
ಅಡುಗೆಮನೆಯಲ್ಲಿ ಹೆಚ್ಚು ಬಳಸಲ್ಪಡುವ ವಸ್ತು ಎಂದ್ರೆ ಅದು ಗ್ಯಾಸ್ ಸ್ಟೌವ್ (gas stove). ಪ್ರತಿನಿತ್ಯ ಅಡುಗೆ ಮಾಡುವ ಕಾರಣ ಇದನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಗಲೀಜು ಆಗುತ್ತಿರುತ್ತೆ. ಹಾಲು ಉಕ್ಕಿ, ಕುಕ್ಕರ್‌ನಿಂದ ಬರುವ ನೀರು, ಎಣ್ಣೆ ಅಂಶ ಇವೆಲ್ಲವೂ ಬಿದ್ದು ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಬರ್ನಲ್ ಕೊಳೆಯಾಗುತ್ತವೆ. ಹೆಚ್ಚಿನವರು ಈ ಹಠಮಾರಿ ಕಲೆಗಳನ್ನು ತೊಡೆದುಹಾಕಲು ದುಬಾರಿ ರಾಸಾಯನಿಕಯುಕ್ತ ಕ್ಲೀನರ್‌ಗಳನ್ನು ಬಳಕೆ ಮಾಡುತ್ತಾರೆ. ಇದರ ಬದಲು ಯಾವುದೇ ಖರ್ಚಿಲ್ಲದೆ ಮನೆಯಲ್ಲಿ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ಬಲು ಸುಲಭವಾಗಿ ಗ್ಯಾಸ್ ಸ್ಟೌವ್ ಮೇಲೆ ಅಂಟಿರುವ ಕಲೆಗಳನ್ನು ಹೋಗಲಾಡಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೇಕಿಂಗ್ ಸೋಡಾ ಮತ್ತು ವಿನೆಗರ್: ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಲು ಸುಲಭವಾದ ಮಾರ್ಗವೆಂದರೆ ಬೇಕಿಂಗ್ ಸೋಡಾ ಮತ್ತು ಬಿಳಿ ವಿನೆಗರ್ ಬಳಸುವುದು. ಇದಕ್ಕಾಗಿ ಮೊದಲು, ಗ್ಯಾಸ್ ರೆಗ್ಯುಲೇಟರ್ ಆಫ್ ಮಾಡಿ ಮತ್ತು ಬರ್ನರ್ಗಳನ್ನು ತೆಗೆದುಹಾಕಿ. ಸ್ಟೌವ್ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ. ಅದಕ್ಕೆ ಸ್ವಲ್ಪ ಬಿಳಿ ವಿನೆಗರ್ ಸೇರಿಸಿ. ಈ ಮಿಶ್ರಣವು ತಕ್ಷಣವೇ ಗುಳ್ಳೆಗಳಾಗಿ ಬದಲಾಗುತ್ತದೆ ಮತ್ತು ಫೋಮ್ ಸೃಷ್ಟಿಯಾಗುತ್ತದೆ. ಈ ಫೋಮ್ ಸ್ಟೌವ್ ಮೇಲೆ ಸಂಗ್ರಹವಾಗಿರುವ ಗ್ರೀಸ್ ಮತ್ತು ಎಣ್ಣೆಯ ಕಠಿಣ ಕಲೆಗಳನ್ನು ಮೃದುಗೊಳಿಸುತ್ತದೆ. 10 ನಿಮಿಷಗಳ ನಂತರ, ಹಳೆಯ ಟೂತ್ ಬ್ರಷ್ ಅಥವಾ ಸ್ಪಾಂಜ್‌ನಿಂದ ನಿಧಾನವಾಗಿ ಉಜ್ಜಿ ಮತ್ತು ಒದ್ದೆಯಾದ ಬಟ್ಟೆಯಿಂದ ಒರೆಸಿದರೆ ಗ್ಯಾಸ್ ಸ್ಟೌವ್ ಕ್ಲೀನ್ ಆಗುತ್ತದೆ.
ನಿಂಬೆ ಮತ್ತು ಉಪ್ಪು: ಗ್ಯಾಸ್ ಸ್ಟೌವ್ ಸ್ವಚ್ಛಗೊಳಿಸಲು ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಆ ಹೋಳುಗಳ ಮೇಲೆ ಉಪ್ಪು ಸೇರಿಸಿ ಸ್ಟೌವ್ ಮೇಲೆ ನಿಧಾನವಾಗಿ ಉಜ್ಜಿ. ನಿಂಬೆಯಲ್ಲಿರುವ ಆಮ್ಲ ಮತ್ತು ಉಪ್ಪಿನ ಅಪಘರ್ಷಕ ಶಕ್ತಿಯು ಗಟ್ಟಿಯಾಗಿ ಅಂಟಿರುವ ಕಲೆಗಳನ್ನು ಸಡಿಲಗೊಳಿಸುತ್ತದೆ. ನಂತರ ಅದನ್ನು ಒಣ ಬಟ್ಟೆಯಿಂದ ಒರೆಸಿ ಕಲೆಗಳು ಸಂಪೂರ್ಣವಾಗಿ ಹೋಗುತ್ತದೆ.
ಇದನ್ನೂ ಓದಿ: ಎಲೆಕೋಸನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು
ಬಿಸಿನೀರು ಮತ್ತು ಪಾತ್ರೆ ತೊಳೆಯುವ ದ್ರವ: ಸ್ಟೋವ್‌ನ ಸಣ್ಣ ಭಾಗಗಳಾದ ಗ್ರೇಟ್‌ಗಳು ಮತ್ತು ಬರ್ನರ್ ರಿಂಗ್‌ಗಳನ್ನು ಸ್ವಚ್ಛಗೊಳಿಸಲು ಬಿಸಿನೀರು ತುಂಬಾ ಪರಿಣಾಮಕಾರಿಯಾಗಿದೆ. ಒಂದು ಬಕೆಟ್ ಬಿಸಿ ನೀರಿನಲ್ಲಿ ಕೆಲವು ಹನಿ ಪಾತ್ರೆ ತೊಳೆಯುವ ದ್ರವವನ್ನು ಮಿಶ್ರಣ ಮಾಡಿ. ಬರ್ನರ್ ರಿಂಗ್‌ಗಳು ಮತ್ತು ಗ್ರೇಟ್‌ಗಳಂತಹ ಸಣ್ಣ ಭಾಗಗಳನ್ನು 15 ನಿಮಿಷಗಳ ಕಾಲ ಆ ನೀರಿನಲ್ಲಿ ನೆನೆಸಿ. ನೆನೆಸಿದ ನಂತರ, ಬ್ರಷ್ ಬಳಸಿ ಸ್ಕ್ರಬ್ ಮಾಡಿ ಮತ್ತು ತೊಳೆಯಿರಿ. ಈ ವಿಧಾನವು ಗ್ರೀಸ್ ಕಲೆಗಳು
ಒಲೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ನಂತರ, ಒಲೆಯ ಮೇಲೆ ಕೆಲವು ಹನಿ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಒಣ ಬಟ್ಟೆಯಿಂದ ನಿಧಾನವಾಗಿ ಒರೆಸಿ. ಈ ಸುಲಭವಾದ ಸಲಹೆಯು ಗ್ಯಾಸ್ ಸ್ಟೌವ್‌ಗೆ ಹೊಸ ಹೊಳಪನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Thu, 8 January 26