Zodiac Sign : ನಿಮ್ಮ ರಾಶಿಯನ್ವಯ ನಿಮ್ಮಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳು

Zodiac Sign : ವೃಷಭ ರಾಶಿಯವರು ಅತ್ಯಂತ ನಿಷ್ಠಾವಂತರು. ಮೀನರಾಶಿಯವರಿಗೆ ತಮ್ಮ ಬೆಳವಣಿಗೆಯತ್ತ ಗಮನವೇ ಇಲ್ಲ. ಕನ್ಯಾರಾಶಿಯವರು ಪರಿಪೂರ್ಣತಾವಾದಿಗಳು. ಮೇಷರಾಶಿಯವರಿಗೆ ತಮ್ಮ ಬದುಕಿನತ್ತಲೇ ಸದಾ ಗಮನ.

Zodiac Sign : ನಿಮ್ಮ ರಾಶಿಯನ್ವಯ ನಿಮ್ಮಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಗುಣಗಳು
ಈ ರಾಶಿಯವರು ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು, ಕುಟುಂಬ ಸದಸ್ಯರ ಸಹಕಾರವಿದೆ
Follow us
TV9 Web
| Updated By: Digi Tech Desk

Updated on:Sep 20, 2022 | 5:07 PM

Zodiac Sign: ಎಲ್ಲರ ಸ್ವಭಾವವೂ ಒಂದೇ ತರಹ ಇರುವುದಿಲ್ಲ. ಬೆಳೆದುಬಂದ ಪರಿಸರ, ಶಿಕ್ಷಣ, ಸಂಸ್ಕಾರ, ನಡೆದುಹೋದ ಘಟನೆಗಳು, ಎದುರಾದ ಸಂದರ್ಭಗಳು, ಆಘಾತಗಳು, ಅನುಕೂಲಗಳು, ಅನಾನುಕೂಲಗಳು ಹೀಗೆ  ಅನೇಕ ಅಂಶಗಳಿಂದ ಒಂದು ವ್ಯಕ್ತಿತ್ವ ಎನ್ನುವುದು ರೂಪುಗೊಂಡಿರುತ್ತದೆ. ಆದರೆ ಯಾವುದೂ ಶಾಶ್ವತ ಅಲ್ಲ. ನಮ್ಮ ಪರಿಸ್ಥಿತಿಗೆ ತಕ್ಕಂತೆ, ಮನಸಿಗೆ ಒಪ್ಪುವಂತೆ ಅಗತ್ಯಾನುಸಾರ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಸಾಕಷ್ಟು ಹಾದಿಗಳು ಯಾವ ಕಾಲಕ್ಕೂ ಇದ್ದೇ ಇವೆ. ಒಟ್ಟಿನಲ್ಲಿ ಉತ್ತಮ ಗುಣಗಳೊಂದಿಗೆ, ಕೌಶಲಗಳೊಂದಿಗೆ ಗುರಿಯೆಡೆ ಸಾಗುವುದು ಮುಖ್ಯ. ಆದರೂ ಈ ರಾಶಿಗೆ ಅನ್ವಯ ಗುಣಸ್ವಭಾಗಳಿರುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈಗಿಲ್ಲಿ ಹನ್ನೆರಡು ರಾಶಿಗಳು (ಇಂಗ್ಲಿಷ್​ ಕ್ಯಾಲೆಂಡರಿನ ಪ್ರಕಾರ) ಮತ್ತು ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಬಗ್ಗೆ ಕಿರುಮಾಹಿತಿ ನೀಡಲಾಗಿದೆ. ನಿಮ್ಮನ್ನು ನೀವು ಪರಿಕ್ಷಿಸಿಕೊಳ್ಳಿ. ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು.

ಮೇಷ : ಈ ರಾಶಿಯವರ ಬಗ್ಗೆ ಉತ್ತಮವಾದ ಸಂಗತಿಯೆಂದರೆ, ಅವರು ತಮ್ಮ ಜೀವನದ ಬಗ್ಗೆ ತುಂಬಾ ಆಶಾವಾದಿಗಳಾಗಿರುತ್ತಾರೆ. ಏನೇ ಹೆಜ್ಜೆ ಇಟ್ಟರೂ ಯೋಚಿಸಿ ಹೆಜ್ಜೆ ಇಡುತ್ತಾರೆ. ಗುರಿಯತ್ತ ಪರಿಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಎಂಥ ಅಡೆತಡೆಗಳನ್ನೂ ನಿಭಾಯಿಸುತ್ತಾರೆ. ಆದರೆ ಕೋಪಗೊಂಡಾಗ ಮಾತ್ರ ಅವರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಇಷ್ಟವಿಲ್ಲದ ಎಂಥ ಸಣ್ಣ ವಿಷಯವೂ ಅವರನ್ನು ವಿಚಲಿತಗೊಳಿಸಿ ಎಂಥ ವಿಕೋಪಕ್ಕೂ ಅವರನ್ನು ಅವರನ್ನೂ ಎಂಥ ವಿಕೋಪಕ್ಕೂ ತಳ್ಳಬಹುದು.

ವೃಷಭ :  ಇಂಥ ನಿಷ್ಠಾವಂತ ವ್ಯಕ್ತಿಗಳನ್ನು ನೀವು ಎಂದಿಗೂ ಕಾಣಲಾರಿರಿ. ತಾವು ಪ್ರೀತಿಸಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವಂಥವರು. ಆದರೆ, ಅವರಿಗೆ ಅವರದೇ ಆದ ವೈಯಕ್ತಿಕ ಸಮಯವೆನ್ನುವುದು ಬಹಳ ಮುಖ್ಯ. ಹಾಗಾಗಿ ಅವರನ್ನು ಅವರಷ್ಟಕ್ಕೆ ಇರಲು ಬಿಟ್ಟುಬಿಡಬೇಕು. ಹಾಗಿದ್ದಲ್ಲಿ ಮಾತ್ರ ಸಮಚಿತ್ತದೊಂದಿಗೆ ಇರುತ್ತಾರೆ. ಇಲ್ಲವಾದಲ್ಲಿ ನೀವು ಎಷ್ಟೇ ಶಾಂತವಾಗಿದ್ದರೂ ಅವರು ಮಾತ್ರ ತಮ್ಮ ಅಶಾಂತತೆಯನ್ನು ಪ್ರದರ್ಶಿಸಿಬಿಡುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಿಥುನ :  ಇವರೊಂದು ಹಾರುವ ಚಿಟ್ಟೆ ಇದ್ದಂತೆ. ಸಾಮಾಜಿಕವಾಗಿ ಬೆರೆಯುವ ಸ್ವಭಾವ ಇರುವ ಇವರು ಸದಾ ಉತ್ಸಾಹದಿಂದ ಇರುತ್ತಾರೆ. ಆದ್ದರಿಂದಲೇ ಇವರನ್ನು ಎಲ್ಲರೂ ಪ್ರೀತಿಸುತ್ತಾರೆ. ಇವರೂ ಎಲ್ಲರನ್ನೂ ಪ್ರೀತಿಸುತ್ತಾರೆ.  ಆದರೆ ಈ ರಾಶಿಯವರು ತುಂಬಾ ಗಾಸಿಪ್ ಮಾಡುವ ಸ್ವಭಾವ ಉಳ್ಳವರು. ಈ ಒಂದಿ ಕಾರಣಕ್ಕೆ ಇವರನ್ನು ಜನ ದ್ವೇಷಿಸುತ್ತಾರೆ.

ಕಟಕ : ಇವರ ಕಾಳಜಿಯಳ್ಳ ವ್ಯಕ್ತಿತ್ವದಿಂದ ಇವರು ಎಲ್ಲರನ್ನೂ ಒಳಗೊಳ್ಳುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಇವರನ್ನು ಮೆಚ್ಚುತ್ತಾರೆ. ಆದರೆ ಎಲ್ಲರ ಹಿತವನ್ನು ಬಯಸುವ ಇವರು ತುಂಬಾ ಸೂಕ್ಷ್ಮ ಮನಸಿನವರು, ಭಾವಜೀವಿಗಳು. ಹಾಗಾಗಿ ಇವರೊಂದಿಗೆ ಮಾತನಾಡುವಾಗ ಸ್ವಲ್ಪ ಹೆಚ್ಚೂ ಕಡಿಮೆಯಾದರೂ ನೊಂದುಕೊಂಡುಬಿಡುತ್ತಾರೆ.

ಸಿಂಹ : ದಯೆಯುಳ್ಳ ಇವರು ಎಂಥ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತಮ್ಮನ್ನು ನಂಬಿದ ಸ್ನೇಹಿತರ ಬೆನ್ನಿಗೆ ಸದಾ ಇರುತ್ತಾರೆ. ಆದರೆ ಇವರ ಕೆಲ ಅವಗುಣಗಳು ಎಂಥವರನ್ನೂ ಕಂಗಾಲಿಗೀಡು ಮಾಡುವ ಸಾಧ್ಯತೆಯೂ ಇರುತ್ತದೆ. ಯಾವಾಗ ಇವರು ಯಾಕೆ ಮತ್ತು ಹೇಗೆ ವರ್ತಿಸುತ್ತಾರೆ ಎಂದು ನೀವು ಅಂದಾಜಿಸಲು ಸಾಧ್ಯವಿರದಷ್ಟು ರಹಸ್ಯವಾಗಿ ಬದುಕುವ ಜೀವನಶೈಲಿ ಇವರದಾಗಿರುತ್ತದೆ.

ಕನ್ಯಾ : ಎಲ್ಲ ರೀತಿಯಲ್ಲಿಯೂ ಇವರು ಪರಿಪೂರ್ಣತಾವಾದಿ. ಮನಸ್ಸು ಮಾಡಿದರೆ ಇವರು ಏನು ಬೇಕಾದರೂ ಸಾಧ್ಯವಾಗಿಸಿಕೊಳ್ಳಬಹುದು. ಆದರೆ, ಹೃದಯದಿಂದ ಯೋಚಿಸುವ ಇವರು ತಮ್ಮ ಆಯ್ಕೆಯ ಹಾದಿಯಲ್ಲಿಯೇ ಸಾಗುತ್ತಾರೆ. ಎಷ್ಟೇ ಕಷ್ಟವಾದರೂ ಸಹಿಸಿಕೊಂಡು ಸಾಗುತ್ತಾರೆ. ತಮ್ಮನ್ನೂ ಟೀಕಿಸಿಕೊಳ್ಳುತ್ತಾರೆ. ಇತರರನ್ನೂ ಟೀಕಿಸುತ್ತಿರುತ್ತಾರೆ. ಹಾಗಾಗಿ ಎಲ್ಲರಿಗೂ ಪ್ರೀತಿಪಾತ್ರರಾಗಿರುವುದಕ್ಕೆ ಇವರಿಂದ ಸಾಧ್ಯವಿಲ್ಲ. ತುಂಬಾ ಆಳವಾಗಿ ಯೋಚಿಸುವ ಇವರಿಗೆ ಸದಾ ಅಭದ್ರತೆ ಕಾಡುತ್ತಿರುತ್ತದೆ.

ತುಲಾ : ಸಂತುಲಿತ ಮತ್ತು ಸಮರ್ಥನೀಯ ವ್ಯಕ್ತಿತ್ವವನ್ನು ಈ ರಾಶಿಯವರು ಹೊಂದಿದ್ದಾರೆ. ಇವರ ಮಾತುಗಳಿಗೆ ತೂಕವಿರುತ್ತದೆ. ಆದ್ದರಿಂದ ಇವರ ಅಭಿಪ್ರಾಯಗಳನ್ನು ಜನ ಮಾನ್ಯ ಮಾಡುತ್ತಾರೆ. ಆದರೆ ಸಂತುಲನ ಸಾಧಿಸುವ ಪ್ರಯತ್ನದ ಹಿಂದೆ ಅವರದೇ ಆದ ಜೀವನವಿಧಾನವಿರುತ್ತದೆ. ಅದನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಇರಾದೆ ಇವರದಾಗಿರುತ್ತದೆ.

ವೃಶ್ಚಿಕ : ಇವರು ತಮ್ಮ ಜೀವನದ ಬಗ್ಗೆ ಸದಾ ಉತ್ಸುಕರಾಗಿರುತ್ತಾರೆ. ಎಷ್ಟೇ ಸೋಲುಂಡರೂ ಪ್ರಯತ್ನವನ್ನೂ ಬಿಡಲಾರರು. ಇತರರ ಮೇಲೆ ಇವರು ಪ್ರಭಾವವನ್ನೂ ಬೀರುವ ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೂ ಇವರ ಮನಸ್ಥಿತಿಯನ್ನು ಅಂದಾಜಿಸಲು ಸಾಧ್ಯವಾಗದು. ಕೆಲವೊಮ್ಮೆ ಭಯಂಕರ ಸಮಸ್ಯೆಗಳಿಗೆ ಇದು ಅವರನ್ನಲ್ಲದೇ ಇನ್ನೊಬ್ಬರನ್ನೂ ಈಡುಮಾಡಬಲ್ಲುದು.

ಧನು : ಇವರು ತುಂಬಾ ಸಾಹಸಮಯ ವ್ಯಕ್ತಿತ್ವದವರು. ಹಾಗೆಂದು ಎಲ್ಲರೂ ಇವರಂತೆಯೇ ಇರುವುದಿಲ್ಲವಲ್ಲ. ಈ ಕಾರಣಕ್ಕಾಗಿ ಇವರು ಎಲ್ಲರಿಂದ ಪ್ರತ್ಯೇಕವಾಗಿ ಉಳಿಯುವ ಸಂದರ್ಭಗಳು ಇವರ ಬದುಕಿನಲ್ಲಿ ಪದೇಪದೇ ಸೃಷ್ಟಿಯಾಗುತ್ತಲೇ ಇರುತ್ತವೆ. ಇವರಿಗೆ ಭಾವನಾತ್ಮಕ ವಿಷಯಗಳನ್ನು, ಸಂಬಂಧಗಳನ್ನು ನಿಭಾಯಿಸುವುದು ಒದಗುವುದೇ ಇಲ್ಲ. ಹಾಗಾಗಿ ಇವರು ಒಂಟಿತನ ಅನುಭವಿಸುತ್ತಾರೆ.

ಮಕರ : ಶಕ್ತಿಶಾಲಿ ವ್ಯಕ್ತಿತ್ವ ಹೊಂದಿದ ಇವರು ತಮ್ಮ ಸ್ನೇಹಿತರ ಏಳ್ಗೆಗಾಗಿ ಬಹಳ ಸಹಕರಿಸುತ್ತಾರೆ. ಕಠಿಣ ಪರಿಶ್ರಮಜೀವಿಗಳಾದ ಇವರು ಬದುಕಿನಲ್ಲಿ ಬಹುದೂರ ಸಾಗುತ್ತಾರೆ. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಾಧಿಸುತ್ತಾರೆ. ಆದರೂ ವೈಯಕ್ತಿಕವಾಗಿ ಇವರನ್ನು ಹತ್ತಿರವಾಗಿಸಿಕೊಳ್ಳುವುದು ಮಾತ್ರ ಯಾರಿಗೂ ಸಾಧ್ಯವಾಗದು.

ಕುಂಭ : ಸಾಕಷ್ಟು ಸಕಾರಾತ್ಮಕ ಶಕ್ತಿ ಮತ್ತು ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದ ಇವರು ಏನೇ ಹೆಜ್ಜೆ ಇಟ್ಟರೂ ಅದು ಗರುತರವಾಗಿಯೇ ಇರುತ್ತದೆ. ಒಂದೊಂದು ಕೆಲಸವೂ ಮೈಲಿಗಲ್ಲಿನಂತೆಯೇ. ಆದರೆ ಇವರ ಮೊಂಡುತನ ಮತ್ತು ಹಠದ ಸ್ವಭಾವ ಮಾತ್ರ ಎಂದೂ ಬದಲಾಗುವುದಿಲ್ಲ. ಹಾಗಾಗಿ ಜನರು ಇವರಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚು.

ಮೀನ : ಇವರ ಕಲ್ಪನಾ ಶಕ್ತಿ, ಕ್ರಿಯಾಶೀಲ ಶಕ್ತಿ ಅದ್ಭುತವಾಗಿದೆ. ಯಾವಾಗಲೂ ವಿಸ್ಮಯಲೋಕದಲ್ಲಿ ವಿಹರಿಸುತ್ತಿರುತ್ತಾರೆ. ತೀವ್ರ ಸಂವೇದನಾಶೀಲ ಸ್ವಭಾವ ಇವರದಾಗಿರುವುದರಿಂದ ಬಲುಬೇಗ ಮಿಡಿಯುತ್ತಾರೆ. ಇತರರ ನೋವನ್ನೂ ತನ್ನ ನೋವೆಂಬಂತೆ ಅನುಭವಿಸಿ ಸಹಾಯ ಮಾಡುವ ಗುಣ ಇವರದಾಗಿರುತ್ತದೆ. ಆದ್ದರಿಂದ ತಮ್ಮ ಬೆಳವಣಿಗೆಯ ಕಡೆಗೆ ಇವರಿಗೆ ಅಷ್ಟು ಗಮನವಿರುವುದಿಲ್ಲ.

ಮತ್ತಷ್ಟು​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:29 pm, Tue, 20 September 22

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್