ನೆನಪಿನ ಶಕ್ತಿ ಕಡಿಮೆಯಾಗುತ್ತಿದೆಯಾ?; ಮೆದುಳಿನ ಆರೋಗ್ಯ ಹೆಚ್ಚಿಸುವ 5 ಆಹಾರಗಳಿವು
ವಯಸ್ಸಾದಂತೆ ನಮ್ಮ ಮೆದುಳಿನ ಕಾರ್ಯಕ್ಷಮತೆಯೂ ಕಡಿಮೆಯಾಗುತ್ತದೆ. ಹೀಗಾಗಿ, 60ಕ್ಕೆ ಅರಳುಮರಳು ಎಂಬ ಗಾದೆ ಮಾತು ಹುಟ್ಟಿಕೊಂಡಿತು. ವಯಸ್ಸಾಗುತ್ತಿದ್ದಂತೆ ನೆನಪಿನ ಶಕ್ತಿ ಮಾಸುತ್ತಾ ಬರುತ್ತದೆ. ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ 5 ನಟ್ಸ್ಗಳು ಇಲ್ಲಿವೆ.
ಮೊದಲೆಲ್ಲ 60 ವರ್ಷವಾಗುತ್ತಿದ್ದಂತೆ ಮುಪ್ಪು ಆವರಿಸಿತೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ 50 ವರ್ಷದ ವೇಳೆಗಾಗಲೇ ಮುಪ್ಪಿನ ಲಕ್ಷಣಗಳು ಗೋಚರವಾಗಲಾರಂಭಿಸುತ್ತದೆ. ಅದರಲ್ಲಿ ನೆನಪಿನ ಶಕ್ತಿಯೂ ಒಂದು. 50 ವರ್ಷವಾಗುತ್ತಿದ್ದಂತೆ ನೆನಪಿನ ಶಕ್ತಿ (Memory Power) ಕಡಿಮೆಯಾಗುತ್ತದೆ. ಮೆದುಳಿನ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ತಿನ್ನುವ ಆಹಾರವೂ ಅತಿ ಮುಖ್ಯ. ಜ್ಞಾಪಕಶಕ್ತಿಯನ್ನು ಉತ್ತೇಜಿಸುವ, ಮೆದುಳಿನ ಆರೋಗ್ಯ (Health Tips) ಹೆಚ್ಚಿಸುವ 5 ನಟ್ಸ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಮಗೆ ವಯಸ್ಸಾದಂತೆ ಮೆದುಳಿನ ಜೀವಕೋಶಗಳ ಚಟುವಟಿಕೆ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ 50 ವರ್ಷದ ನಂತರ ನಾವು ನೆನಪಿನ ಶಕ್ತಿಯನ್ನು ಕಳೆದುಕೊಳ್ಳತೊಡಗುತ್ತೇವೆ. ಈ ಸಮಯದಲ್ಲಿ ಆದಷ್ಟೂ ಮೆದುಳನ್ನು ಹೆಚ್ಚು ಸಕ್ರಿಯ ಮತ್ತು ಆರೋಗ್ಯಕರವಾಗಿಡಲು ಪ್ರಯತ್ನಿಸಬೇಕು. ನಟ್ಸ್ ಆರೋಗ್ಯಕರ ತಿಂಡಿಗಳಾಗಿವೆ. ಇವು ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: Bowel Cancer: ಕರುಳಿನ ಕ್ಯಾನ್ಸರ್ ಅಪಾಯ ತಡೆಯುವ 8 ಆಹಾರಗಳಿವು
ಬಾದಾಮಿ:
ಬಾದಾಮಿಯಲ್ಲಿ ರೈಬೋಫ್ಲಾವಿನ್ ಮತ್ತು ಮೆದುಳಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುವ ಇತರ ಸಂಯುಕ್ತಗಳಿವೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಾಲ್ನಟ್ಸ್:
ಸಂಶೋಧನೆಯ ಪ್ರಕಾರ, ವಾಲ್ನಟ್ಸ್ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಹಾಗೇ, ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೆಕಾಡೆಮಿಯಾ:
ಇದರಲ್ಲಿರುವ ಖನಿಜಗಳ ಹೆಚ್ಚಿನ ಅಂಶವು ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಾಗಲೂ ಆರೋಗ್ಯಕರ ಜ್ಞಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Skin Care: ಮುಖದಲ್ಲಿ ಸುಕ್ಕು ಮೂಡುವುದನ್ನು ತಡೆಯಬೇಕಾ?; ಈ ಆಹಾರ ಸೇವಿಸಿ
ಪಿಸ್ತಾ:
ಪಿಸ್ತಾ ಮೆದುಳಿನ ಶಕ್ತಿ ಮತ್ತು ಅರಿವಿನ ಕಾರ್ಯವನ್ನು ಹೆಚ್ಚಿಸುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ.
ಗೋಡಂಬಿ:
ಗೋಡಂಬಿಯಲ್ಲಿರುವ ಮೆಗ್ನೀಸಿಯಸ್ ಮತ್ತು ಸತುವು ನರಪ್ರೇಕ್ಷಕಗಳನ್ನು ಮತ್ತು ಮೆದುಳಿನೊಂದಿಗೆ ಸಂವಹನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ