Vertigo: ತಲೆ ತಿರುಗುವ ಸಮಸ್ಯೆಗೆ ಕಾರಣ ಏನು? ಅದರ ನಿರ್ವಹಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 19, 2023 | 10:57 AM

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ತಲೆತಿರುಗುವಿಕೆಯನ್ನು ಅನುಭವಿಸಿರುತ್ತಾರೆ. ಆದರೆ ತಲೆತಿರುಗುವಿಕೆ ವಿಭಿನ್ನವಾಗಿರುತ್ತದೆ. ಆರೋಗ್ಯ ತಜ್ಞರು ತಲೆತಿರುಗುವಿಕೆಗೆ ಕಾರಣವೇನು ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿಯನ್ನು ನೀಡಿದ್ದಾರೆ.

Vertigo: ತಲೆ ತಿರುಗುವ ಸಮಸ್ಯೆಗೆ ಕಾರಣ ಏನು? ಅದರ ನಿರ್ವಹಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us on

ಆರೋಗ್ಯ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 9.9 ಮಿಲಿಯನ್ ಜನರು ತಲೆಸುತ್ತು ಸಮಸ್ಯೆಯನ್ನು  ಅನುಭವಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದ ಒಂದು ಹಂತದಲ್ಲಿ ತಲೆಸುತ್ತುವನ್ನು ಅನುಭವಿಸಿರುತ್ತಾನೆ. ಇದು ಸಮತೋಲನದ ಅಸ್ವಸ್ಥತೆಯಾಗಿದ್ದು, ಅದು ಹಠಾತ್ ಅಹಿತಕರ ಸಂವೇದನೆಗೆ ಕಾರಣವಾಗಬಹುದು. ಆರೋಗ್ಯ ತಜ್ಞರು ತಲೆತಿರುಗುವಿಕೆಗೆ ಕಾರಣವೇನು ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಹೆಚ್.ಟಿ ಲೈಫ್​​ ಸ್ಟೆಲ್​​ಗೆ ನೀಡಿದ ಸಂದರ್ಶನದದಲ್ಲಿ, ಜರ್ಮನಿಯ ಮ್ಯೂನಿಚ್ ನಲ್ಲಿರುವ ಲುಡ್ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾನಿಲಯದ ನರವಿಜ್ಞಾನ ವಿಭಾಗ ಮತ್ತು ಜರ್ಮನ್ ಸೆಂಟರ್ ಫಾರ್ ವರ್ಟಿಗೋ ಮತ್ತು ಬ್ಯಾಲೆನ್ಸ್ ಡಿಸಾರ್ಡರ್ಸ್ ವಿಭಾಗದ ನರವಿಜ್ಞಾನದ ಪ್ರಾಧ್ಯಾಪಕರಾದ ಡಾ. ಮೈಕಲ್ ಸ್ಟ್ರಫ್ ಅವರು ಹೇಳಿದರು, ತಲೆತಿರುಗುವಿಕೆಯು ಪ್ರಪಂಚದಾದ್ಯಂತ 10 ಜನರಲ್ಲಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆದರೂ ರೋಗನಿರ್ಣಯದೊಂದಿಗೆ ಈ ಸವಾಲು ಮುಂದುವರೆಯುತ್ತದೆ. ಇದು ಚಿಕಿತ್ಸೆಯನ್ನು ಪಡೆಯುವ ಪ್ರಯಾಣವನ್ನು ದೀರ್ಘ ಮತ್ತು ಕಷ್ಟಕರವಾಗಿಸುತ್ತದೆ. ಈ ರೋಗದ ಹೆಚ್ಚಿನ ಹರಡುವಿಕೆಯ ಹೊರತಾಗಿಯೂ ನಿಖರವಾದ ರೋಗ ನಿರ್ಣಯದ ಮೂಲಕ ಇದಕ್ಕೆ ಸರಿಯಾದ ಚಿಕಿತ್ಸೆ ನೀಡಬಹುದು.”

ಮತ್ತು ಅವರು ಹೇಳಿದರು, ಚಿಕಿತ್ಸೆಗಳು ರೋಗಲಕ್ಷಣಗಳನ್ನು ಸುಧಾರಿಸಬಹುದಾದರೂ, ಆಗಾಗ್ಗೆ ತಲೆತಿರುಗುವಿಕೆಯನ್ನು ಹೊಂದಿರುವ ಜನರು ವೈದ್ಯರು ಸೂಚಿಸಿದ ಚಿಕಿತ್ಸೆಗೆ ಬದ್ಧರಾಗಿರುವುದಿಲ್ಲ. ಇದು ರೋಗಲಕ್ಷಣ ಹಿಂತಿರುಗಲು ಕಾರಣವಾಗಬಹುದು. ವೈದ್ಯರು ಸೂಚಿಸಿದಂತೆ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ರೋಗದ ಚಿಹ್ನೆಗಳು ಮತ್ತು ಅದನ್ನು ಹೇಗೆ ನಿರ್ವಹಿಸಬಹುದು ಎಂಬುದರ ಕುರಿತು ನಾವು ಜಾಗೃತಿ ಮೂಡಿಸಬೇಕು, ಇದರಿಂದ ಜನರು ತಮ್ಮ ತಲೆತಿರುಗುವಿಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯವಿರುವ ಬೆಂಬಲವನ್ನು ಪಡೆಯಬಹುದು.”

ಇದನ್ನೂ ಓದಿ:ವಾಲ್‌ನಟ್ಸ್​​​​ನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ

ತಲೆಸುತ್ತಿಗೆ ಯಾರು ಪ್ರಭಾವಿತರಾಗಬಹುದು?

ಡಾ. ಡಾ ಮೈಕೆಲ್ ಸ್ಟ್ರಪ್ ಹೇಳುತ್ತಾರೆ, ತಲೆಸುತ್ತು  ಯಾವುದೇ ವಯಸ್ಸಿನ ವ್ಯಕ್ತಿಗಳಲ್ಲಿಯೂ ಸಂಭವಿಸಬಹುದು. ಆದರೆ ಇದು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 30% ಜನರು ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 50% ಜನರು ತಲೆತಿರುಗುವಿಕೆಯನ್ನು ಅನುಭವಿಸುತ್ತಾರೆ. ತಲೆತಿರುಗುವಿಕೆಯು ಅಪಾಯಕಾರಿಯಲ್ಲದಿದ್ದರೂ, ಇದರ ಹಠಾತ್ ದಾಳಿಯು ವ್ಯಕ್ತಿಯನ್ನು ಗಾಬರಿಗೊಳಿಸಬಹುದು ಮತ್ತು ಅದರಿಂದ ಕೈಕಾಲು ಮುರಿತದ ಅಪಾಯ ಹೆಚ್ಚುತ್ತದೆ. ಇದು ಅಂತಹವರ ಜೀವನದ ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಮಹಿಳೆಯರಲ್ಲಿ ತಲೆತಿರುಗುವಿಕೆಯು ಹೆಚ್ಚು ಸಾಮಾನ್ಯವಾಗಿದೆ. ಮತ್ತು ಅವರು ಪುರುಷರಿಗಿಂತ ತಲೆತಿರುಗುವಿಕೆಯಿಂದ ಬಳಲುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಅವರು ಹೇಳಿದರು. ಇದಕ್ಕೆ ಕಾರಣ ಅಸ್ಪಷ್ಟವಾಗಿದ್ದರೂ, ಇದು ಹಾರ್ಮೋನುಗಳ ಪ್ರಭಾವದಿಂದಾಗಿರಬಹುದು ಎಂದು ತಜ್ಞರು ಸೂಚಿಸುತ್ತಾರೆ.

ತಲೆಸುತ್ತು  ನಿರ್ವಹಣೆ

ತಲೆ ತಿರುಗುವಿಕೆಯು ಏಕೆ ಆಯಿತೆಂಬ ಬಗ್ಗೆ ಒಮ್ಮೆ ಕಾರಣವನ್ನು ತಿಳಿದುಕೊಂಡರೆ, ವೈದ್ಯರು ಅದಕ್ಕೆ ಚಿಕಿತ್ಸೆ ನೀಡುವ ವಿಧಾನಗಳನ್ನು ಶಿಫಾರಸು ಮಾಡಬಹುದು. ಮತ್ತು ದೀರ್ಘಾವಧಿಯ ಪರಿಹಾರವನ್ನು ಒದಗಿಸಬಹುದು. ರೋಗಲಕ್ಷಣಗಳ ತೀವ್ರತೆಯನ್ನು ಅವಲಂಬಿಸಿ ಕೆಲವು ಸಂದರ್ಭಗಳಲ್ಲಿ ದೈಹಿಕ ಚಿಕಿತ್ಸೆ, ಔಷಧಿ, ಮಾನಸಿಕ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ತಲೆತಿರುಗುವಿಕೆಯನ್ನು ಸರಿಯಾಗಿ ನಿಯಂತ್ರಿಸಲು, ಜನರು ತಮ್ಮ ವೈದ್ಯರ ಸಲಹೆಯನ್ನು ಅನುಸರಿಸಬೇಕು ಮತ್ತು ಅವರು ನೀಡುವ ಔಷಧಿಗಳ ವೇಳಾಪಟ್ಟಿಗೆ ಬದ್ಧರಾಗಿರಬೇಕು. ಇದರಿಂದ ತಲೆತಿರುಗುವಿಕೆಯನ್ನು ಹೊಂದಿರುವ ಜನರು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಎಂದು ಅಬಾಟ್ ಇಂಡಿಯಾದ ವೈದ್ಯಕೀಯ ನಿರ್ದೇಶಕರಾದ ಡಾ. ಜೆಜೋ ಕರಣ್ ಕುಮಾರ್ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:46 am, Fri, 19 May 23