Queen Elizabeth II: ಕ್ವೀನ್ ಎಲಿಜಬೆತ್-2 ಪ್ರತಿದಿನ ಏನು ತಿನ್ನುತ್ತಿದ್ದರು ಗೊತ್ತಾ? ಅವರ ದೀರ್ಘಾಯುಷ್ಯ ಸುದೀರ್ಘ ಆರೋಗ್ಯದ ರಹಸ್ಯ ಇದೇ ಆಗಿತ್ತು.. ಬ್ರಿಟನ್ ಕ್ವೀನ್ ಎಲಿಜಬೆತ್-2 ಸಂಪೂರ್ಣ ಜೀವನ ಅನುಭವಿಸಿ, ತಮ್ಮ 96ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 8, 2022 (ಗುರುವಾರ) ಕಣ್ಮುಚ್ಚಿದರು. ಕ್ವೀನ್ ಎಲಿಜಬೆತ್ 2 ಇಷ್ಟು ದೀರ್ಘಾವಧಿ ಆರೋಗ್ಯವಾಗಿ ಬದುಕಲು ಮುಖ್ಯ ಕಾರಣ ಅವರ ಜೀವನಶೈಲಿ (ಸರಳ ಜೀವನಶೈಲಿ –simple lifestyle) ಎಂದು ತಜ್ಞರು ಹೇಳುತ್ತಾರೆ.
Healthy Habits To Help You Live Longer: ನಿಮ್ಮ ದೀರ್ಘಕಾಲ ಬದುಕಿಗೆ ಊರುಗೋಲು ಆಗುವುದೇ ನಿಮ್ಮ ಆರೋಗ್ಯಕರ ಅಭ್ಯಾಸಗಳು! ಎಂಬುದರಲ್ಕಿ ಎರಡು ಮಾತಿಲ್ಲ. ಇದು ಮೊನ್ನೆ ಕೊನೆಯುಸಿರೆಳೆದ ಬ್ರಿಟನ್ ರಾಣಿ ಎಲಿಜಬೆತ್ II ಅವರ ವಿಷಯದಲ್ಲೂ ಸಾಬೀತಾಗಿದೆ. ಸೆಪ್ಟೆಂಬರ್ 8, 2022 ರಂದು (ಗುರುವಾರ) ತಮ್ಮ 96 ನೇ ವಯಸ್ಸಿನಲ್ಲಿ ಪೂರ್ಣ ಜೀವನವನ್ನು ನಡೆಸಿದ ಬ್ರಿಟನ್ ರಾಣಿ ವಿಧಿವಶರಾದರು. ಏಪ್ರಿಲ್ 21, 1926 ರಂದು ಜನಿಸಿದ ಎಲಿಜಬೆತ್ ತಮ್ಮ ತಂದೆ ಕಿಂಗ್ ಜಾರ್ಜ್ VI ರ ಮರಣದ ನಂತರ ಫೆಬ್ರವರಿ 6, 1952 ರಂದು, ತಮ್ಮ 25 ನೇ ವಯಸ್ಸಿನಲ್ಲಿ ಬ್ರಿಟನ್ ರಾಜಕುಮಾರಿಯಾಗಿ ಪಟ್ಟಾಭಿಷಿಕ್ತಳಾದರು. 1947 ರಲ್ಲಿ ಪ್ರಿನ್ಸ್ ಫಿಲಿಪ್ ಮೌಂಟ್ ಬ್ಯಾಟನ್ ಅವರನ್ನು ವಿವಾಹವಾದರು.
ಸುಮಾರು 70 ವರ್ಷಗಳ ಕಾಲ ಬ್ರಿಟನ್ ಅನ್ನು ಆಳಿದ ಎಲಿಜಬೆತ್, ಬ್ರಿಟನ್ ರಾಜಮನೆತನದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಬದುಕಿದ ಆಡಳಿತಗಾರ್ತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಅವರು ವಿಶ್ವದದಲ್ಲಿ ಅತಿ ಹೆಚ್ಚು ಅವಧಿಗೆ ಆಳ್ವಿಕೆ ನಡೆಸಿದ ಎರಡನೇ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದರು. ವಿನ್‌ಸ್ಟನ್ ಚರ್ಚಿಲ್‌ನಿಂದ ಲಿಜ್ ಟ್ರಸ್ಟ್ ವರೆಗೆ ಸುಮಾರು 14 ಪ್ರಧಾನ ಮಂತ್ರಿಗಳು ಅವರ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದಾರೆ. ಎಲಿಜಬೆತ್ 94 ವರ್ಷದವರಿದ್ದಾಗ (ಡಿಸೆಂಬರ್ 2020) ಅವರನ್ನು ಪರೀಕ್ಷಿಸಿದ ಬ್ರಿಟಿಷ್ ರಾಯಲ್ ಪ್ರಕಾರ ‘ಎಲಿಜಬೆತ್ ರಾಣಿ ವಯೋ ಸಹಜವಾಗಿ ಮುಖದ ಮೇಲೆ ಸುಕ್ಕುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮ ಆರೋಗ್ಯದಲ್ಲಿದ್ದಾರೆ’ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು.
ರಾಣಿ ಎಲಿಜಬೆತ್ 2 ಇಷ್ಟು ಸುದಿನ ಬದುಕಲು ಮತ್ತು ಆರೋಗ್ಯವಾಗಿರಲು ಮುಖ್ಯ ಕಾರಣ ಅವರ ಸರಳ ಜೀವನಶೈಲಿ. ಇದರೊಂದಿಗೆ ಸದಾ ಕ್ರಿಯಾಶೀಲ ಹಾಗೂ ಉತ್ಸಾಹದಿಂದ ಇದ್ದರೆ ದೀರ್ಘಕಾಲ ಬಾಳಲು ಸಾಧ್ಯ ಎಂಬುದು ಸದೃಢಪಡುತ್ತದೆ ಎಂದು ಬ್ರಿಟನ್ ಸಂಸ್ಕೃತಿ ಸಂಶೋಧಕ ಬ್ರಿಯಾನ್ ಕೇಜ್ಲೋಸ್ಕಿ ಬರೆದಿರುವ ‘ರಾಣಿ ಲಾಂಗ್ ಲಿವ್! ’23 ರೂಲ್ಸ್ ಫಾರ್ ಲಿವಿಂಗ್ ಫ್ರಮ್ ಬ್ರಿಟನ್ ಸ್ ಲಾಂಗೆಸ್ಟ್ ಲಿವಿಂಗ್ ಮೊನಾರ್ಕ್’ ಪುಸ್ತಕದಲ್ಲಿ ರಾಣಿ ಎಲಿಜಬೆತ್-2 ದೈನಂದಿನ ಜೀವನ ಶೈಲಿಯ ವಿವರವಾದ ವಿವರಣೆಯನ್ನು ನೀಡಿದ್ದಾರೆ. ಪುಸ್ತಕವು ಆಹಾರ ಕ್ರಮ, ಕೆಲಸದ ವೇಳಾಪಟ್ಟಿ, ವಿರಾಮದ ಅಭ್ಯಾಸಗಳು ಮತ್ತು ಕುಟುಂಬ-ಕೆಲಸದ ಸಂಬಂಧಗಳನ್ನು ನಿರ್ವಹಿಸುವ ವಿಧಾನವನ್ನು ವಿವರಿಸುತ್ತದೆ.
ಸಂತೋಷವಾಗಿರುವುದು ಎಂದರೆ ಹೆಚ್ಚು ಕಾಲ ಬದುಕಿದಂತೆ!
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಸಂತೋಷ, ಶಾಂತ ಮತ್ತು ಸಕ್ರಿಯ ಜೀವನವನ್ನು ನಡೆಸಿದರೆ ಅದು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಸಂತೋಷವು ಮನುಷ್ಯನ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಮ್ಮ ದೇಹದಲ್ಲಿನ ಹಾರ್ಮೋನ್ ಡೋಪಮೈನ್ (ಒಂದು ರೀತಿಯ ನರಪ್ರೇಕ್ಷಕ) ದೈಹಿಕ ಕಾರ್ಯಗಳಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ’ ಎಂದು ಖ್ಯಾತ ಮನಶಾಸ್ತ್ರಜ್ಞ ಡಾ.ಪುಲ್ಕಿತ್ ಶರ್ಮಾ ಅವರು ಆರೋಗ್ಯ ಮತ್ತು ಸಂತೋಷದ ಜೀವನದ ನಡುವಣ ಸಂಬಂಧವನ್ನು ವಿವರಿಸುತ್ತಾರೆ.
ಜೀವನ ಕುತೂಹಲವು ವ್ಯಕ್ತಿಯ ಬದುಕುವ ಬಯಕೆಯನ್ನು ಪ್ರೇರೇಪಿಸುತ್ತದೆ!
ರಾಣಿ ಎಲಿಜಬೆತ್ ಅವರ ಆರೋಗ್ಯದ ಬಗ್ಗೆ ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ಅವರ ಕಲಿಕೆಯ ಉತ್ಸಾಹ. “ಅವರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿದ್ದರು. ಪ್ರಪಂಚದಾದ್ಯಂತ ನಡೆಯುತ್ತಿರುವ ಹೊಸ ವಿಷಯಗಳನ್ನು ಕಲಿಯಲು ಅವರಿಗೆ ಸಾಕಷ್ಟು ಶಕ್ತಿ ಚೈತನ್ಯ ಇದೆ. ಈ ರೀತಿಯ ಕುತೂಹಲವು ವ್ಯಕ್ತಿಯ ಬದುಕುವ ಬಯಕೆಯನ್ನು ಪ್ರೇರೇಪಿಸುತ್ತದೆ.
ಇದು ಮೆದುಳನ್ನು ಸಕ್ರಿಯವಾಗಿರಿಸುತ್ತದೆ ಮತ್ತು ಆಲ್ಝೈಮರ್ (Alzheimer disease) ಅಂತಹ ನರ ಕ್ಷೀಣಗೊಳ್ಳುವ ಅನಾರೋಗ್ಯಗಳನ್ನು ತೀವ್ರವಾಗದಂತೆ ತಡೆಯುತ್ತದೆ. ಸದಾ ಹೊಸದನ್ನು ಕಲಿಯುವ ಬಯಕೆಯಿರುವ ವೃದ್ಧರಲ್ಲಿ ಸಕಾರಾತ್ಮಕ ಮನೋಭಾವ ಹೆಚ್ಚಾಗಿರುತ್ತದೆ. ಅಂತಹವರು ಹೆಚ್ಚು ಕಾಲ ಬದುಕುತ್ತಾರೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಇದೆಲ್ಲವೂ ರಾಣಿ ಎಲಿಜಬೆತ್ 2 ಅವರಿಗೆ ಗಟ್ಟಿಮುಟ್ಟಾದ ಜೀವನಶೈಲಿಯೊಂದಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟಿದೆ.
ಆರೋಗ್ಯಕರ ಜೀವನಶೈಲಿಗೆ ಆಹಾರವೂ ಮುಖ್ಯವಾಗುತ್ತದೆ:
ರಾಣಿ ಎಲಿಜಬೆತ್ ಮೊದಲನೆಯ ಮಹಾಯುದ್ಧದ ನಂತರ (1914-1918) ಜನಿಸಿದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಹದಿಹರೆಯದವನಾಗಿದ್ದಾಗ, ಎಲಿಜಬೆತ್ ಎಲ್ಲರಂತೆ ಸರಳವಾದ ಊಟವನ್ನು ಸೇವಿಸಿದರು. ಫರಿದಾಬಾದ್‌ನ ಅಕಾರ್ಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ಮುಖ್ಯಸ್ಥ ಡಾ.ಜಯಂತ ಠಾಕುರಿಯಾ ಹೇಳುವಂತೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವವರಲ್ಲಿ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಮನೆಯಲ್ಲಿ ಊಟ ಮಾಡುವವರಿಗೆ ರೋಗಗಳು ಬರುವ ಸಾಧ್ಯತೆ ಕಡಿಮೆ. ಆರೋಗ್ಯಕರ ದೇಹವು ಹೆಚ್ಚು ಕಾಲ ಬದುಕುತ್ತದೆ!
ವಿದೇಶದಲ್ಲಿ ವಾಸಿಸುವ ಹೆಚ್ಚಿನ ಜನರು ಮೀನು, ಕೋಳಿ ಮತ್ತು ಟರ್ಕಿ ಮಾಂಸವನ್ನು ತಿನ್ನುತ್ತಾರೆ. ಆಲಿವ್ ಎಣ್ಣೆಯಿಂದ ಬೇಯಿಸಿದ ಆಹಾರವನ್ನು ಸೇವಿಸುತ್ತಾರೆ. ಅಲ್ಲದೆ, ಸಲಾಡ್ ಮತ್ತು ಹಣ್ಣುಗಳು ಅವರ ಊಟದ ಮುಖ್ಯ ಭಾಗವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಬಹಳ ಕಡಿಮೆ ಉಪ್ಪು (ಸೋಡಿಯಂ) ಸೇವಿಸುತ್ತಾರೆ. ಉಪ್ಪು ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ದೇಹವು ವಿಷವಾಗುತ್ತದೆ.
ಅದಕ್ಕಾಗಿಯೇ ನೀವು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಬೇಕು. ಹೊಟ್ಟೆಯ ಕರುಳಿಗೆ ಹಾನಿ ಮಾಡುವ ಜಂಕ್ ಫುಡ್ ನಿಂದ ದೂರವಿರಬೇಕು. ಜೀವನದ ಯಾವುದೇ ಹಂತದಲ್ಲಿ ಯಾರಿಗಾದರೂ ತಮ್ಮ ಜೀವಿತಾವಧಿಯನ್ನು ವಿಸ್ತರಿಸಿಕೊಳ್ಳುವ ಬಯಕೆ ಮುಡಿದರೆ ಈ ಸಣ್ಣ ಆದರೆ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳುವುದು ಕಡ್ಡಾಯ. ದೈಹಿಕ ವ್ಯಾಯಾಮವೂ ಅಷ್ಟೇ ಮುಖ್ಯ ಎಂಬುದನ್ನು ಮರೆಯಬಾರದು. ಹಾಗಂತ ನೀವು ಸ್ನಾಯುಗಳನ್ನು ದಷ್ಟಪುಷ್ಟವಾಗಿ ನಿರ್ಮಿಸಿಕೊಳ್ಳುವ ಅಗತ್ಯವಿಲ್ಲ.
ವಾರದಲ್ಲಿ ಐದು ದಿನ ನಡಿಗೆ, ಈಜು, ಸ್ಟ್ರೆಚಿಂಗ್ ವ್ಯಾಯಾಮದಂತಹ ಸರಳ ನಿಯಮಗಳನ್ನು ಪಾಲಿಸಿದರೆ ಸಾಕು! ರಾಜಮನೆತನದವರು ಊಟದ ಜೊತೆಗೆ ಒಂದು ಲೋಟ ವೈನ್ ಕೂಡ ಕುಡಿಯುತ್ತಾರೆ. ರಾಣಿ ಎಲಿಜಬೆತ್ ಬೆಳಿಗ್ಗೆ ಜಿನ್ ಕಾಕ್ಟೈಲ್ ಸೇವಿಸುತ್ತಿದ್ದರಂತೆ. ಊಟದೊಂದಿಗೆ ಒಂದು ಲೋಟ ವೈನ್ ಅಥವಾ ಷಾಂಪೇನ್ ಇರುತ್ತಿತ್ತು. ಮತ್ತು ಸಂಜೆ, ಮತ್ತೊಂದು ಗ್ಲಾಸ್ ಶಾಂಪೇನ್ ಮತ್ತು ಡ್ರೈ ಮಾರ್ಟಿನಿ ಇರುತ್ತದೆ.
ವಾಸ್ತವವಾಗಿ, ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು 3-4 ಗ್ಲಾಸ್ ಕುಡಿಯುತ್ತಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಅದೇ ರೀತಿ ಧೂಮಪಾನ ಮಾಡಬಾರದು. ಈ ಎರಡು ಅಭ್ಯಾಸಗಳಿಲ್ಲದವರು ದೀರ್ಘಕಾಲ ಆರೋಗ್ಯವಂತರಾಗಿ ಬದುಕುತ್ತಾರೆ ಎನ್ನುತ್ತಾರೆ ಡಾ.ಜಯಂತ ಠಾಕುರಿಯಾ.
Published On - 6:45 pm, Sat, 10 September 22