Health Tips: ಎಂದಿಗೂ ಈ ಐದು ಆಹಾರಗಳೊಂದಿಗೆ ಮೊಟ್ಟೆಯನ್ನು ಸೇವಿಸಬೇಡಿ

ದೇಹದ ಆರೋಗ್ಯವನ್ನು ಕಾಪಾಡುವ ಮೊಟ್ಟೆಯನ್ನು ಕೆಲವೊಂದು ಆಹಾರದೊಂದಿಗೆ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

Health Tips: ಎಂದಿಗೂ ಈ ಐದು ಆಹಾರಗಳೊಂದಿಗೆ ಮೊಟ್ಟೆಯನ್ನು ಸೇವಿಸಬೇಡಿ
ಈ ಆಹಾರಗಳೊಂದಿಗೆ ಮೊಟ್ಟೆಯನ್ನು ಸೇವಿಸಬೇಡಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Sep 20, 2022 | 6:45 AM

ಮೊಟ್ಟೆಗಳಲ್ಲಿ ವಿಟಮಿನ್ ಎ, ಬಿ6, ಬಿ12, ಪ್ರೊಟೀನ್, ಫೋಲೇಟ್, ಕಬ್ಬಿಣ, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಮ್, ಅಗತ್ಯ ಅಪರ್ಯಾಪ್ತ ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಮೊಟ್ಟೆಗಳು ಆರೋಗ್ಯಕ್ಕೆ ಸೂಪರ್‌ಫುಡ್ ಎಂದು ಕರೆಯಲು ಇದೇ ಕಾರಣ. ಇದರ ದೈನಂದಿನ ಸೇವನೆಯು ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದ್ದರೂ ಮೊಟ್ಟೆಗಳನ್ನು ಈ ಐದು ಪದಾರ್ಥಗಳೊಂದಿಗೆ ಸೇವಿಸಿದರೆ ಅವು ಪ್ರಯೋಜನಕಾರಿಯಾಗುವ ಬದಲು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ. ಹಾಗಿದ್ದರೆ ಯಾವ ಆಹಾರದೊಂದಿಗೆ ಮೊಟ್ಟೆಯನ್ನು ಸೇವಿಸಬಾರದು ಎಂಬುದನ್ನು ನೋಡೋಣ.

ಸಕ್ಕೆರೆ ಮತ್ತು ಮೊಟ್ಟೆ: ಮೊಟ್ಟೆಯೊಂದಿಗೆ ಸಕ್ಕರೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ಮೊಟ್ಟೆ ಮತ್ತು ಸಕ್ಕರೆಯಿಂದ ಬಿಡುಗಡೆಯಾಗುವ ಅಮೈನೋ ಆಮ್ಲವು ದೇಹಕ್ಕೆ ವಿಷಕಾರಿಯಾಗುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿಯು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಕೂಡ ಎದುರಿಸಬಹುದು.

ಮೊಟ್ಟೆ ಮತ್ತು ಸೋಯಾ ಹಾಲು: ಸೋಯಾ ಹಾಲು ಪ್ರೋಟೀನ್, ಕೊಬ್ಬುಗಳು, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಅನೇಕ ವಿಧಗಳಲ್ಲಿ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಕೆಲಸ ಮಾಡುತ್ತದೆ. ಆದರೆ ನೀವು ಸೋಯಾ ಹಾಲನ್ನು ಮೊಟ್ಟೆಯೊಂದಿಗೆ ಸೇವಿಸಿದರೆ ನೀವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮೊಟ್ಟೆ ಮತ್ತು ಚಹಾ: ಇವುಗಳನ್ನು ಒಟ್ಟಿಗೆ ಕುಡಿಯುವುದು ವ್ಯಕ್ತಿಯಲ್ಲಿ ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ ಮೊಟ್ಟೆ ಮತ್ತು ಚಹಾವನ್ನು ಒಟ್ಟಿಗೆ ಸೇವಿಸದಂತೆ ಸಲಹೆ ನೀಡಲಾಗುತ್ತದೆ.

ಮೊಟ್ಟೆ ಮತ್ತು ಬಾಳೆಹಣ್ಣು: ಈ ಎರಡೂ ಸಂಯೋಜನೆಗಳು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ. ನೀವು ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದರೆ ನೀವು ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ಎದುರಿಸಬಹುದು.

ಮೊಟ್ಟೆ ಮತ್ತು ಹುಳಿ: ಮೊಟ್ಟೆ ತಿಂದ ನಂತರ ಎಂದಿಗೂ ಹುಳಿ ತಿನ್ನಬೇಡಿ. ಹೀಗೆ ಮಾಡುವುದರಿಂದ ಹೃದಯಾಘಾತ ಮತ್ತು ಅನೇಕ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ