Mother’s Day Gift Ideas: ತಾಯಂದಿರ ದಿನಕ್ಕೆ ಯಾವ ಗಿಫ್ಟ್ ನೀಡಬೇಕು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 11, 2023 | 10:26 AM

ತಾಯಂದಿರ ದಿನಕ್ಕೆ (ಮದರ್ಸ್ ಡೇ) ಯಾವ ರೀತಿಯ ಗಿಫ್ಟ್ ನೀಡಬೇಕು? ನಿಮ್ಮ ಅಮ್ಮನಿಗೆ ಎಂತಹ ಉಡುಗೊರೆ ಇಷ್ಟವಾಗುತ್ತದೆ. ಇಂದೇ ಯೋಚನೆ ಮಾಡಿ. ಅದು ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ನಿಮ್ಮ ತಾಯಿಗೆ ತೋರಿಸುವಂಥದ್ದಾಗಿರಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ.

Mothers Day Gift Ideas: ತಾಯಂದಿರ ದಿನಕ್ಕೆ ಯಾವ ಗಿಫ್ಟ್ ನೀಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ತಾಯಂದಿರ ದಿನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ನಿಮ್ಮ ತಾಯಿಯನ್ನು ಖುಷಿಪಡಿಸಲು ಗೌರವಿಸಲು ಇದೊಂದೇ ದಿನವಲ್ಲ ಆದರೆ, ಈ ದಿನದ ಪ್ರಯುಕ್ತ ನಿಮ್ಮ ಅಮ್ಮನಿಗೆ ನೀವು ಸರಳವಾಗಿ ಆಕೆಯನ್ನು ಖುಷಿ ಪಡಿಸಲು ಉಡುಗೊರೆ ನೀಡಬಹುದು. ಇದೊಂದು ವಿಶೇಷ ಸಂದರ್ಭ. ಈ ವರ್ಷ ಮೇ 14ರ ಭಾನುವಾರದಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ನೀವು ನಿಮ್ಮ ರೀತಿಯಲ್ಲಿ ಉಡುಗೊರೆ ನೀಡಬಹುದು, ಕಾರ್ಡ್ಸ್​​ಗಳನ್ನು ಕಳುಹಿಸಬಹುದು. ಅಥವಾ ಆ ದಿನ ಹೆಚ್ಚು ಹೊತ್ತು ಸಮಯ ಕಳೆಯಲು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಬಹುದು. ಇವೆಲ್ಲವೂ ನೀವು ತಾಯಂದಿರಿಗೆ ಮಾಡುವ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುವ ರೀತಿ. ಈ ದಿನ ಅಮ್ಮ ಮತ್ತು ಮಕ್ಕಳ ನಡುವಿನ ಅನನ್ಯ ಮತ್ತು ವಿಶೇಷ ಬಂಧವನ್ನು ಆಚರಿಸುವ ಸಮಯ. ಇದಕ್ಕೆ ಇದೊಂದೇ ದಿನವಾಗಬೇಕೆಂದಿಲ್ಲ ಆದರೆ ಈ ದಿನವನ್ನು ಆಚರಣೆ ಮಾಡಿ ಅಮ್ಮನನ್ನು ಖುಷಿ ಪಡಿಸುವುದರಲ್ಲಿ ಯಾವುದೇ ತಪ್ಪು ಇಲ್ಲ.

ಒಂದು ಪರಿಪೂರ್ಣ ಉಡುಗೊರೆಯನ್ನು ನೀಡುವುದರಿಂದ ನಿಮ್ಮ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ತೋರಿಸಲು ಉತ್ತಮ ಮಾರ್ಗವಾಗಿದೆ. ಹಾಗಾಗಿ ತಾಯಂದಿರ ದಿನಕ್ಕಾಗಿ ಗಿಫ್ಟ್ ಐಡಿಯಾಗಳ ಬಗ್ಗೆ ಇಲ್ಲಿದೆ ಮಾಹಿತಿ:

ಸ್ಕಿನ್ ಕೇರ್ ಗಿಫ್ಟ್ ಸೆಟ್: ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಗಳು ಅಥವಾ ಚರ್ಮದ ಆರೈಕೆ ಮಾಡುವ ಕ್ರಿಮ್ಗಳನ್ನು ಉಡುಗೊರೆ ನೀಡಬಹುದು. ಅಥವಾ ನಿಮ್ಮ ತಾಯಿ ಇಷ್ಟ ಪಡುವ ಯಾವುದಾದರೂ ಕ್ರೀಮ್ ಇದ್ದಲಿ ಅದರ ಸೆಟ್ ಅನ್ನು ನಿಮ್ಮ ತಾಯಿಗೆ ನೀಡಬಹುದು. ಇದರಿಂದ ತಾಯಿಯ ಚರ್ಮದ ಆರೋಗ್ಯಕ್ಕಾಗಿ ನೀವು ನೀಡಬಹುದಾದ ಒಳ್ಳೆಯ ಆಯ್ಕೆಯಾಗಿದೆ. ಅದರಲ್ಲಿಯೂ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಮತ್ತು ಅವಳ ನಿರ್ದಿಷ್ಟ ಚರ್ಮದ ಕಾಳಜಿಗಳನ್ನು ಪೂರೈಸುವ ಉತ್ಪನ್ನಗಳನ್ನು ಹುಡುಕಿ.

ಮೇಕಪ್ ಕಿಟ್: ನಿಮ್ಮ ತಾಯಿ ಮೇಕಪ್​​ನ್ನು ಪ್ರೀತಿಸುತ್ತಿದ್ದರೆ, ಅವರ ನೆಚ್ಚಿನ ಬ್ರಾಂಡ್​​ಗಳ ಅಥವಾ ಅವರು ಇಷ್ಟ ಪಡುವ ಲಿಪ್ ಸ್ಟಿಕ್, ಕಾಜಲ್ ಇನ್ನಿತರ ವೈಯಕ್ತಿಕವಾಗಿ ಖರೀದಿಸಿ ಮೇಕಪ್ ಕಿಟ್ ನೀವೇ ಒಟ್ಟಿಗೆ ಸೇರಿಸಿ ಅವರಿಗೆ ನೀಡಬಹುದು. ನೀವು ಅವಳಿಗೆ ಮಾಸಿಕವಾಗಿ ತಲುಪುವ ಮೇಕಪ್ ಬಾಕ್ಸ್ ಗೆ ಚಂದಾದಾರಿಕೆಯನ್ನು ಸಹ ಉಡುಗೊರೆಯಾಗಿ ನೀಡಬಹುದು.

ಇದನ್ನೂ ಓದಿ:Mothers Day Gifts: ತಾಯಂದಿರ ದಿನ ಪ್ರಯುಕ್ತ ಇಂದು ನಿಮ್ಮ ಅಮ್ಮನಿಗೆ ಈ ಉಡುಗೊರೆ ನೀಡಿ

ಆಭರಣ: ಸುಂದರವಾದ ಆಭರಣಗಳನ್ನು ಇಷ್ಟ ಪಡದ ಅಮ್ಮಂದಿರೆ ಇಲ್ಲ. ಅಲ್ಲದೆ ಇದು ತಾಯಂದಿರ ದಿನಕ್ಕೆ ಉತ್ತಮ ಉಡುಗೊರೆಯಾಗಿದೆ. ಅವಳ ವೈಯಕ್ತಿಕ ಶೈಲಿಯನ್ನು ಪ್ರತಿಬಿಂಬಿಸುವ ಹಾರ, ಬ್ರೇಸ್ಲೆಟ್ ಅಥವಾ ಕಿವಿಯೋಲೆಗಳನ್ನು ನೀವು ನೀಡಬಹುದು.

ಡಿಸೈನರ್ ಹ್ಯಾಂಡ್ ಬ್ಯಾಗ್: ನಿಮ್ಮ ತಾಯಿ ಫ್ಯಾಷನ್ ಪ್ರಿಯರಾಗಿದ್ದರೆ, ಅವಳಿಗೆ ಡಿಸೈನರ್ ಬ್ಯಾಗ್ ಉಡುಗೊರೆಯಾಗಿ ನೀಡಿ. ಅದು ಅವಳ ವೈಯಕ್ತಿಕ ಅಭಿರುಚಿಗೆ ಸರಿಹೊಂದುವಂತಿರಬೇಕು. ಕೆಲವೊಮ್ಮೆ ಅಮ್ಮಂದಿರು ನಾವು ಬಳಸುವುದಕ್ಕಿಂತ ಸರಳವಾದ ಹ್ಯಾಂಡ್ ಬ್ಯಾಗ್ ಉಪಯೋಗಿಸುತ್ತಾರೆ. ಹಾಗಾಗಿ ಆಯ್ಕೆ ನಿಮ್ಮ ಅಭಿರುಚಿಗಿಂತ ನಿಮ್ಮ ಅಮ್ಮನ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡಿ.

ವೈಯಕ್ತೀಕರಿಸಿದ ಬಟ್ಟೆ ಐಟಂ: ನಿಮ್ಮ ತಾಯಿಗೆ ಮೊನೊಗ್ರಾಮ್ಡ್ ಸ್ವೆಟರ್ ಅಥವಾ ವಿಶೇಷ ಸಂದೇಶದೊಂದಿಗೆ ಕಸ್ಟಮೈಸ್ ಮಾಡಿದ ಟಿ-ಶರ್ಟ್ ಅಥವಾ ಟಾಪ್ ನಂತಹ ವೈಯಕ್ತಿಕಗೊಳಿಸಿದ ಬಟ್ಟೆ ಐಟಂ ಅನ್ನು ಉಡುಗೊರೆಯಾಗಿ ನೀಡುವುದು ಕೂಡ ಉತ್ತಮ ಆಯ್ಕೆಯಾಗಿದೆ.

ಮನೆಯ ಅಲಂಕಾರ; ನಿಮ್ಮ ತಾಯಿ ಒಳಾಂಗಣ ಅಲಂಕಾರವನ್ನು ಆನಂದಿಸುವವರಾಗಿದ್ದರೆ, ಅಲಂಕಾರಿಕ ದಿಂಬುಗಳು ಅಥವಾ ವಿಶಿಷ್ಟ ಗೋಡೆಯಲಂಕಾರಿಕ ವಸ್ತುಗಳು, ಮನೆಯ ಒಳಗಡೆ ಇಡಬಹುದಾದ ಗಿಡಗಳು ಹೀಗೆ ಕೆಲವು ಮನೆಯ ಅಲಂಕಾರಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು.

ಫಿಟ್ನೆಸ್ ಟ್ರ್ಯಾಕರ್: ನಿಮ್ಮ ತಾಯಿಗೆ ಫಿಟ್ ನೆಸ್ ನಲ್ಲಿ ಆಸಕ್ತಿ ಇದ್ದರೆ, ಅವರಿಗೆ ಫಿಟ್ ನೆಸ್ ಟ್ರ್ಯಾಕರ್ ಅನ್ನು ಉಡುಗೊರೆಯಾಗಿ ನೀಡಬಹುದು. ಹೃದಯ ಬಡಿತದ ಮೇಲ್ವಿಚಾರಣೆ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ನಂತಹ ಹಲವಾರು ವೈಶಿಷ್ಟ್ಯಗಳನ್ನು ನೀಡುವ ಮಾದರಿಯ ವಾಚ್, ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನೂ ಕೂಡ ಉಡುಗೊರೆಯಾಗಿ ನೀಡಬಹುದು.

ಇನ್ನುಳಿದಂತೆ, ಅವರು ಹಲವಾರು ದಿನಗಳಿಂದ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಿದ್ದ ವಸ್ತುಗಳು, ಅಥವಾ ಅಡುಗೆ ಮನೆಗೆ ಬೇಕಾದ ಯಾವುದಾದರೂ ಅಗತ್ಯ ವಸ್ತುಗಳನ್ನು ನೀವು ಉಡುಗೊರೆಯಾಗಿ ನೀಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:10 pm, Wed, 10 May 23