ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ದಿನ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದುಕೊಂಡವರಿಗೆ ಇಲ್ಲಿದೆ ಕೆಲವು ಟಿಪ್ಸ್

| Updated By: ಅಕ್ಷತಾ ವರ್ಕಾಡಿ

Updated on: Jan 17, 2024 | 6:31 PM

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಡಗರವು ಜೋರಾಗಿದೆ. ಜನವರಿ 22 ರಂದು ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಗೊಳ್ಳಲಿದ್ದು, ಈಗಾಗಲೇ ದಿನಗಣನೆ ಶುರುವಾಗಿದೆ. ಬಹುಕಾಲದ ಕನಸಾದ ರಾಮಮಂದಿರ ಉದ್ಘಾಟನೆಯೂ ಹಿಂದೂಗಳ ಪಾಲಿಗೆ ಬಹುದೊಡ್ಡ ಹಬ್ಬವೇ ಸರಿ. ಈ ಹಬ್ಬವನ್ನು ಸಂಭ್ರಮಿಸಲು ನಾಡಿನ ಜನರು ಸಜ್ಜಾಗಿದ್ದು, ಈ ದಿನ ಸಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆ ದಿನವನ್ನು ಮತ್ತಷ್ಟು ಮೆಮೊರೆಬಲ್ ದಿನವನ್ನಾಗಿಸಬಹುದು.

ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ದಿನ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದುಕೊಂಡವರಿಗೆ ಇಲ್ಲಿದೆ ಕೆಲವು ಟಿಪ್ಸ್
Traditional
Image Credit source: Pinterest
Follow us on

ಹಿಂದೂಗಳ ಬಹುಕಾಲದ ಕನಸು ಈ ಶ್ರೀರಾಮ ಮಂದಿರ ನಿರ್ಮಾಣ. ಈಗಾಗಲೇ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ ಉದ್ಘಾಟನೆಯ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಜನವರಿ 22 ಶ್ರೀರಾಮ ಮಂದಿರದ ಉದ್ಘಾಟನೆಯ ದಿನ ಹಿಂದೂಗಳ ಪಾಲಿಗೆ ಮರೆಯಲಾಗದ ದಿನ. ಈಗಾಗಲೇ ಈ ದಿನದ ಸಂಭ್ರಮಕ್ಕೆ ದೇಶವೇ ಹಬ್ಬದಂತೆ ಸಿದ್ಧವಾಗಿದ್ದು, ಅನೇಕರು ಹಬ್ಬವನ್ನು ತಮ್ಮದೇ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಅದರಲ್ಲಿಯೂ ಕೆಲವರೂ ತಮ್ಮ ತಮ್ಮ ಮನೆಯಲ್ಲಿ ಹಬ್ಬದ ಅಡುಗೆ ಮಾಡಿ ಕುಟುಂಬದ ಸದಸ್ಯರ ಜೊತೆಗೆ ಸವಿಯಲು ರೆಡಿಯಾದರೆ, ಇನ್ನು, ಕೆಲವರು ದೇವಸ್ಥಾನಗಳಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಏನೇ ಪ್ಲಾನ್ ಮಾಡಿಕೊಂಡಿದ್ದರೂ ನಿಮ್ಮ ಉಡುಗೆ ತೊಡುಗೆಗಳು ಆ ದಿನವನ್ನು ಮತ್ತಷ್ಟು ಕಲರ್ ಫುಲ್ ಮಾಡುತ್ತದೆ.

ಸಾಂಪ್ರದಾಯಿಕವಾಗಿ ಕಾಣಲು ಈ ಉಡುಗೆಗಳನ್ನು ಆಯ್ದುಕೊಳ್ಳಿ:

ಪುರುಷರು: ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬೇಕೆಂದುಕೊಂಡಿರುವ ಪುರುಷರು ಬಿಳಿ ಪಂಚೆ ಹಾಗೂ ಅದಕ್ಕೆ ಒಪ್ಪುವ ಮ್ಯಾಚಿಂಗ್ ಅಂಗಿಯನ್ನು ಧರಿಸಬಹುದು. ಇಲ್ಲವಾದರೆ ಬಿಳಿ ಪಂಚೆಗೆ ಹೊಂದಿಕೆಯಾಗುವ ಖಾದಿ ಅಂಗಿ, ಜುಬ್ಬ ತೊಟ್ಟರೆ ಲುಕ್ ಆಗಿ ಕಾಣಿಸಿಕೊಳ್ಳಬಹುದು. ಇನ್ನು ಪುರುಷರಿಗೆ ಇರುವ ಮತ್ತೊಂದು ಆಯ್ಕೆಯೆಂದರೆ ತುಂಬು ತೋಳಿನ ಶರ್ಟ್‌ ಮೇಲೆ ಖಾದಿ ಜಾಕೆಟ್‌ ಧರಿಸುವುದು. ಇಲ್ಲದಿದ್ದರೆ ಕುರ್ತಿ ಜೊತೆಗೆ ಧೋತಿ ಪ್ಯಾಂಟ್ ಧರಿಸುವುದು ಉತ್ತಮ.

ಯುವತಿಯರು ಹಾಗೂ ಮಹಿಳೆಯರು : ಮಹಿಳೆಯರು ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಲು ಇರುವ ಆಯ್ಕೆಗಳು ಒಂದೆರಡಲ್ಲ. ಯುವತಿಯರು ಲಂಗದಾವಣಿ, ಲೆಹಂಗಾ, ಅನಾರ್ಕಲಿಯಂತಹ ಉಡುಗೆಯನ್ನು ಆಯ್ಕೆ ಮಾಡಿಕೊಂಡರೆ, ಮಹಿಳಾ ಮಣಿಗಳಿಗೆ ಸೀರೆಗಿಂತ ಸಾಂಪ್ರದಾಯಿಕ ಹಾಗೂ ಉತ್ತಮ ಉಡುಗೆಯೂ ಮತ್ತೊಂದಿಲ್ಲ. ಈ ಟ್ರಡಿಷನಲ್ ಉಡುಗೆಯೊಂದಿಗೆ ಅದಕ್ಕೆ ಒಪ್ಪುವ ಒಡವೆಗಳನ್ನು ತೊಟ್ಟರೆ ಎಲ್ಲವೂ ಪರ್ಫೆಕ್ಟ್ ಎನ್ನಬಹುದು.

ಗಂಡು ಹಾಗೂ ಹೆಣ್ಣು ಮಕ್ಕಳು : ಗಂಡು ಮಕ್ಕಳು ಧೋತಿ ಕುರ್ತಾ, ಶೇರ್ವಾನಿ, ಪಂಚೆ ಶರ್ಟ್‌ ಸೆಟ್‌ ಧರಿಸಿದರೆ, ಹೆಣ್ಣು ಮಕ್ಕಳು ಲೆಹಂಗಾ ಚೋಲಿ, ಚೂಡಿದಾರ್‌ ಸೆಟ್‌, ಸೀರೆ ಸೆಟ್‌, ಘಾಗ್ರಾ ಚೋಲಿ, ಲಂಗ ದಾವಣಿ ತೊಟ್ಟು ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ.