ಚರ್ಮದ ಕಾಂತಿ ಹೆಚ್ಚಿಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಏಕೆಂದರೆ ಸೌಂದರ್ಯ ಕಾಪಾಡಿಕೊಳ್ಳಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇದ್ದೆ ಇರುತ್ತದೆ. ಅದೇ ರೀತಿ ಸದಾ ಹೊಳೆಯುವ ಚರ್ಮಕ್ಕಾಗಿ ಹೆಚ್ಚಿನ ಜನರು ಗುಲಾಬಿ ದಳಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ ಇದನ್ನು ಕೂದಲಿಗೂ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಈ ಗುಲಾಬಿ ದಳಗಳನ್ನು ಆರೋಗ್ಯ ಮತ್ತು ಸುಂದರವಾಗಿರುವ ಬಲವಾದ ಕೂದಲಿಗಳಿಗಾಗಿಯೂ ಬಳಸಬಹುದು. ಅದಲ್ಲದೆ ಗುಲಾಬಿ ದಳಗಳು ಕೇವಲ ಸೌಂದರ್ಯ ಮತ್ತು ಅಲಂಕಾರಕ್ಕಾಗಿ ಮಾತ್ರ ಬಳಕೆಯಾಗುವುದಲ್ಲ ಬದಲಾಗಿ ಇವುಗಳಲ್ಲಿ ಹೇರಳವಾದ ಆರೋಗ್ಯ ಪ್ರಯೋಜನಗಳಿದ್ದು, ಆರೋಗ್ಯದ ನಿಧಿ ಎಂದೇ ಹೇಳಲಾಗುತ್ತದೆ. ಹಾಗಾದರೆ ಇವುಗಳಿಂದ ಯಾವ ರೀತಿಯ ಉಪಯೋಗಗಳಿವೆ? ಬಳಕೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿ: ಬಾಳೆಹಣ್ಣುಗಳು ರಕ್ತದ ಸಕ್ಕರೆಯನ್ನು ಹೆಚ್ಚಿಸುತ್ತವೆಯೇ? ತೂಕ ನಷ್ಟಕ್ಕೆ ಇದು ಒಳ್ಳೆಯದೇ?
ಈ ಹೂವಿನ ತಾಜಾ ದಳಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಈ ಪೇಸ್ಟ್ ಗೆ ಅಲೋವೆರಾ ಜೆಲ್ ಮತ್ತು ಮೊಸರು ಸೇರಿಸಿ. ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಕೂದಲಿಗೆ ಹಚ್ಚಿಕೊಳ್ಳಿ. ಅದಲ್ಲದಿದ್ದರೆ ರೋಸ್ ಮೇರಿ ಹೇರ್ ಆಯಿಲ್ ಗೆ ಗುಲಾಬಿ ದಳಗಳನ್ನು ಮೃದುವಾಗಿ ಪೇಸ್ಟ್ ಮಾಡಿಕೊಂಡು ಅದನ್ನು ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ಅಥವಾ ಗುಲಾಬಿ ದಳಗಳಿಂದ ಹೇರ್ ಸ್ಪ್ರೇ ತಯಾರಿಸಬಹುದು. ಈ ರೀತಿ ಮಾಡಲು, ಕೆಲವು ಗುಲಾಬಿ ದಳಗಳನ್ನು ಎರಡು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ ಬಳಸಬಹುದು. ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಗುಲಾಬಿ ದಳಗಳು ಅದ್ಭುತ ಪ್ರಯೋಜನಗಳ ಆಗರವಾಗಿದೆ. ವಿಶೇಷವಾಗಿ ದೇಸಿ ಗುಲಾಬಿಗಳನ್ನು ಹೆಚ್ಚಾಗಿ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ನೀವು ಕೂಡ ಇದನ್ನು ಪ್ರಯತ್ನಿಸಿ ನೋಡಿ.
(ಸೂಚನೆ: ಈ ಲೇಖನವು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಿ.)
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ