ಪುರುಷರಲ್ಲಿ ಖಿನ್ನತೆಯ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ!

ಸಾಮಾನ್ಯವಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಖಿನ್ನತೆಯ ಸಮಸ್ಯೆ ಹೆಚ್ಚು. ಆದರೆ, ಖಿನ್ನತೆಗೊಳಗಾಗಿ ಆತ್ಮಹತ್ಯೆಯಿಂದ ಸಾಯುವ ಪುರುಷರ ಸಂಖ್ಯೆಯು ಮಹಿಳೆಯರಿಗಿಂತ 4 ಪಟ್ಟು ಹೆಚ್ಚಾಗಿದೆ. ಪುರುಷರಲ್ಲಿ ಖಿನ್ನತೆ ಉಂಟಾದಾಗ ಯಾವ ಲಕ್ಷಣಗಳು ಗೋಚರಿಸುತ್ತವೆ, ಅದರಿಂದ ಹೊರಬರುವುದು ಹೇಗೆಂಬುದರ ಮಾಹಿತಿ ಇಲ್ಲಿದೆ.

ಪುರುಷರಲ್ಲಿ ಖಿನ್ನತೆಯ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ!
ಖಿನ್ನತೆImage Credit source: pexels.com
Follow us
ಸುಷ್ಮಾ ಚಕ್ರೆ
|

Updated on:Sep 11, 2023 | 2:51 PM

ಖಿನ್ನತೆ ಎಂಬುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲ ಖಿನ್ನತೆ (Depression) ಒಂದು ಕಾಯಿಲೆ ಎಂದು ನಂಬಲು ಹಲವರು ತಯಾರಿರಲಿಲ್ಲ. ಅದಕ್ಕಾಗಿ ಯಾರೂ ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ಈಗೀಗ ದೈಹಿಕ ಕಾಯಿಲೆಯಷ್ಟೇ ಮಾನಸಿಕ ರೋಗವೂ ಸಹಜ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಹೀಗಾಗಿ, ಖಿನ್ನತೆ ಮತ್ತಿತರ ಮಾನಸಿಕ ಸಂಬಂಧಿ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸಾಮಾನ್ಯವಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಖಿನ್ನತೆಯ ಸಮಸ್ಯೆ ಹೆಚ್ಚು. ಆದರೆ, ಪುರುಷರಲ್ಲೂ ಈ ಸಮಸ್ಯೆ ಇಲ್ಲವೇ ಇಲ್ಲವೆಂದೇನಲ್ಲ. ಪುರುಷರಲ್ಲಿ ಖಿನ್ನತೆ ಉಂಟಾದಾಗ ಯಾವ ಲಕ್ಷಣಗಳು ಗೋಚರಿಸುತ್ತವೆ, ಅದರಿಂದ ಹೊರಬರುವುದು ಹೇಗೆಂಬುದರ ಮಾಹಿತಿ ಇಲ್ಲಿದೆ.

ಮಹಿಳೆಯರಲ್ಲಿ ಖಿನ್ನತೆಯು ಹೆಚ್ಚು ಸಾಮಾನ್ಯವಾಗಿದೆ. ಅಮೆರಿಕಾದಲ್ಲಿ ಶೇ. 5.5ರಷ್ಟು ಪುರುಷರೊಂದಿಗೆ ಹೋಲಿಸಿದರೆ ಶೇ. 10.4ರಷ್ಟು ಮಹಿಳೆಯರ ಮೇಲೆ ಈ ಖಿನ್ನತೆ ಪರಿಣಾಮ ಬೀರುತ್ತದೆ. ಆದರೆ, ಖಿನ್ನತೆಗೊಳಗಾಗಿ ಆತ್ಮಹತ್ಯೆಯಿಂದ ಸಾಯುವ ಪುರುಷರ ಸಂಖ್ಯೆಯು ಮಹಿಳೆಯರಿಗಿಂತ 4 ಪಟ್ಟು ಹೆಚ್ಚಾಗಿದೆ.

ಖಿನ್ನತೆ ಉಂಟಾದಾಗ ಬಹುತೇಕರಿಗೆ ದುಃಖ ಹೆಚ್ಚಾಗುತ್ತದೆ. ಪುರುಷರು ಮಾದಕ ವ್ಯಸನಕ್ಕೆ ಅಡಿಕ್ಟ್ ಆಗುತ್ತಾರೆ. ತಮ್ಮ ಪತ್ನಿ, ಸ್ನೇಹಿತರ ಜೊತೆ ಆತ್ಮೀಯವಾಗಿ ಒಡನಾಟ ಹೊಂದಲು ಇಷ್ಟಪಡುವುದಿಲ್ಲ. ಒಂಟಿಯಾಗಿಯೇ ಇರಲು ಬಯಸುತ್ತಾರೆ. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಪ್ರಕಾರ, ಅಮೆರಿಕಾದಲ್ಲಿ ಶೇ. 9ರಷ್ಟು ಪುರುಷರು ಪ್ರತಿದಿನ ಖಿನ್ನತೆ ಅಥವಾ ಆತಂಕದ ಭಾವನೆಗಳನ್ನು ಹೊಂದಿರುತ್ತಾರೆ. ಶೇ. 30.6ರಷ್ಟು ಪುರುಷರು ತಮ್ಮ ಜೀವಿತಾವಧಿಯಲ್ಲಿ ಖಿನ್ನತೆಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: Postpartum Depression: ಪ್ರಸವ ನಂತರದ ಖಿನ್ನತೆಗಳು ಮತ್ತು ಅದರಿಂದ ಹೊರಬರುವ ಮಾರ್ಗಗಳು

ಖಿನ್ನತೆಯು ಒಬ್ಬ ವ್ಯಕ್ತಿಯ ಆಲೋಚನೆಗಳು, ಭಾವನೆಗಳು, ದೇಹ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುವ ಒಂದು ಮೂಡ್ ಡಿಸಾರ್ಡರ್. ಇದು ಕೆಲವರಿಗೆ ತಾತ್ಕಾಲಿಕವಾಗಿ ಆಗಾಗ ಕಾಣಿಸಿಕೊಂಡು, ಸರಿ ಹೋಗುತ್ತದೆ. ಇನ್ನು ಕೆಲವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ಪುರುಷರು ಮತ್ತು ಮಹಿಳೆಯರಲ್ಲಿ ಖಿನ್ನತೆಯ ಲಕ್ಷಣಗಳು ಹೇಗೆ ಭಿನ್ನವಾಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಜನರು ತಮ್ಮಲ್ಲಿ ಮತ್ತು ಅವರ ಪ್ರೀತಿಪಾತ್ರರಲ್ಲಿ ಖಿನ್ನತೆಯ ಬಗ್ಗೆ ಅರಿವು ಮೂಡಿಸಲು ಇದು ಸಹಾಯ ಮಾಡುತ್ತದೆ. ಹಲವರು ಈ ಖಿನ್ನತೆಯನ್ನು ಗುರುತಿಸಿ, ಚಿಕಿತ್ಸೆ ಪಡೆಯುವುದೇ ಇಲ್ಲ. ಇದು ಈ ರೋಗದ ಹೆಚ್ಚಳಕ್ಕೆ ಕಾರಣವಾಗಬಹುದು.

ಖಿನ್ನತೆಯ ಕೆಲವು ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ಆಗಿರುತ್ತವೆ. ದುಃಖ, ಅಳು, ಕೀಳರಿಮೆ, ತಪ್ಪಿತಸ್ಥ ಅಥವಾ ಖಾಲಿ ಭಾವನೆ ಇದರ ಲಕ್ಷಣಗಳಲ್ಲಿ ಮುಖ್ಯವಾದುದು. ಹಸಿವು ಅಥವಾ ತೂಕದಲ್ಲಿ ಬದಲಾವಣೆ, ತುಂಬಾ ಕಡಿಮೆ ಅಥವಾ ಹೆಚ್ಚು ನಿದ್ರೆ, ಸುಸ್ತು ಅಥವಾ ದಣಿದ ಭಾವನೆ, ಏಕಾಗ್ರತೆಗೆ ತೊಂದರೆ ಇವು ಖಿನ್ನತೆಯ ಲಕ್ಷಣ. ಆದರೆ, ಖಿನ್ನತೆಯಿರುವ ಪ್ರತಿಯೊಬ್ಬರೂ ಈ ಎಲ್ಲಾ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ.

ಇದನ್ನೂ ಓದಿ: ಎದೆಹಾಲುಣಿಸುವುದರಿಂದ ತಾಯಂದಿರಲ್ಲಿ ಖಿನ್ನತೆ ಉಂಟಾಗುತ್ತಾ?; ಇಲ್ಲಿದೆ ಮಾಹಿತಿ

ಪುರುಷರಲ್ಲಿ ಖಿನ್ನತೆಯ ಸಂಕೇತಗಳು ಕೆಲವೊಮ್ಮೆ ಭಿನ್ನವಾಗಿರುತ್ತದೆ. ಖಿನ್ನತೆಗೆ ಒಳಗಾದ ಪುರುಷರು ಆಲ್ಕೋಹಾಲ್ ಮತ್ತು ಮಾದಕ ದ್ರವ್ಯ ಸೇವನೆಯನ್ನು ಹೆಚ್ಚು ಮಾಡುತ್ತಾರೆ. ಕೋಪದ ನಿರ್ಧಾರ ಮತ್ತು ತಮಗೆ ಅಪಾಯ ತಂದುಕೊಳ್ಳುವ ನಡವಳಿಕೆಯನ್ನು ಪ್ರದರ್ಶಿಸುವುದು ಮಹಿಳೆಯರಿಗಿಂತ ಪುರುಷರೇ ಹೆಚ್ಚು.

ಖಿನ್ನತೆಯಿರುವ ಪುರುಷರಲ್ಲಿ ಈ ವರ್ತನೆಯ ಬದಲಾವಣೆಗಳನ್ನು ಗಮನಿಸಬಹುದು:

– ಹೆಚ್ಚು ಕುಡಿಯುವುದು ಅಥವಾ ಔಷಧಿಗಳನ್ನು ತೆಗೆದುಕೊಳ್ಳುವುದು.

– ಕುಟುಂಬ ಅಥವಾ ಸಾಮಾಜಿಕವಾಗಿ ಬೆರೆಯದೇ ಇರುವುದು.

– ಸರಿಯಾದ ವಿರಾಮವನ್ನು ತೆಗೆದುಕೊಳ್ಳದೆ ಕೆಲಸ ಮಾಡುವುದು.

– ಕೆಲಸ ಅಥವಾ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಲು ಕಷ್ಟ ಪಡುವುದು.

– ಜೂಜು ಅಥವಾ ಅಸುರಕ್ಷಿತ ಲೈಂಗಿಕತೆಯಂತಹ ಅಪಾಯ ತೆಗೆದುಕೊಳ್ಳುವ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದು.

– ಲೈಂಗಿಕವಾಗಿ ಆಸಕ್ತಿಯನ್ನು ಕಳೆದುಕೊಳ್ಳುವುದು.

– ಆತ್ಮಹತ್ಯೆಗೆ ಯತ್ನಿಸುವುದು.

ಪುರುಷರಲ್ಲಿ ಖಿನ್ನತೆಯ ಆರಂಭಿಕ ಸಂಕೇತಗಳೆಂದರೆ, ಕೋಪ, ಹತಾಶೆ, ಆಕ್ರಮಣಶೀಲತೆ, ಸಿಡುಕುತನ, ತಲೆನೋವು, ಎದೆಯಲ್ಲಿ ಬಿಗಿತ, ಕೀಲು, ಕೈಕಾಲು ಅಥವಾ ಬೆನ್ನು ನೋವು, ಜೀರ್ಣಕಾರಿ ಸಮಸ್ಯೆಗಳು, ಆಯಾಸ, ಹೆಚ್ಚು ಅಥವಾ ಕಡಿಮೆ ನಿದ್ರಿಸುವುದು, ತುಂಬಾ ಅಥವಾ ತುಂಬಾ ಕಡಿಮೆ ತಿನ್ನುವುದು, ತೂಕ ಕಡಿಮೆಯಾಗುವುದು. ಖಿನ್ನತೆಯು ವ್ಯಕ್ತಿಯ ಮೆದುಳಿನ ರಾಸಾಯನಿಕಗಳ ಮೇಲೆ ಬೀರುವ ಪರಿಣಾಮದಿಂದಾಗಿ ಈ ಕೆಲವು ರೋಗಲಕ್ಷಣಗಳು ಉಂಟಾಗಬಹುದು. ಖಿನ್ನತೆಯು ಸಿರೊಟೋನಿನ್ ಮತ್ತು ನೊರ್ಪೈನ್ಫ್ರಿನ್ ಮಟ್ಟವನ್ನು ಬದಲಾಯಿಸುತ್ತದೆ. ಅವು ನೋವು ಮತ್ತು ಮನಸ್ಥಿತಿಯನ್ನು ನಿಯಂತ್ರಿಸುವ ಮೆದುಳಿನ ಸಂದೇಶವಾಹಕಗಳಾಗಿವೆ. ಹೀಗಾಗಿ, ಈ ಲಕ್ಷಣಗಳು ನಿಮಗೆ ಅಥವಾ ನಿಮ್ಮ ಸುತ್ತಲಿನವರಲ್ಲಿ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 11 September 23

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ