Postpartum Depression: ಪ್ರಸವ ನಂತರದ ಖಿನ್ನತೆಗಳು ಮತ್ತು ಅದರಿಂದ ಹೊರಬರುವ ಮಾರ್ಗಗಳು

ಮಗುವಿನ ಉತ್ತಮ ಬೆಳವಣಿಗೆ ಮತ್ತು ಆರೈಕೆಗಾಗಿ ತಾಯಿ ಸಂತೋಷವಾಗಿರುವುದು ಬಹಳ ಮುಖ್ಯ. ಹೆರಿಗೆಯ ನಂತರ ತಾಯಿಯ ಆರೋಗ್ಯವು ವಿಶೇಷವಾಗಿ ಮಾನಸಿಕ ಆರೋಗ್ಯವು ಉತ್ತಮವಾಗಿಲ್ಲದಿದ್ದರೆ, ಅದು ನೇರವಾಗಿ ಮಗುವಿನ ಆರೈಕೆಯ ಮೇಲೆ ಮತ್ತು ಆ ಮಹಿಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹೆರಿಗೆಯ ನಂತರ ಖಿನ್ನತೆಗೆ ಒಳಗಾಗದಂತೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

Postpartum Depression: ಪ್ರಸವ ನಂತರದ ಖಿನ್ನತೆಗಳು ಮತ್ತು ಅದರಿಂದ ಹೊರಬರುವ ಮಾರ್ಗಗಳು
Postpartum Depression
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jul 23, 2023 | 12:14 PM

ತಾಯ್ತನವು ಪ್ರತಿಯೊಬ್ಬ ಮಹಿಳೆಯು ಅನುಭವಿಸುವ ಒಂದು ಸುಂದರ ಕ್ಷಣವಾಗಿದೆ. ಆದರೆ ಗರ್ಭಾವಸ್ಥೆಯಿಂದ ಹಿಡಿದು ಮಗುವಿನ ಜನನದವರೆಗೆ ಆ ಪ್ರಯಾಣವು ಸುಲಭವಲ್ಲ. ಆ ಸಮಯದಲ್ಲಿ ಮಹಿಳೆಯು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಮಹಿಳೆಯು ಸಾಕಷ್ಟು ದೈಹಿಕ ಮತ್ತು ಬದಲಾವಣೆಗೆ ಒಳಗಾಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ಹೆರಿಗೆಯ ನಂತರ ಅನೇಕ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ಹಾಗಾಗಿ ಬಾಣಂತಿ ಮಹಿಳೆ ಕುಟುಂಬದ ಬೆಂಬಲದೊಂದಿಗೆ ಮಾನಸಿಕ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳುವ ಮೂಲಕ ಖಿನ್ನತೆಯಿಂದ ಹೊರಬರಬಹುದು.

ಪ್ರಸವ ನಂತರ ಖಿನ್ನತೆ ಏಕೆ ಸಂಭವಿಸುತ್ತದೆ?

ರೋಗ್ಯ ತಜ್ಞರ ಪ್ರಕಾರ, ಪ್ರಸವ ನಂತರದ ಖಿನ್ನತೆಗೆ ಒಂದೇ ಕಾರಣವಿಲ್ಲ. ಇದು ಅನೇಕ ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳ ಸಂಯೋಜನೆಯಿಂದ ಉಂಟಾಗುವ ಸಮಸ್ಯೆಯಾಗಿದೆ. ಹೆರಿಗೆಯ ನಂತರ ನಿಮ್ಮ ದೇಹದಲ್ಲಿನ ಹಾರ್ಮೋನುಗಳಾದ (ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್) ನ ಮಟ್ಟದಲ್ಲಿನ ಕುಸಿತವೇ ಇದರ ಹಿಂದಿನ ಪ್ರಮುಖ ಕಾರಣವೆಂದು ಹೇಳಬಹುದು. ಈ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನುಗಳ ಮಟ್ಟವು ವೇಗವಾಗಿ ಕುಸಿಯಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಾಣಂತಿ ಮಹಿಳೆಯು ಆಯಾಸ, ಆಲಸ್ಯ ಮತ್ತು ದುಃಖವನ್ನು ಅನುಭವಿಸಬಹುದು. ಇದಲ್ಲದೆ ನವಜಾತ ಶಿಶುವಿನ ಆರೈಕೆಯ ಬಗ್ಗೆ ನಿಮ್ಮ ಹೆಚ್ಚಿದ ಆತಂಕವು ಪ್ರಸವ ನಂತರದ ಖಿನ್ನತೆಗೆ ಕಾರಣವೆಂದು ಪರಿಗಣಿಸಲಾಗಿದೆ.

ಪ್ರಸವ ನಂತರದ ಖಿನ್ನತೆಗೆ ಕಾರಣಗಳು:

  • ಹಾರ್ಮೋನುಗಳ ತ್ವರಿತ ಬದಲಾವಣೆ
  • ಯಾವುದಾದರು ಒಂದು ವಿಷಯದ ಬಗ್ಗೆ ಹೆಚ್ಚು ಯೋಚಿಸುವುದು.
  • ಬಾಣಂತಿ ಮಹಿಳೆಯ ಕುಟುಂಬದಲ್ಲಿ ಯಾರಾದರೂ ಈ ಮೊದಲು ಈ ರೀತಿಯ ಸಮಸ್ಯೆನ್ನು ಹೊಂದಿದ್ದರೆ
  • ಹೆಚ್ಚು ಏಕಾಂಗಿಯಾಗಿರುವುದು

ಪ್ರಸವಾನಂತರ ಖಿನ್ನತೆಯ ಲಕ್ಷಣಗಳು:

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಒಬ್ಬ ಮಹಿಳೆಯಿಂದ ಇನ್ನೊಬ್ಬ ಮಹಿಳೆಗೆ ಭಿನ್ನವಾಗಿರುತ್ತದೆ.

  • ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸುವಲ್ಲಿ ತೊಂದರೆ
  • ಹಸಿವಿನ ಕೊರತೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ತಿನ್ನುವುದು
  • ನಿದ್ರಾಹೀನತೆ ಅಥವಾ ಹೆಚ್ಚು ನಿದ್ರೆ
  • ತೀವ್ರ ಆಯಾಸ ಅಥವಾ ಶಕ್ತಿಯ ನಷ್ಟ
  • ನೀವು ಹಿಂದೆ ಆನಂದಿಸಿದ ಚಟುವಟಿಕೆ ಅಥವಾ ಕಾರ್ಯಗಳಲ್ಲಿ ಆಸಕ್ತಿ ಮತ್ತು ಆನಂದವನ್ನು ಕಳೆದುಕೊಳ್ಳುವುದು
  • ಕಿರಿಕಿರಿ ಮತ್ತು ಹೆಚ್ಚಿದ ಕೋಪ
  • ಸ್ಪಷ್ಟವಾಗಿ ಯೋಚಿಸುವ, ಕೇಂದ್ರೀಕರಿಸುವ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಕೊರತೆ
  • ಚಡಪಡಿಕೆ, ತೀವ್ರ ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್

ಇದನ್ನೂ ಓದಿ: ಅಧಿಕ ರಕ್ತದೊತ್ತಡವು ಕಣ್ಣುಗಳ ಮೇಲೆ ಪರಿಣಾಮ ಬೀರಬಹುದೇ?

ಪ್ರಸವ ನಂತರದ ಖಿನ್ನತೆಗೆ ಹೇಗೆ ಚಿಕಿತ್ಸೆ ಪಡೆಯಬಹುದು?

ಹೆರಿಗೆಯ ನಂತರ ನೀವು ಇಂತಹ ಖಿನ್ನತೆಯ ಸಮಸ್ಯೆಗಳನ್ನು ಅನುಭವಿಸಿದರೆ, ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಬೇಕು. ಈ ಸಮಸ್ಯೆ ಥೈರಾಯ್ಡ್ ಅಥವಾ ಯಾವುದೇ ಆಧಾರವಾಗಿರುವ ಕಾಯಿಲೆಯಿಂದ ಉಂಟಾಗಿದ್ದರೆ, ಅದಕ್ಕೆ ಚಿಕಿತ್ಸೆಯ ಅಗತ್ಯವಿದೆ. ಹೆರಿಗೆಯ ನಂತರದ ಖಿನ್ನತೆಯ ಸಾಮಾನ್ಯ ಲಕ್ಷಣಗಳಿಗೆ ಮಾನಸಿಕ ಚಿಕಿತ್ಸೆ ಮತ್ತು ಔಷಧಿಗಳ ಅಗತ್ಯವಿರಬಹುದು. ಹಾಗಾಗಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಪ್ರಸವ ನಂತರದ ಖಿನ್ನತೆಯನ್ನು ಗುಣಪಡಿಸಲು ಚಿಕಿತ್ಸೆಯ ಜೊತೆಗೆ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆಗಳನ್ನು ಸೇರಿಸಿಕೊಳ್ಳಿ. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಜೊತೆಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಆರೋಗ್ಯಕರವಾದ ಹಾಗೂ ಬಾಣಂತಿ ಆಹಾರಗಳನ್ನು ಹೆಚ್ಚು ಸೇವಿಸಿ, ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಿ, ಮಗುವಿಗೆ ಜನ್ಮ ನೀಡಿದ ಬಳಿಕ ನೀವು ಅನುಭವಿಸುವ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡಿ. ಖಂಡಿತವಾಗಿಯೂ ಅವರು ನಿಮಗೆ ಖಿನ್ನತೆಯಿಂದ ಹೊರಬರಲು ಭಾವನಾತ್ಮ ಬೆಂಬಲ ನೀಡುತ್ತಾರೆ. ಅಲ್ಲದೆ ಯಾವಾಗಲೂ ಧನಾತ್ಮಕ ಚಿಂತನೆಗಳನ್ನು ಇರಿಸಿಕೊಳ್ಳಿ. ಇದು ಖಿನ್ನತೆಯಿಂದ ತ್ವರಿತವಾಗಿ ಹೊರಬರಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್