ಜನರ ಜೀವನಶೈಲಿಯು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮುಂದಿನ ಪೀಳಿಗೆ ಬೆಳೆಯಬೇಕೆಂದರೆ ಸಂತಾನೋತ್ಪತ್ತಿ ಅಗತ್ಯ. ಇತ್ತೀಚೆಗೆ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ. ಮೊದಲೆಲ್ಲ ಮಕ್ಕಳಾಗದೆ ಇರುವುದಕ್ಕೆ ಮಹಿಳೆಯರನ್ನು ಮಾತ್ರ ದೂರಲಾಗುತ್ತಿತ್ತು. ಆದರೆ, ಈಗ ಪುರುಷರಲ್ಲಿನ ಬಂಜೆತನದ ಪ್ರಮಾಣ ಹೆಚ್ಚುತ್ತಲೇ ಇದೆ. ಪುರುಷರಲ್ಲಿ ಫಲವತ್ತತೆ ಕಡಿಮೆಯಾಗಲು ಅವರ ಜೀವನಶೈಲಿಯೇ ಮುಖ್ಯ ಕಾರಣ.
ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ ಪ್ರಕಾರ, ಭಾರತದಲ್ಲಿ 27.5 ಮಿಲಿಯನ್ ಪುರುಷರು ಮತ್ತು ಮಹಿಳೆಯರು ಬಂಜೆತನ ಹೊಂದಿದ್ದಾರೆ. ಹೆಚ್ಚಿನ ಜನರು ಬಂಜೆತನ ಮಹಿಳೆಯರ ಸಮಸ್ಯೆಯೆಂದು ಹೇಳಿದರೂ ಗರ್ಭ ಧರಿಸಲು ಗಂಡು ಮತ್ತು ಹೆಣ್ಣುಗಳಿಬ್ಬರ ಕೊಡುಗೆಯೂ ಮುಖ್ಯ ಎಂಬುದನ್ನು ಯಾರೂ ಸುಳ್ಳು ಎನ್ನುವಂತಿಲ್ಲ. ಹೀಗಾಗಿ, ಗರ್ಭ ಧರಿಸದಿರಲು ಪುರುಷರ ವೀರ್ಯಾಣುವೂ ಕಾರಣವಾಗಬಹುದು. ಬಂಜೆತನದ ಪ್ರಕರಣಗಳಲ್ಲಿ ಶೇ. 40ರಷ್ಟು ಪುರುಷರ ಫಲವತ್ತತೆಯೇ ಕಾರಣವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದನ್ನೂ ಓದಿ: ಪುರುಷರಲ್ಲಿ ಖಿನ್ನತೆಯ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ!
ಗರ್ಭಧಾರಣೆಯ ಪ್ರಕ್ರಿಯೆಯಲ್ಲಿ ವೀರ್ಯದ ಗುಣಮಟ್ಟವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೀರ್ಯದ ಗುಣಮಟ್ಟ, ಶಕ್ತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು, ಯಶಸ್ವಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುವ ಸಕಾರಾತ್ಮಕ ಜೀವನಶೈಲಿ ಬದಲಾವಣೆಗಳನ್ನು ಪುರುಷರು ಅಳವಡಿಸಿಕೊಳ್ಳಬೇಕು.
ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ 5 ಪ್ರಮುಖ ಅಂಶಗಳು ಇಲ್ಲಿವೆ:
1. ಅತಿಯಾದ ಧೂಮಪಾನ ಮಾಡುವ ಪುರುಷರಲ್ಲಿ ವೀರ್ಯಾಣು ಕಡಿಮೆಯಾಗುತ್ತದೆ. ಅತಿಯಾದ ಧೂಮಪಾನವು ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಗುಣಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ಬಂಜೆತನಕ್ಕೆ ಕಾರಣವಾಗುತ್ತದೆ.
2. ಆಲ್ಕೋಹಾಲ್ ಸೇವನೆಯು ಆಧುನಿಕ ಪ್ರವೃತ್ತಿಯಾಗಿದ್ದರೂ, ಅತಿಯಾದ ಸೇವನೆಯು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ವೀರ್ಯದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.
3. ನಮ್ಮ ದೇಹದ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿರ್ಣಾಯಕ ಪೋಷಕಾಂಶಗಳನ್ನು ಹೊಂದಿರದ ಕಳಪೆ ಆಹಾರವು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ದೈಹಿಕ ಚಟುವಟಿಕೆಯ ಕೊರತೆ ಮತ್ತು ಸ್ಥೂಲಕಾಯತೆಯು ಟೆಸ್ಟೋಸ್ಟೆರಾನ್ ಸೇರಿದಂತೆ ಹಾರ್ಮೋನ್ ಮಟ್ಟವನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ಆಂಟಿಆಕ್ಸಿಡೆಂಟ್ ಹೆಚ್ಚಾಗಿರುವ ಹಣ್ಣುಗಳು, ತರಕಾರಿಗಳು ಮತ್ತು ನಟ್ಸ್ಗಳಿಗೆ ಆದ್ಯತೆ ನೀಡುವ ಆಹಾರವನ್ನು ಸೇವಿಸುವುದು ಅಗತ್ಯ.
ಇದನ್ನೂ ಓದಿ: ಉಗುರುಗಳನ್ನು ಉಜ್ಜಿದರೆ ಕೂದಲು ಉದ್ದವಾಗುತ್ತಾ?
4. ಇಂದಿನ ವ್ಯಕ್ತಿಯ ಜಡ ಜೀವನ ವಿಧಾನದಿಂದಾಗಿ ಪ್ರತಿಯೊಬ್ಬರಿಗೂ ಒತ್ತಡ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡವು ವೀರ್ಯ ಉತ್ಪಾದನೆ ಮತ್ತು ಕಾರ್ಯದ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.
5. ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಸೋಂಕುಗಳು ಅದರಲ್ಲೂ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ ಸೋಂಕುಗಳು ಪುರುಷರ ಗುಪ್ತಾಂಗದಲ್ಲಿ ಉರಿಯೂತ ಮತ್ತು ಗಾಯವನ್ನು ಉಂಟುಮಾಡಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ