AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasant Panchami: ವಸಂತ ಪಂಚಮಿಯ ದಿನ ಈ ವಸ್ತು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ

ಶಾರದಾ ದೇವಿಯನ್ನು ಪೂಜಿಸುವುದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ವಸಂತ ಪಂಚಮಿಯ ದಿನದಂದು, ಸರಸ್ವತಿ ದೇವಿಯ ಪೂಜೆ ಮತ್ತು ಹವನ ಇತ್ಯಾದಿಗಳನ್ನು ನಡೆಸಲಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ಹೊಸ ವಸ್ತುಗಳ ಖರೀದಿ ಮಾಡಲಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು? ಇಲ್ಲಿದೆ ಮಾಹಿತಿ.

Vasant Panchami: ವಸಂತ ಪಂಚಮಿಯ ದಿನ ಈ ವಸ್ತು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ
Vasant PanchamiImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Feb 03, 2024 | 2:01 PM

ಹಿಂದೂ ಧರ್ಮದಲ್ಲಿ, ತಾಯಿ ಸರಸ್ವತಿಯನ್ನು ಜ್ಞಾನ ಮತ್ತು ಸಂಗೀತದ ದೇವತೆಯಾಗಿ ಪೂಜಿಸಲಾಗುತ್ತದೆ. ಆಕೆಯನ್ನು ಪ್ರತಿ ದಿನ ಪೂಜಿಸಿದರೂ ಕೂಡ, ವಿಶೇಷವಾಗಿ ಆರಾಧಿಸುವ ದಿನವೇ ವಸಂತ ಪಂಚಮಿ ಅಥವಾ ಬಸಂತ ಪಂಚಮಿ. ಈ ಹಬ್ಬವನ್ನು ಸಾಮಾನ್ಯವಾಗಿ ಫೆಬ್ರವರಿಯ ವಸಂತ ಕಾಲದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಫೆ. 14 ರಂದು (ಬುಧವಾರ) ಆಚರಣೆ ಮಾಡಲಾಗುತ್ತದೆ. ವಸಂತ ಅಥವಾ ಬಸಂತ ಪಂಚಮಿಯ ದಿನ ಸರಸ್ವತಿ ಪೂಜೆಗೆ ವಿಶೇಷ ಮಹತ್ವವಿದೆ. ಜೀವನದಲ್ಲಿ ಹೊಸತನ್ನು ಪ್ರಾರಂಭಿಸಲು ವಸಂತ ಪಂಚಮಿ ಒಂದು ಶುಭ ದಿನವಾಗಿದೆ. ಅದಲ್ಲದೆ ಸರಸ್ವತಿ ದೇವಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಮನೆಗೆ ತಂದರೆ, ಜೀವನದಲ್ಲಿ ಶುಭ ಫಲಗಳನ್ನು ಪಡೆಯಬಹುದು ಎಂದು ನಂಬಲಾಗಿದೆ. ಪುರಾಣಗಳಲ್ಲಿ ಹೇಳಿರುವ ಪ್ರಕಾರ, ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವ ವ್ಯಕ್ತಿಯು ಆಕೆಯ ಪೂರ್ಣ ಆಶೀರ್ವಾದವನ್ನು ಪಡೆಯುತ್ತಾನೆ. ಜೊತೆಗೆ ಜೀವನದಲ್ಲಿ ಯಶಸ್ಸು ಕಾಣುತ್ತಾನೆ ಎನ್ನಲಾಗುತ್ತದೆ.

ವಸಂತ ಪಂಚಮಿಯಂದು ಏನು ಮಾಡಬೇಕು?

ಧಾರ್ಮಿಕ ನಂಬಿಕೆಯ ಪ್ರಕಾರ, ವಸಂತ ಪಂಚಮಿಯ ದಿನದಂದು ಬೆಳಿಗ್ಗೆ ಬೇಗೆ ಎದ್ದು ಸ್ನಾನ ಮಾಡಿದ ನಂತರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ. ಇದರ ನಂತರ ಸರಸ್ವತಿ ದೇವಿಯ ಆರಾಧನೆಯೊಂದಿಗೆ ದಿನ ಪ್ರಾರಂಭವಾಗುತ್ತದೆ. ಈ ದಿನ, ತಾಯಿ ಸರಸ್ವತಿಗೆ ಹಳದಿ ಹೂವುಗಳು ಮತ್ತು ಹಣ್ಣುಗಳನ್ನು ಅರ್ಪಿಸಿ ಶಾರದಾ ದೇವಿಯನ್ನು ಪೂಜಿಸುವುದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ವಸಂತ ಪಂಚಮಿಯ ದಿನದಂದು, ಸರಸ್ವತಿ ದೇವಿಯ ಪೂಜೆ ಮತ್ತು ಹವನ ಇತ್ಯಾದಿಗಳನ್ನು ನಡೆಸಲಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ಹೊಸ ವಸ್ತುಗಳ ಖರೀದಿ ಮಾಡಲಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು? ಇಲ್ಲಿದೆ ಮಾಹಿತಿ.

ವೀಣೆ:

ವೀಣೆ ಸರಸ್ವತಿ ದೇವಿಯ ಅತ್ಯಂತ ನೆಚ್ಚಿನ ವಸ್ತುಗಳಲ್ಲಿ ಒಂದಾಗಿದೆ. ಹಾಗಾಗಿ ಹಿಂದೂ ಧರ್ಮದಲ್ಲಿ ವೀಣೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಮನೆಯಲ್ಲಿ ಇಡುವುದು ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ವಸಂತ ಪಂಚಮಿಯ ದಿನದಂದು, ಸರಸ್ವತಿ ದೇವಿಯನ್ನು ಮೆಚ್ಚಿಸಲು ನೀವು ಯಾವುದೇ ಸಂಗೀತ ವಾದ್ಯವನ್ನು ಮನೆಗೆ ತರಬಹುದು. ಅಥವಾ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಅಂದುಕೊಂಡವರು ಈ ದಿನ ವಾದ್ಯ, ತಾಳ ಅಥವಾ ಶ್ರುತಿ ಪೆಟ್ಟಿಗೆ ಮುಂತಾದ ಉಪಕರಣಗಳನ್ನು ಮನೆಗೆ ತರಬಹುದು.

ಮದುವೆಗೆ ಸಂಬಂಧಿಸಿದ ಸಾಮಗ್ರಿಗಳು:

ವಸಂತ ಪಂಚಮಿಯ ದಿನದಂದು, ಪಾರ್ವತಿ ದೇವಿ ಮತ್ತು ಶಿವನ ವಿವಾಹ ಆಚರಣೆಗಳು ಪ್ರಾರಂಭವಾದವು ಮತ್ತು ತಿಲಕೋತ್ಸವ ನಡೆಯಿತು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಇನ್ನು ಕೆಲವು ಪುರಾಣಗಳಲ್ಲಿ ವಸಂತ ಪಂಚಮಿ ಸರಸ್ವತಿ ದೇವಿ ಜನಿಸಿದ ದಿನ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನದಂದು ಮದುವೆಗೆ ಸಂಬಂಧಿಸಿದ ವಸ್ತುಗಳು ಅಂದರೆ ಮದುವೆಯ ಉಡುಗೆ, ಆಭರಣಗಳು ಮತ್ತು ಇತರ ವಸ್ತುಗಳನ್ನು ಖರೀದಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಕೆಲಸ ಮಾಡುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಮತ್ತು ದೇವಿಯ ಆಶಿರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ

ಹಳದಿ ಹೂವುಗಳು:

ಈ ದಿನ ಹಳದಿ ಹೂವುಗಳು ಅಥವಾ ಹಳದಿ ಹೂವಿನ ಹಾರವನ್ನು ಪಾರ್ವತಿ ದೇವಿಗೆ ಅರ್ಪಿಸಲಾಗುತ್ತದೆ. ಹಾಗಾಗಿ ಸರಸ್ವತಿ ದೇವಿಗೂ ಕೂಡ ಹಳದಿ ಹೂವುಗಳನ್ನು ಅರ್ಪಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಹಳದಿ ಹೂವುಗಳನ್ನು ಮನೆಯಲ್ಲಿರುವ ಸರಸ್ವತಿ ಫೋಟೋ ಅಥವಾ ಮೂರ್ತಿಗಳಿಗೂ ಅಲಂಕರಿಸಬಹುದು. ವಿಶೇಷವಾಗಿ ಈ ದಿನದಂದು, ಹಳದಿ ಹೂವುಗಳ ಹಾರವನ್ನು ಮಾಡಿ ಮತ್ತು ಅದನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ನವಿಲು ಗರಿ ಸಸ್ಯ (peacock feather plant):

ವಸಂತ ಪಂಚಮಿಯ ದಿನದಂದು ಮನೆಗೆನವಿಲು ಗರಿಯ ಗಿಡವನ್ನು ತರುವುದು ಒಳ್ಳೆಯದು ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ಜ್ಞಾನ ಮತ್ತು ಸಂಪತ್ತು ನೀಡುವ ಸಸ್ಯವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ತಂದು ಇಡುವುದರಿಂದ ಸರಸ್ವತಿ ದೇವಿಯ ಆಶೀರ್ವಾದ ಪಡೆಯಬಹುದಾಗಿದೆ. ಇನ್ನು ಈ ಸಸ್ಯವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಲ್ಲದೆ ಈ ಗಿಡವನ್ನು ಮನೆಯ ಡ್ರಾಯಿಂಗ್ ರೂಮ್ ಅಥವಾ ಮನೆಯ ಮುಖ್ಯ ದ್ವಾರದಲ್ಲಿಯೂ ಇಡಬಹುದು.

ಸರಸ್ವತಿ ಮೂರ್ತಿ ಅಥವಾ ಫೋಟೋವನ್ನು ಮನೆಗೆ ತನ್ನಿ:

ಓದುವುದರಲ್ಲಿ ಆಸಕ್ತಿಯಿಲ್ಲದ ಅಥವಾ ಅಧ್ಯಯನದಲ್ಲಿ ದುರ್ಬಲರಾಗಿರುವ ಮಕ್ಕಳು, ಬಸಂತ್ ಪಂಚಮಿಯ ದಿನದಂದು ತಾಯಿ ಸರಸ್ವತಿಯ ಚಿತ್ರ, ವಿಗ್ರಹವನ್ನು ಮನೆಗೆ ತರಬೇಕು ಎನ್ನಲಾಗುತ್ತದೆ. ತಾಯಿ ಸರಸ್ವತಿಯ ಅನುಗ್ರಹದಿಂದ, ವಿದ್ಯಾರ್ಥಿಗಳು ಏಕಾಗ್ರತೆಯನ್ನು ಜೊತೆಗೆ ಅಧ್ಯಯನದಲ್ಲಿ ಆಸಕ್ತಿಯನ್ನು ಪಡೆದುಕೊಳ್ಳುತ್ತಾರೆ. ಇದಲ್ಲದೆ, ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು ಬಸಂತ ಪಂಚಮಿಯ ದಿನವನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಖರೀದಿಸಿದ ಹೊಸ ವಸ್ತುಗಳಿಗೆ ಸರಸ್ವತಿಯ ಅನುಗ್ರಹ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು