ಪೋಷಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ನಡುವೆ ಗೊಂದಲ ಏರ್ಪಡುವುದು ಸಹಜ. ಈ ಗೊಂದಲ ಸ್ಪಷ್ಟ ವಾಗುವುದರಿಂದಲೇ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ಸಾಧ್ಯ. ಅದಕ್ಕೂ ಮೊದಲು ಅವರ ಜೀವನಕ್ಕೆ ಅಗತ್ಯವಾದ ಮೌಲ್ಯಗಳು ಮತ್ತು ಕೌಶಲ್ಗಳನ್ನು ಸಹ ಕಲಿಸಬೇಕಾಗುತ್ತದೆ. ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ. ಆದರೆ ಸಮಯಾನುಸಾರ ಮಕ್ಕಳು ಕೋಪೋದ್ರಿಕ್ತರಾಗುವುದು ಪೋಷಕರಿಗೆ ಕಷ್ಟಕರವಾಗಬಹುದು.
ಕೆಲವೊಮ್ಮೆ, ಮಕ್ಕಳ ಕೋಪ ಪೋಷಕರನ್ನು ಕೋಪಗೊಳ್ಳುವಂತೆ ಮಾಡಬಹುದು, ವಿಶೇಷವಾಗಿ ಕೆಲವು ಮಕ್ಕಳಿಗೆ ಆಗಾಗ ಕೋಪ ಬರುವುದರಿಂದ ಮನಶ್ಶಾಸ್ತ್ರಜ್ಞರು, ಪೋಷಕರು ಏನು ಮಾಡಬಾರದು ಎಂಬುದರ ಬಗ್ಗೆ ಮೂರು ವಿಷಯಗಳನ್ನು ಹಂಚಿಕೊಂಡಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಕ್ಕಳು ಕೋಪಗೊಂಡಾಗ ನಾವು ಅದ್ಕಕಿಂತ ಹೆಚ್ಚು ಕೋಪ ಮಾಡಿಕೊಂಡು ಮಗುವನ್ನು ಕೋಣೆಗೆ ಹೋಗುವಂತೆ ಹೇಳಬಾರದು.ಮಕ್ಕಳು ಕೋಪ ಮಾಡಿಕೊಂಡಾಗ ಜಾಗರೂಕರಾಗಿರಬೇಕು. ಎಲ್ಲಿಯಾದರೂ ಮಕ್ಕಳ ಭಾವನೆಗಳನ್ನು ಏಕಾಂಗಿಯಾಗಿ ವ್ಯವಹರಿಸುವಂತೆ ಮಾಡಿದಲ್ಲಿ ಅವರ ಭಾವನೆಗಳು ತಮ್ಮ ಹೆತ್ತವರಿಗೆ ನಿಭಾಯಸಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾರೆ. ಇದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹಾಗಾಗಿ ಕೋಪ ಬಂದ ಮಕ್ಕಳನ್ನು ನೀವೇ ನಿಭಾಯಿಸಿ.
ಏನೇ ಇರಲಿ, ಮಕ್ಕಳ ಕೋಪವನ್ನು ಹೃದಯಕ್ಕೆ ತೆಗೆದುಕೊಳ್ಳಬಾರದು. ಕೆಟ್ಟದಾಗಿ ಭಾವಿಸಬಾರದು. ಬದಲಾಗಿ ಮಗುವು ಆಗಾಗ್ಗೆ ಕೋಪಗೊಳ್ಳಲು ಆಳವಾಗಿ ಬೇರೂರಿರುವ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು ಮತ್ತು ಅದನ್ನು ಒಳ್ಳೆ ರೀತಿಯಲ್ಲಿ ಪರಿಹರಿಸಬೇಕು. ಕೆಲವೊಮ್ಮೆ ಪೋಷಕರು ಸೃಷ್ಟಿಸಿಟ್ಟ ಕಟ್ಟಳೆಗಳಿಂದ ಮಕ್ಕಳಿಗೆ ನಿರಾಶೆ, ಅಸಮಾಧಾನ ಅನುಭವಿಸಬಹುದು ಆದರೆ ಅದು ಅವರ ಬೆಳವಣಿಗೆ ಮತ್ತು ತಿಳುವಳಿಕೆಯ ಒಂದು ಭಾಗವಾಗಿದೆ.
ಕೋಪ ಮಾಡಿಕೊಂಡರೆ ಕೇಳಿದ್ದೆಲ್ಲಾ ಸಿಗುತ್ತದೆ ಎಂಬ ಭಾವನೆ ಮಕ್ಕಳಲ್ಲಿ ಬರಬಾರದು. ಹಾಗೆಂದು ಅವರಿಗೆ ಬೇಕಾದುದನ್ನು ಒದಗಿಸದೆಯೇ ಇರಲು ಬಾರದು ಯಾವುದು ಸರಿ ಎಂದು ನಿರ್ಧರಿಸಿ ಮಕ್ಕಳಲ್ಲಿ ಕೋಪ ಕಡಿಮೆ ಮಾಡಬೇಕು. ವಯಸ್ಕರು ಕೋಪ ಮಾಡಿಕೊಂಡು ಮಕ್ಕಳಿಗೆ ಗದರುವ ಬದಲು ಅವರ ಭಾವನೆಗಳಿಗೆ ಬೆಲೆ ಕೊಟ್ಟು. ಕೋಪದಿಂದ ಆಗುವ ತೊಂದರೆ ತಿಳಿಸಬೇಕು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: