ಜೀವಸತ್ವಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಯಾವುದೇ ರೀತಿಯ ಪೋಷಕಾಂಶದ ಕೊರತೆಯು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಂತೆ ವಿಟಮಿನ್ ಬಿ12 (Vitamin B12) ಕೂಡಾ ನಮ್ಮ ದೇಹ ಸದೃಢವಾಗಿಡಲು ಬಹಳ ಮುಖ್ಯ. ಈ ಜೀವಸತ್ವದ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಬಿ12 ಕೊರತೆಯಿಂದ ಏನಾಗುತ್ತದೆ, ಅದರ ಲಕ್ಷಣಗಳು ಯಾವುವು ಮತ್ತು ಆ ಕೊರತೆಯನ್ನು ಹೇಗೆ ತಡೆಗಟ್ಟಬಹುದು ಎಂಬ ಮಾಹಿತಿ ಇಲ್ಲಿದೆ.
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹಕ್ಕೆ ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಈ ಪೋಷಕಾಂಶಗಳ ಕೊರತೆಯು ವ್ಯಕ್ತಿಯಲ್ಲಿ ಸಣ್ಣ ಪ್ರಮಾಣದ ಅಥವಾ ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು. ಅದರಂತೆ ವಿಟಮಿನ್ ಬಿ12 ಆರೋಗ್ಯಕರ ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಈ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
ದೀರ್ಘಕಾಲದ ವಿಟಮಿನ್ ಬಿ12 ಕೊರತೆಯು ಆರೋಗ್ಯಕ್ಕೆ ಅಪಾಯಕಾರಿ. ಇದು ನರ ಹಾನಿ, ಹೃದಯ ವೈಫಲ್ಯ ಮತ್ತು ಕರುಳಿನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಈ ಪೋಷಕಾಂಶದ ಕೊರತೆಯಿರುವುದನ್ನು ಪತ್ತೆ ಹಚ್ಚಿ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯಬೇಕು.
• ನಾಲಿಗೆ ಮೇಲೆ ದದ್ದು ಮತ್ತು ಬಾಯಿಯಲ್ಲಿ ಹುಣ್ಣು
• ಉಸಿರಾಟದ ತೊಂದರೆ
• ಕೈ ಮತ್ತು ಕಾಲುಗಳ ಮರಗಟ್ಟುವಿಕೆ
• ತೂಕನಷ್ಟ
• ತಲೆನೋವು
• ಹಸಿವಿನ ಕೊರತೆ
• ಮೂಳೆಗಳು ದುರ್ಬಲವಾಗುವುದು
ಇದನ್ನೂ ಓದಿ:ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ
ಕೆಂಪು ರಕ್ತಕಣಗಳು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುವ ಕೆಲಸವನ್ನು ಮಾಡುತ್ತದೆ. ಅವುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ವಿಟಮಿನ್ ಬಿ12 ಅತ್ಯವಶ್ಯಕವಾಗಿದೆ. ಹೀಗಿರುವಾಗ ಬಿ12 ಜೀವಸತ್ವದ ಕೊರತೆಯಿದ್ದರೆ ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದು ಆಯಾಸಕ್ಕೆ ಕಾರಣವಾಗಬಹುದು. ಈ ಪರಿಸ್ಥಿತಿಯನ್ನು ಮೆಗಾಲೋಬ್ಲಾಸ್ಟಿಕ್ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಆಯಾಸದ ಜೊತೆಗೆ ಉಸಿರಾಟದ ತೊಂದರೆ, ಅಜೀರ್ಣ, ಹೆದರಿಕೆ, ದೃಷ್ಟಿ ಸಮಸ್ಯೆಗಳು, ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.
ವಿಟಮಿನ್ ಬಿ 12 ಪೋಷಕಾಂಶವು ಮಾಂಸ, ಮೀನು, ಚೀಸ್ ಮೊಟ್ಟೆ ಮತ್ತು ಬೆಣ್ಣೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಅಲ್ಲದೆ ಅಣಬೆ, ಆಲೂಗಡ್ಡೆ, ಮತ್ತು ಬೀಟ್ರೂಟ್ ಸೇವಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಬಹುದು. ಆರೋಗ್ಯ ತಜ್ಞರ ಪ್ರಕಾರ ಈ ಆಹಾರಗಳು ಸಾಕಷ್ಟು ಪ್ರಮಾಣದಲ್ಲಿ ಮಿಟಮಿನ್ ಬಿ12 ನ್ನು ಒದಗಿಸುವುದಿಲ್ಲ. ಆದ್ದರಿಂದ ಈ ಕೊರತೆ ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: