Health Tips: ಹೊಟ್ಟೆ ತುಂಬಿದ ಮೇಲೂ ನಿಮಗೆ ಹಸಿವಾಗುತ್ತಿದೆಯೇ? ಕಾರಣ ಏನು ಗೊತ್ತಾ?
ಹೊಟ್ಟೆ ತುಂಬಿದ ಮೇಲೂ ನಿಮಗೆ ಹಸಿವಾಗುತ್ತಿದೆಯೇ? ಬಿಂಗ್ ಈಟಿಂಗ್ ಡಿಸಾರ್ಡರ್ ಎಂದರೇನು? ಇದು ಯಾವ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ? ನಿಮಗೂ ಈ ಅಭ್ಯಾಸವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಗಂಭೀರ ತೊಡಕುಗಳು ಉಂಟಾಗಬಹುದು.
ಸಾಕಷ್ಟು ಆಹಾರ ಸೇವನೆಯ ಬಳಿಕ ಮತ್ತೆ ಮತ್ತೆ ಹಸಿವಾಗುತ್ತಿದ್ದರೆ, ಜಾಗರೂಕರಾಗಿರಿ. ಏಕೆಂದರೆ ಅತಿಯಾಗಿ ತಿನ್ನುವುದು, ಪದೇ ಪದೇ ತಿನ್ನುವುದು ಗಂಭೀರ ಅನಾರೋಗ್ಯದ ಸಂಕೇತವಾಗಿರಬಹುದು. ಇದನ್ನು ಬಿಂಗ್ ಈಟಿಂಗ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಇದು ಮಾನಸಿಕ ಕಾಯಿಲೆಯಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಅಗತ್ಯ. ನಿಮಗೂ ಈ ಅಭ್ಯಾಸವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಗಂಭೀರ ತೊಡಕುಗಳು ಉಂಟಾಗಬಹುದು. ಬಿಂಗ್ ಈಟಿಂಗ್ ಡಿಸಾರ್ಡರ್ ಎಂದರೇನು? ಇದು ಯಾವ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅತಿಯಾಗಿ ತಿನ್ನುವ ಅಭ್ಯಾಸ:
ಅನೇಕ ಜನರು ವಾರಾಂತ್ಯದಲ್ಲಿ ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ಹೆಚ್ಚು ತಿನ್ನುತ್ತಾರೆ. ಆದಾಗ್ಯೂ, ಇದು ಬಿಂಗ್ ಈಟಿಂಗ್ ಡಿಸಾರ್ಡರ್ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ನಿರಂತರವಾಗಿ ಮುಂದುವರಿಯುತ್ತಾ ಹೋದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಯಾಕೆಂದರೆ ಈ ಸಮಸ್ಯೆಯಿಂದ ಒಳಗಾಗದರೆ ಮತ್ತೆ ಆಹಾರವನ್ನು ನಿಯಂತ್ರಿಸುವುದು ಸುಲಭವಲ್ಲ. ತಿಂದ ಸ್ವಲ್ಪ ಸಮಯದ ನಂತರ ಏನನ್ನಾದರೂ ತಿನ್ನುವ ಬಯಕೆ ಪ್ರಾರಂಭವಾಗುತ್ತದೆ.
ಬಿಂಗ್ ಈಟಿಂಗ್ ಡಿಸಾರ್ಡರ್‌ನ ಲಕ್ಷಣಗಳೇನು?
- ಅತಿಯಾಗಿ ತಿನ್ನುವ ಅಭ್ಯಾಸ ಹೊಂದಿರುವ ವ್ಯಕ್ತಿಯು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಸಾಮಾನ್ಯ ಲಕ್ಷಣಗಳನ್ನು ಹೊಂದಿರಬಹುದು.
- ನಿಗದಿತ ಸಮಯದಲ್ಲಿ ಅಂದರೆ ಸುಮಾರು 2 ಗಂಟೆಯೊಳಗೆ ಹೆಚ್ಚು ಆಹಾರವನ್ನು ಸೇವಿಸುವುದು.
- ಹೊಟ್ಟೆ ತುಂಬಿದ ಮೇಲೂ ತಿನ್ನುವುದು.
ಇದನ್ನೂ ಓದಿ: ಎದೆ ಉರಿ, ಅಸಿಡಿಟಿ ಸಮಸ್ಯೆಗೆ ‘ಆಂಟಾಸಿಡ್’ ತೆಗೆದುಕೊಳ್ಳುತ್ತಿದ್ದರೆ ಇಂದೇ ಬಿಟ್ಟುಬಿಡಿ; ಬದಲಾಗಿ ಈ ಮನೆಮದ್ದು ಟ್ರೈ ಮಾಡಿ
ಅತಿಯಾಗಿ ತಿನ್ನುವುದರಿಂದಾಗುವ ಅನಾನುಕೂಲಗಳು:
- ಅತಿಯಾಗಿ ತಿಂದ ನಂತರ ವಾಂತಿ ಮತ್ತು ಭೇದಿ.
- ಅತಿಯಾಗಿ ತಿನ್ನುವ ಅಭ್ಯಾಸವು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
- ಅಧಿಕ ಕೊಬ್ಬಿನಿಂದಾಗಿ ಬೊಜ್ಜು, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯ.
- ಅತಿಯಾಗಿ ತಿನ್ನುವ ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಖಿನ್ನತೆ, ಒತ್ತಡ, ಅನೇಕ ಮಾನಸಿಕ ಸಮಸ್ಯೆಗಳು ಬರುತ್ತವೆ.
- ಬಿಂಜ್ ಈಟಿಂಗ್ ಡಿಸಾರ್ಡರ್ ನಿಂದಾಗಿ ಮೂಳೆಗಳು ದುರ್ಬಲವಾಗಬಹುದು. ಆಸ್ಟಿಯೊಪೊರೋಸಿಸ್ ಹೆಚ್ಚಿದ ಅಪಾಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: