Health Tips: ಅವಕಾಡೊ ಹಣ್ಣಿನಲ್ಲಿದೆ ತ್ವಚೆಯ ಆರೋಗ್ಯದ ಗುಟ್ಟು, ಈ ಹಣ್ಣನ್ನು ಹೀಗೂ ಬಳಸಬಹುದು!

| Updated By: ಅಕ್ಷತಾ ವರ್ಕಾಡಿ

Updated on: Feb 02, 2024 | 5:47 PM

ಅವಕಾಡೊ ಹಣ್ಣಿನ ಹೆಸರನ್ನು ಕೇಳಿದ್ದರೂ, ಈ ಹೆಸರು ಹೇಳಿದ ಕೂಡಲೇ ಯಾವ ಹಣ್ಣು ಎಂದು ಯೋಚಿಸುವವರೇ ಹೆಚ್ಚು. ಅದೇ ಬೆಣ್ಣೆ ಹಣ್ಣು ಎಂದ ಕೂಡಲೇ ತಕ್ಷಣವೇ ನೆನಪಿಗೆ ಬರುತ್ತದೆ. ಎಲ್ಲೆಡೆ ಲಭ್ಯವಿರುವ ಈ ಹಣ್ಣು ದುಬಾರಿಯಾಗಿದ್ದರೂ ತಿನ್ನಲು ರುಚಿಕರವಾಗಿದ್ದು, ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಈ ಹಣ್ಣು ಸೇವನೆಯನ್ನು ಮಾಡುವುದರಿಂದ ತ್ವಚೆಯನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಬಹುದು.

Health Tips: ಅವಕಾಡೊ ಹಣ್ಣಿನಲ್ಲಿದೆ ತ್ವಚೆಯ ಆರೋಗ್ಯದ ಗುಟ್ಟು, ಈ ಹಣ್ಣನ್ನು ಹೀಗೂ ಬಳಸಬಹುದು!
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ವಿದೇಶದಲ್ಲಿ ಬೆಳೆಯುವ ಈ ಅವಕಾಡೊ ದೇಶಿಯ ಮಾರುಕಟ್ಟೆಯಲ್ಲಿ ಹಣ್ಣು ಪ್ರಿಯರ ಗಮನ ಸೆಳೆಯುತ್ತದೆ. ಬೆಣ್ಣೆ ಹಣ್ಣು ಎಂದು ಕರೆಯುವ ಈ ಅವಕಾಡೊ ಹಣ್ಣು ಆರೋಗ್ಯಕ್ಕೆ ಹಿತಕರ. ಈ ಅವಕಾಡೊದಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಮ್, ರೈಬೋಫ್ಲಾವಿನ್, ನಿಯಾಸಿನ್, ಫೋಲೇಟ್, ಪ್ಯಾಂಟೊಥೆನಿಕ್ ಆಮ್ಲ, ಮೆಗ್ನೀಸಿಯಮ್, ಆ್ಯಂಟಿ ಆಕ್ಸಿಡೆಂಟ್‌ಗಳು, ವಿಟಮಿನ್ ಬಿ 6, ಎ, ಇ ಹಾಗೂ ಸಿ ಅಂಶಗಳು ಹೇರಳವಾಗಿದೆ. ಈ ಬೆಣ್ಣೆ ಹಣ್ಣನ್ನು ಸೇವಿಸುವುದರಿಂದ ತ್ವಚೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ

ಅವಕಾಡೊ ಹಣ್ಣಿನ ಸೇವನೆಯಿಂದಾಗಿ ಲಾಭಗಳಿವು:

  • ಮೊಡವೆಗಳನ್ನು ತೊಡೆದುಹಾಕಲು ಸಹಕಾರಿ : ಮೊಡವೆಯಿಂದ ಮುಖದ ಸೌಂದರ್ಯವು ಹಾಳಾಗಿದ್ದವರಿಗೆ ಬೆಣ್ಣೆ ಹಣ್ಣು ಸೂಪರ್ ಫುಡ್ ಆಗಿದೆ. ಇದರಲ್ಲಿರುವ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವು ಮೊಡವೆಗಳಿಂದ ಕಿರಿಕಿರಿಗೊಂಡ ಚರ್ಮವನ್ನು ಗುಣಪಡಿಸಿ ಈ ಸಮಸ್ಯೆಯನ್ನು ನಿವಾರಿಸುತ್ತದೆ.
  • ವಯಸ್ಸಾಗುವಿಕೆಯನ್ನು ತಡೆಯುತ್ತದೆ :  ಅವಕಾಡೊ ಹಣ್ಣಿನ ಸೇವನೆಯಿಂದ ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆಯಾಗುತ್ತದೆ. ಚರ್ಮವು ಮೃದುವಾಗಿಸಿ, ವಯಸ್ಸಾಗದಂತೆ ಕಾಣುವ ಹಾಗೆ ಮಾಡುತ್ತದೆ.
  • ಸೌಂದರ್ಯವನ್ನು ಕಾಪಾಡುತ್ತದೆ : ಅವಕಾಡೊ ಹಣ್ಣು ಕೊಬ್ಬುಗಳು ಹಾಗೂ ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು ಚರ್ಮದ ಕೋಶಗಳ ಪುನರುತ್ಪಾದನೆಗೆ ಸಹಕಾರಿಯಾಗಿದೆ. ಇದು ಚರ್ಮವು ಪೋಷಣೆಯಿಂದ ಕೂಡಿರುವಂತೆ ಮಾಡುತ್ತದೆ.
  • ಚರ್ಮದ ತಡೆಗೋಡೆಗಳನ್ನು ಸೃಷ್ಟಿಸುತ್ತದೆ: ಈ ಬೆಣ್ಣೆ ಹಣ್ಣಿನಲ್ಲಿ ಕೊಬ್ಬುಗಳು ಹಾಗೂ ಫೈಬರ್‌ ಅಂಶವು ಹೇರಳವಾಗಿದೆ. ಈ ಅಂಶಗಳು ಚರ್ಮದ ರಕ್ಷಣಾತ್ಮಕ ತಡೆಗಳನ್ನು ನಿರ್ಮಿಸಿ ಕಾರ್ಯಗಳನ್ನು ಬಲಪಡಿಸಿ, ಈ ಮೂಲಕ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ: ಕಹಿಗುಣವಿರುವ ನುಗ್ಗೆ ಸೊಪ್ಪು ಹಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ, ಇಲ್ಲಿದೆ ಸರಳ ಮನೆ ಮದ್ದು

ತ್ವಚೆಯ ದಿನಚರಿಯಲ್ಲಿ ಅವಕಾಡೊ ಹಣ್ಣನ್ನು ಹೀಗೆ ಬಳಸಿ:

  • ಅವಕಾಡೊ ಹಣ್ಣಿನ ಎಣ್ಣೆ: ನಿಮ್ಮ ಒಣ ತ್ವಚೆಯಿಂದ ಮುಕ್ತಿ ಹೊಂದಬೇಕಾದರೆ, ಅವಕಾಡೊ ಎಣ್ಣೆಯನ್ನು ತ್ವಚೆಗೆ ಲೇಪಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಒಣ ತ್ವಚೆ ಸಮಸ್ಯೆಯಿಂದ ಪಾರು ಮಾಡಿ ಮೃದು ತ್ವಚೆಯನ್ನು ನಿಮ್ಮದಾಗಿಸುತ್ತದೆ.
  • ಅವಕಾಡೊ ಸ್ಕ್ರಬ್: ನಿಮ್ಮ ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳು ಹಾಗೂ ಹೆಚ್ಚುವರಿ ಎಣ್ಣೆಯನ್ನು ತೆಗೆದುಕೊಳ್ಳಲು ಈ ಅವಕಾಡೊ ಅಥವಾ ಬೆಣ್ಣೆ ಹಣ್ಣನ್ನು ಸ್ಕ್ರಬರ್ ಆಗಿ ಬಳಸಿಕೊಳ್ಳಬಹುದು.
  • ಆವಕಾಡೊ ಮಾಯಿಶ್ಚರೈಸರ್:  ಹೈಡ್ರೇಟಿಂಗ್ ಆಗಿರುವ ತ್ವಚೆಯ ನಿವಾರಣೆಗೆ ಆವಕಾಡೊ ಮಾಯಿಶ್ಚರೈಸರ್ ಅನ್ನು ಆಯ್ಕೆ ಮಾಡಿಕೊಂಡು ತೇವಾಂಶಭರಿತವಾಗಿರಿಸಿಕೊಳ್ಳಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ