾಧಿಸಲು ಸಾಧ್ಯವಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಬಹುದು.

Love Horoscope : ಮೇಷರಾಶಿಯ ಮಹಿಳೆಯರು ಈ ರಾಶಿಗಳ ಪುರುಷರೊಂದಿಗೆ ಪ್ರೀತಿಸಂಬಂಧ ಹೊಂದಬಹುದು
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 21, 2022 | 4:49 PM

Aries Woman Love Compatibility : ಮೇಷರಾಶಿಯು ಅಗ್ನಿತತ್ವವನ್ನು ಸೂಚಿಸುತ್ತದೆ. ಈ ರಾಶಿಯ ಹೆಣ್ಣುಮಕ್ಕಳು ಧೈರ್ಯಶಾಲಿಗಳು ಮತ್ತು ನಾಯಕತ್ವ ಗುಣವುಳ್ಳವರು. ಉತ್ಸಾಹ ಮತ್ತು ಆತ್ಮವಿಶ್ವಾಸ ಇವರಲ್ಲಿ ಅಪರಿಮಿತವಾಗಿರುತ್ತದೆ. ಜೊತೆಗೆ ಸ್ವಲ್ಪ ಅಹಂಕಾರವೂ, ಸ್ವಾರ್ಥವೂ ಇಲ್ಲವೆಂದಿಲ್ಲ. ಸ್ವತಂತ್ರ, ಸೃಜನಶೀಲಮನೋಭಾವವುಳ್ಳ ಇವರು ಬುದ್ಧಿವಂತರು. ಸರಿ ಎನ್ನಿಸಿದ್ದನ್ನು ಸ್ವೀಕರಿಸುವ, ತಪ್ಪು ಎನ್ನಿಸಿದ್ದನ್ನು ನಿರಾಕರಿಸುವ ನಿರ್ಭಿಡೆ ವ್ಯಕ್ತಿತ್ವದವರು. ಪ್ರೀತಿ-ಸಂಬಂಧದ ವಿಷಯವಾಗಿ ಮೂರನೆಯ ವ್ಯಕ್ತಿಯು ಮಧ್ಯಪ್ರವೇಶಿಸುವುದನ್ನು ಇವರು ಇಷ್ಟಪಡುವುದಿಲ್ಲ. ಏನೇ ಸಮಸ್ಯೆಗಳಾದರೂ ಸುಲಭವಾಗಿ ರಾಜಿಯಾಗಲಾರರು. ವ್ಯಕ್ತಿಗಳಲ್ಲಿರುವ ಪ್ರಾಮಾಣಿಕತೆಯನ್ನು, ಒಳ್ಳೆಯ ಭಾವನೆಯನ್ನು ಮುಕ್ತವಾಗಿ ಹೊಗಳುತ್ತಾರೆ. ಇವರು ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲು ಎಂದೂ ಹೆದರುವುದಿಲ್ಲ. ಆದರೆ, ನಯವಂಚಕರನ್ನು ಇವರು ಬೇಗ ಗುರುತಿಸುತ್ತಾರೆ. ಇಂಥ ಮಹಿಳೆಯರು ಸಾಕಷ್ಟು ಪುರುಷರನ್ನು ತಮ್ಮ ಗುಣಸ್ವಭಾವಗಳಿಂದ ಸೆಳೆಯುವ ಸಾಧ್ಯತೆ ಇರುತ್ತದೆ.

ಹಾಗಿದ್ದರೆ, ಮೇಷರಾಶಿಯ ಮಹಿಳೆಯರಿಗೆ ಪ್ರೀತಿ-ಸಂಬಂಧದ ವಿಷಯವಾಗಿ ಯಾವೆಲ್ಲ ರಾಶಿಯ ಪುರುಷರೊಂದಿಗೆ ಹೇಗೆಲ್ಲ ಹೊಂದಾಣಿಕೆಯಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮೇಷ ಮತ್ತು ಧನು ರಾಶಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರೀತಿ ಮತ್ತು ಸಂಬಂಧದ ಯಶಸ್ಸಿಗಾಗಿ ಮೇಷರಾಶಿಯ ಮಹಿಳೆಯೊಂದಿಗೆ ಧನು ರಾಶಿಯ ಪುರುಷರು ತಮ್ಮನ್ನು ಸಮರ್ಪಕವಾಗಿ ಕೊಟ್ಟುಕೊಳ್ಳುತ್ತಾರೆ. ಇವರಿಬ್ಬರೂ ಒಂದೇ ತೆರನಾದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಒಂದೇ ವಿಷಯಕ್ಕೆ ಸಂಬಂಧಿಸಿ ಬೇಸರವನ್ನೂ ಪಟ್ಟುಕೊಳ್ಳುತ್ತಾರೆ. ಆದರೂ ಅದರಿಂದ ಹೊರಬಂದು ಪ್ರೀತಿಯಿಂದ ಬದುಕಲು ಬೇಕಾದಂಥ ಅನ್ಯೋನ್ಯತೆಯನ್ನು ಇವರು ಸಾಧಿಸುತ್ತಾರೆ. ಇಬ್ಬರೂ ಉತ್ಸಾಹಭರಿತರಾಗಿದ್ದು, ಹೊಸ ಅನುಭವ ಪಡೆದುಕೊಳ್ಳಲು ಮತ್ತು ಅದಕ್ಕಾಗಿ ಸೂಕ್ತ ಸಮಯ ಹುಡುಕಿಕೊಳ್ಳಲು ಕಾಯುತ್ತಿರುತ್ತಾರೆ. ಈ ಎರಡೂ ರಾಶಿಗಳು ಅಗ್ನಿತತ್ವವನ್ನು ಹೊಂದಿರುವುದರಿಂದ ಪರಸ್ಪರರ ಸಾಹಸ ಮನೋಭಾವ ಹೊಂದಾಣಿಕೆಯಾಗುತ್ತದೆ. ಒಟ್ಟಿನಲ್ಲಿ ಅತ್ಯುತ್ತಮ ಜೋಡಿ ಈ ರಾಶಿಯವರಾಗಿದೆ.

ಮೇಷ ಮತ್ತು ಸಿಂಹ

ಮೇಷ ಮತ್ತು ಸಿಂಹರಾಶಿಯವರು ಸಮಾನವಾಗಿ ಜೀವನೋತ್ಸಾಹವುಳ್ಳವರು. ಇಚ್ಛಾಶಕ್ತಿಯುಳ್ಳ ಈ ಎರಡೂ ರಾಶಿಗಳವರಲ್ಲಿ ನಾಯಕತ್ವ ಗುಣವಿರುತ್ತದೆ. ನಿಷ್ಠೆ ಮತ್ತು ಪ್ರಾಮಾಣಿಕತೆ ಕುರಿತು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುವ ಸ್ವಭಾವ ಇವರಲ್ಲಿ ಇರುವುದರಿಂದ ಇವರ ಸಂಬಂಧ ದೀರ್ಘಾಯುಷ್ಯವನ್ನು ಹೊಂದಿರುತ್ತದೆ. ಹೃದಯವೈಶಾಲ್ಯ, ಭಾವೋನ್ಮಾದ, ಶ್ರದ್ಧಾಮನೋಭಾವ ಈ ಎರಡೂ ರಾಶಿಗಳಲ್ಲಿ ಒಂದಕ್ಕೊಂದು ಮಿಳಿತವಾಗಿವೆ. ಇಬ್ಬರಲ್ಲಿಯೂ ಇರುವ ಚಂಚಲ ಸ್ವಭಾವದಿಂದ ಆಗಾಗ ಸಮಸ್ಯೆಗಳು ಉದ್ಭವಿಸಿದರೂ ಒಬ್ಬರಿಗೊಬ್ಬರು ಮಾತನಾಡಿ ಬಗೆಹರಿಸಿಕೊಂಡು ಪರಿಹರಿಸಿಕೊಳ್ಳುತ್ತಾರೆ. ತೃಪ್ತಭಾವವನ್ನು ಇವರು ಹೊಂದಿರುತ್ತಾರೆ.

ಮೇಷ ಮತ್ತು ತುಲಾ

ಈ ಎರಡೂ ರಾಶಿಗಳು ಸಂಪೂರ್ಣವಾಗಿ ತದ್ವಿರುದ್ಧ. ಆದರೂ ಪರಸ್ಪರರಲ್ಲಿ ಅದ್ಭುತ ಹೊಂದಾಣಿಕೆ.  ಒಬ್ಬರನ್ನೊಬ್ಬರು ಮೆಚ್ಚುವುದು, ಪ್ರೋತ್ಸಾಹಿಸುವುದು ಮಾತ್ರ ನಿರಂತರ. ಎಂಥ ಭಿನ್ನಾಭಿಪ್ರಾಯಗಳೂ ಬದುಕಿನ ಬಗೆಗೆ ಇರುವ ಇವರ ಉತ್ಸಾಹವನ್ನು ಕುಂದಿಸಲಾರವು. ಸಂತುಲನ ಮನೋಭಾವದಿಂದ ಬದುಕನ್ನು ಸುಂದರವಾಗಿಸಿಕೊಳ್ಳುವತ್ತ ಸದಾ ತುಡಿಯುತ್ತಿರುತ್ತಾರೆ. ಸಾಮಾಜಿಕ ಕಾರ್ಯಕ್ರಮ, ಪ್ರವಾಸದಂಥ ಚಟುವಟಿಕೆಗಳನ್ನು ಒಟ್ಟಾಗಿ ಆನಂದಿಸುತ್ತಾರೆ. ತುಲಾ ಪುರುಷರು ಪ್ರಣಯೋತ್ಸಾಹಿಗಳು. ಹಾಗಾಗಿ ಈ ಎರಡೂ ರಾಶಿಗಳು ಮದುವೆಯಲ್ಲಿಯೂ ಸಾರ್ಥಕ್ಯ ಪಡೆಯುತ್ತವೆ.

ಮೇಷ ಮತ್ತು ಮಿಥುನ 

ಮೇಷ ರಾಶಿಯ ಮಹಿಳೆ ಮತ್ತು ಮಿಥುನ ರಾಶಿಯ ಪುರುಷನ ಸಂಬಂಧವು ಅತ್ಯಂತ ತೀವ್ರತೆಯಿಂದ ಕೂಡಿರುತ್ತದೆ. ಈ ಸಂಬಂಧದಿಂದಾಗಿ ಮೇಷರಾಶಿಯ ಮಹಿಳೆಯಲ್ಲಿ ಸಂತೋಷ, ಚೈತನ್ಯ ಸ್ಫುರಣಗೊಳ್ಳುತ್ತದೆ. ಪರಸ್ಪರರ ಸ್ವಾತಂತ್ರ್ಯವನ್ನು, ವೈಯಕ್ತಿಕವನ್ನು ಗೌರವಿಸುವ ಮನೋಭಾವ ಇವರಲ್ಲಿರುತ್ತದೆ. ನಿಷ್ಠೆ, ಪ್ರೀತಿಯನ್ನು ಪ್ರಶಂಸಿಸುವ ಮೂಲಕ ಆಗಾಗ ಪರಸ್ಪರ ಅಚ್ಚರಿ ನೀಡುತ್ತ ಸಂತೋಷವನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ. ಈ ಜೋಡಿಯು ಇತರರಿಗೆ ಆದರ್ಶಪ್ರಾಯರಾಗಿರುತ್ತಾರೆ.

(ಇಂಗ್ಲಿಷ್​ ಕ್ಯಾಲೆಂಡರ್ ರಾಶಿಭವಿಷ್ಯ ಆಧರಿಸಿದ ಈ ವಿಷಯವನ್ನು ಅಂತರ್ಜಾಲದಿಂದ ಪಡೆಯಲಾಗಿದೆ. ಮಾಹಿತಿಯ ಸತ್ಯಾಸತ್ಯತೆಗೆ ಟಿವಿ9 ಕನ್ನಡ ಡಿಜಿಟಲ್​ ಜವಾಬ್ದಾರಿಯಲ್ಲ.) 

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮಲ್ಲಿರುವ ಕೆಟ್ಟ ಮತ್ತು ಒಳ್ಳೆಯ ಗುಣಗಳನ್ನು ಓದಲು ಕ್ಲಿಕ್ ಮಾಡಿ

Published On - 4:40 pm, Wed, 21 September 22

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ