ಯಾವ ಬಟ್ಟೆಗೆ, ಯಾವ ಶೂ ಧರಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್​​ ಫಾಲೋ ಮಾಡಿ

|

Updated on: Feb 15, 2023 | 2:16 PM

ಕಾಲೇಜ್‌ಗೆ ಹೋಗುವುದರಿಂದ ಹಿಡಿದು ಪಾರ್ಟಿಯಲ್ಲಿ ಭಾಗವಹಿಸುವವರೆಗೆ ಹೆಚ್ಚಿನ ಜನರು ಶೂಗಳನ್ನು ಹಾಕಿಕೊಳ್ಳಲು ಇಷ್ಟ ಪಡುತ್ತಾರೆ.  ಶೂಗಳನ್ನು ಧರಿಸುವುದರಿಂದ ನಿಮ್ಮ ನೋಟ ಬಹಳ ಯುನಿಕ್ ಆಗಿ ಕಾಣಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಶೈಲಿಯ ಶೂಗಳನ್ನು ಧರಿಸಬೇಕೆಂಬ ಅಭಿರುಚಿ ಮುಖ್ಯವಾಗಿರುತ್ತದೆ.

ಯಾವ ಬಟ್ಟೆಗೆ, ಯಾವ ಶೂ ಧರಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್​​ ಫಾಲೋ ಮಾಡಿ
ಸಾಂದರ್ಭಿಕ ಚಿತ್ರ
Image Credit source: iStock
Follow us on

ಫ್ಯಾಷನ್ ಲೋಕದಲ್ಲಿ ದಿನದಿಂದ ದಿನಕ್ಕೆ ಹೊಸ ಟ್ರೆಂಡ್‌ಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಶೂ ಟ್ರೆಂಡ್ ಹೆಚ್ಚು ಜನಪ್ರಿಯವಾಗಿದೆ. ಸ್ನೀಕರ್ ಗಳು ಯುವ ಜನತೆಯ ಅಚ್ಚುಮೆಚ್ಚು ಅಂತಾನೇ ಹೇಳಬಹುದು. ಮೊದಲೆಲ್ಲಾ ಫ್ಯಾನ್ಸಿ ಪಾದರಕ್ಷೆಗಳನ್ನು ಧರಿಸುತ್ತಿದ್ದ ಹೆಣ್ಣುಮಕ್ಕಳು ಈಗ ಹೆಚ್ಚಾಗಿ ಶೂಗಳನ್ನು ಧರಿಸಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜ್‌ಗೆ ಹೋಗುವಾಗ ಶೂಗಳನ್ನು ಧರಿಸುವುದರಿಂದ ಹಿಡಿದು, ಪಾರ್ಟಿಯ ವರೆಗೆ ಹೆಚ್ಚಾಗಿ ಶೂಗಳನ್ನು ಧರಿಸುತ್ತಾರೆ. ಈ ಶೂಗಳನ್ನು ಧರಿಸುವುದರಿಂದ ಅದು ನಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಚಳಿಗಾಲ, ಬೇಸಿಗೆ ಕಾಲ ಎಲ್ಲಾ ಋತುಮಾನಗಳಲ್ಲೂ ಜನರು ತಾವು ಧರಿಸುವ ಉಡುಪಿಗೆ ಟ್ರೆಂಡಿ ನೋಟವನ್ನು ಸೇರಿಸಲು ಶೂಗಳನ್ನು ಧರಿಸಲು ಇಷ್ಟ ಪಡುತ್ತಾರೆ. ಈ ಶೂಗಳು ವಿವಿಧ ಶ್ರೇಣಿಯ ಶೈಲಿ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿರುತ್ತದೆ. ಅದರಲ್ಲೂ ಯಾವ ಉಡುಪಿಗೆ ಯಾವ ಶೂಗಳನ್ನು ಹಾಕಿಕೊಳ್ಳಬೇಕು ಎನ್ನುವ ಅಭಿರುಚಿ ತುಂಬಾನೇ ಮುಖ್ಯವಾಗಿರುತ್ತದೆ.

ವೈಟ್ ಪೋಲ್‌ನ ಸಂಸ್ಥಾಪಕ ವೈಭವ್ ಗೋಯೆಲ್ ಅವರು ಉಡುಪುಗಳ ಜೊತೆ ಮ್ಯಾಚ್ ಆಗುವ ಶೂಗಳ ಕೆಲವು ಸುಲಭ ಮತ್ತು ಟ್ರೆಂಡೀ ಸ್ಟೈಲಿಂಗ್‌ಗಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಲೇಯರ್ ಅಪ್:

ಬಿಗಿಯಾದ ಉಡುಪು ಅಥವಾ ಲೆಗ್ಗಿನ್ಸ್ ಉಡುಪುಗಳನ್ನು ಧರಿಸಿ ಹೊರಗೆ ಹೋಗುವಾಗ ಶೂಗಳನ್ನು ಧರಿಸುವುದು ಉತ್ತಮ. ಸಾಕ್ಸ್ ಧರಿಸಿ ಆ ಬಳಿಕ ಶೂಗಳನ್ನು ಹಾಕಬೇಕು. ಲೆಗ್ಗಿನ್ಸ್ ಜೊತೆಗೆ ಶೂಗಳ ಸಂಯೋಜನೆಯು ಸ್ಟೈಲಿಶ್ ಲುಕ್ ನೀಡುತ್ತದೆ.

ಡೆನಿಮ್:

ಡೆನಿಮ್ ಜಾಕೆಟ್, ಸ್ಕರ್ಟ್ ಅಥವಾ ಜೀನ್ಸ್ ಪ್ಯಾಂಟ್ ಜೊತೆಗೆ ಶೂಗಳ ಸಂಯೋಜನೆಯು ಅದ್ಭುತವಾಗಿದೆ. ಇದು ಯಾವತ್ತು ಮಾಸಿ ಹೋಗದ ಫ್ಯಾಶನ್ ಆಗಿದೆ. ಹೆಚ್ಚಿನ ಜನರು ಜೀನ್ಸ್ ಪ್ಯಾಂಟ್ ಧರಿಸಿದಾಗ ಅವರು ಸ್ಟೈಲಿಶ್ ಆಗಿ ಕಾಣಲು ಹೆಚ್ಚಾಗಿ ವಿವಿಧ ಶೈಲಿಯ ಶೂಗಳನ್ನು ಧರಿಸಲು ಇಷ್ಟಪಡುತ್ತಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್, ಫೇಸ್​​ಬುಕ್​​ಗಳಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಆರ್ಡರ್​​ ಮಾಡಿ ಮೋಸಹೋಗದಿರಿ

ವಿಂಟರ್ ಕೋಟ್‌ಗಳು:

ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಉದ್ದಗಿನ ಓವರ್ ಕೋಟ್‌ಗಳನ್ನು ತಮ್ಮ ಬಟ್ಟೆಯ ಮೇಲೆ ಧರಿಸುತ್ತಾರೆ. ಈ ಓವರ್ ಕೋಟ್‌ಗಳ ಜೊತೆ ಶೂಗಳನ್ನು ಜೋಡಿ ಮಾಡುವುದು ಒಂದು ಉತ್ತಮ ಕಾಂಬಿನೇಷನ್ ಆಗಿದೆ. ಅದರಲ್ಲೂ ಮಹಿಳೆಯರು ಜಾಕೆಟ್ ಜೊತೆ ಓವರ್ ಬೂಟ್‌ಗಳನ್ನು ಧರಿಸಿದಾಗ ಅವರು ಆಕರ್ಷಕವಾಗಿ ಕಾಣಿಸುತ್ತಾರೆ.

ಸ್ವೆಟರ್ ಉಡುಪುಗಳು:

ಚಳಿಗಾಲದ ಸ್ವೆಟರ್ ಉಡುಪುಗಳ ಜೊತೆಗೆ ಶೂಗಳ ಕಾಂಬಿನೇಷನ್ ಅದ್ಭುತವಾಗಿದೆ. ಇದು ಆಕರ್ಷಕವಾಗಿ ಕಾಣಿಸುವಂತೆ ಮಾಡುವುದು ಮಾತ್ರವಲ್ಲದೆ ಚಳಿಗಾಲದಲ್ಲಿ ಕಾಲುಗಳನ್ನು ಬೆಚ್ಚಗಿಡುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಧರಿಸುವ ಎಲ್ಲಾ ಬೆಚ್ಚಗಿನ ಉಡುಪುಗಳ ಜೊತೆಗೂ ಈ ಶೂಗಳು ಹೊಂದಿಕೊಳ್ಳುತ್ತವೆ.

ಗಾಢ ಬಣ್ಣಗಳು:

ಗಾಢ ಬಣ್ಣಗಳಾದ ಕೆಂಪು, ಹಸಿರು ಅಥವಾ ಹಳದಿ ಬಣ್ಣಗಳಂತಹ ಶೂಗಳು ಯೂನಿಕ್ ಆಗಿರುವುದರ ಜೊತೆಗೆ, ಇವುಗಳು ನಿಮ್ಮ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮಿಡಿ ಸ್ಕರ್ಟ್ ಜೊತೆಗೆ ಓವರ್ ಸ್ವೆಟರ್ ಅಥವಾ ಜಾಕೆಟ್‌ನೊಂದಿಗೆ ಶೂಗಳನ್ನು ಧರಿಸುವುದು ಒಂದು ಉತ್ತಮ ಕಾಂಬಿನೇಷನ್ ಆಗಿದೆ. ಇದು ನಿಮ್ಮ ಸ್ಟೈಲಿಶ್ ಲುಕ್‌ನ್ನು ದುಪ್ಪಟ್ಟು ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:13 pm, Wed, 15 February 23