World Suicide Prevention Day 2022: ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ: ‘ಕ್ರಿಯೇಟಿಂಗ್ ಹೋಪ್ ಥ್ರೂ ಆಕ್ಷನ್’
ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು (‘Creating Hope through Action’) 2021 ರಿಂದ 2023 ರವರೆಗೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ತ್ರೈವಾರ್ಷಿಕ ವಿಷಯವಾಗಿದೆ.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ (World Suicide Prevention Day 2022) ವನ್ನು ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಅಂದಾಜಿಗೆ 703,000 ಜನರು ಪ್ರಪಂಚದಾದ್ಯಂತ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಆತ್ಮಹತ್ಯೆಗೆ, ಇನ್ನೂ 20 ಜನರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಮತ್ತು ಇನ್ನೂ ಅನೇಕರು ಆತ್ಮಹತ್ಯೆಯ ಬಗ್ಗೆ ಗಂಭೀರ ಆಲೋಚನೆಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ, ಆತ್ಮಹತ್ಯೆಯ ಬಗೆಗಿನ ಕಳಂಕದ ಕುರಿತು ಸಂಘಟನೆಗಳು, ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಇಷ್ಟೇ ಅಲ್ಲದೇ ಆತ್ಮಹತ್ಯೆಯನ್ನು ತಡೆಗಟ್ಟುವ ಸಂದೇಶವನ್ನು ಪ್ರತಿಯೊಬ್ಬರಿಗೂ ಹರಡುವುದು ಇದರ ಗುರಿಯಾಗಿದೆ.
ವಿಶ್ವ ಆತ್ಮಹತ್ಯೆ ತಡೆ ದಿನ: ಇತಿಹಾಸ
ಆತ್ಮಹತ್ಯಾ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) 2003 ರಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು (WSPD) ಆರಂಭಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಸೆಪ್ಟೆಂಬರ್ 10 ರಂದು, ಜಗತ್ತಿನಾದ್ಯಂತ ಸಂಸ್ಥೆಗಳು, ಸರ್ಕಾರಗಳು ಮತ್ತು ಸಾಮಾನ್ಯ ಜನರು ಆತ್ಮಹತ್ಯೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ವಿಶ್ವ ಆತ್ಮಹತ್ಯೆ ತಡೆ ದಿನ: ಮಹತ್ವ
ಡಬ್ಲೂಹೆಚ್ಒ (WHO) ತಜ್ಞರ ಪ್ರಕಾರ, ಪ್ರತಿ ಸಮಸ್ಯೆಗೆ ಸಾವು ಖಂಡಿತ ಪರಿಹಾರವಲ್ಲ. ಇದನ್ನು ಜನರಿಗೆ ಅರಿತುಕೊಳ್ಳಬೇಕಿದೆ. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಮೂಲ ಉದ್ದೇಶವು ಕೂಡ ಇದೆ ಆಗಿದೆ. ಒಬ್ಬ ಮನುಷ್ಯ ಸಾವಿಗೆ ಸಂಬಂಧಿಸಿದ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಲು ಏಕೆ ಬಯಸುತ್ತಾನೆಂದು ನೀವು ತಿಳಿದರೆ ಆಶ್ಚರ್ಯಪಡಬಹುದು. ಅನೇಕ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು ಒಬ್ಬ ವ್ಯಕ್ತಿಯನ್ನು ತನ್ನ ಸ್ವಂತ ಜೀವನವನ್ನು ಅಂತ್ಯಗೊಳಿಸಲು ಪ್ರಚೋದಿಸಬಹುದು ಎಂದು ಅಧ್ಯಯನಗಳು ಹೇಲುತ್ತವೆ. ಕುಟುಂಬದ ಸದಸ್ಯ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಂಡರೆ ನೋವಾಗುತ್ತದೆ. ಸಾಮಾನ್ಯವಾಗಿ, ಈ ರೀತಿಯ ನಷ್ಟವು ಕೆಲವು ಜನರಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ಇದು ಆತ್ಮಹತ್ಯೆಯ ಆಲೋಚನೆಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ಅತಿಯಾಗಿ ಋಣಾತ್ಮಕವಾಗಿ ಯೋಚಿಸುವುದು ಕೂಡ ಒಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಬಹುದಾಗಿದೆ.
ಒಬ್ಬ ವ್ಯಕ್ತಿಯು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅದು ಮಾನಸಿಕ ಅಥವಾ ದೈಹಿಕವಾಗಿರಬಹುದು, ಆಗ ಅವರು ತಮ್ಮ ಕುಟುಂಬದ ಮೇಲೆ ಹೊರೆಯಾಗಬಹುದು ಎಂದು ಅವರು ಭಾವಿಸುತ್ತಾರೆ. ಕೆಲವೊಮ್ಮೆ, ಆಘಾತಕಾರಿ ಘಟನೆಯು ಆತ್ಮಹತ್ಯೆಗೆ ಒತ್ತಾಯಿಸಬಹುದು. ಬಾಲ್ಯದ ಆಘಾತ, ಲೈಂಗಿಕ ಆಕ್ರಮಣ ಮತ್ತು ಯುದ್ಧದ ಆಘಾತದಂತಹ ಘಟನೆಗಳು ಕೆಲವು ಜನರಲ್ಲಿ ತೀವ್ರ ಖಿನ್ನತೆಗೆ ಕಾರಣವಾಗಬಹುದು. ಒಬ್ಬ ವ್ಯಕ್ತಿಯು ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ, ಅಧ್ಯಯನಗಳ ಪ್ರಕಾರ, ಅವರು ಆತ್ಮಹತ್ಯೆಯ ಆಲೋಚನೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ವಿಶ್ವ ಆತ್ಮಹತ್ಯೆ ತಡೆ ದಿನ: ಥೀಮ್
ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು (‘Creating Hope through Action’) 2021 ರಿಂದ 2023 ರವರೆಗೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ತ್ರೈವಾರ್ಷಿಕ ವಿಷಯವಾಗಿದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.