Health Tips : ಪುರುಷರಲ್ಲಿ ಕಾಡುವ ನಿಮಿರು ದೌರ್ಬಲ್ಯಕ್ಕೆ ಈ ಪಾನೀಯಗಳೇ ಬೆಸ್ಟ್ ಮೆಡಿಸಿನ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 24, 2024 | 11:14 AM

ವೈವಾಹಿಕ ಜೀವನದಲ್ಲಿ ಲೈಂಗಿಕತೆಯೂ ದಂಪತಿಗಳ ನಡುವಿನ ಸಂಬಂಧವು ಗಟ್ಟಿಗೊಳಿಸುತ್ತದೆ. ಆದರೆ ಎಷ್ಟೋ ಸಂಬಂಧಗಳು ಈ ಲೈಂಗಿಕ ಸಾಮರ್ಥ್ಯದ ಕೊರತೆಯಿಂದಾಗಿ ಮುರಿದು ಬಿದ್ದಿರುವುದನ್ನು ನೋಡಿರಬಹುದು. ಅದರಲ್ಲಿಯು ವಯಸ್ಸಾಗುತ್ತಾ ಹೋದಂತೆ ಪುರುಷ ಹಾಗೂ ಮಹಿಳೆಯರಲ್ಲಿ ಲೈಂಗಿಕಾಸಕ್ತಿಯು ಕಡಿಮೆಯಾಗುತ್ತದೆ. ಆದರೆ ಈ ಪೇಯಗಳು ಲೈಂಗಿಕ ಸಮಸ್ಯೆಗಳನ್ನು ನಿವಾರಿಸಿ ವೈವಾಹಿಕ ಸಂಸಾರದಲ್ಲಿ ಮತ್ತದೇ ಹುಮ್ಮಸ್ಸು ತರುತ್ತದೆ.

Health Tips : ಪುರುಷರಲ್ಲಿ ಕಾಡುವ ನಿಮಿರು ದೌರ್ಬಲ್ಯಕ್ಕೆ ಈ ಪಾನೀಯಗಳೇ ಬೆಸ್ಟ್ ಮೆಡಿಸಿನ್
ಸಾಂದರ್ಭಿಕ ಚಿತ್ರ
Follow us on

ಇಂದಿನ ಬಿಡುವಿಲ್ಲದ ಜೀವನ ಶೈಲಿ ಹಾಗೂ ಕೆಲಸದ ಒತ್ತಡವು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯು ವಿವಾಹಿತ ಪುರುಷರು ತಮ್ಮ ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಲೈಂಗಿಕ ಜೀವನದಲ್ಲಿ ಆಸಕ್ತಿ ಹೆಚ್ಚಳಕ್ಕೆ ಮಾರುಕಟ್ಟೆಗಳಲ್ಲಿ ಈಗಾಗಲೇ ಔಷಧಿ ಮತ್ತು ಮಾತತ್ರೆಗಳು ಲಭ್ಯವಿದ್ದು ಅನೇಕರು ಇದನ್ನೇ ಅವಲಂಬಿಸಿದ್ದಾರೆ. ಆದರೆ ಈ ಉತ್ಪನ್ನಗಳಿಂದ ಪ್ರಯೋಜನಕ್ಕಿಂತ ಹೆಚ್ಚಾಗಿ ಅಡ್ಡಪರಿಣಾಮಗಳೇ ಅಧಿಕವಾಗಿದೆ. ಆದರೆ ಪುರುಷರು ಹಾಗೂ ಮಹಿಳೆಯರು ಈ ಪಾನೀಯವನ್ನು ನಿಯಮಿತವಾಗಿ ಲೈಂಗಿಕ ಜೀವನವನ್ನು ಮತ್ತಷ್ಟು ರಂಗೇರಿಸಿಕೊಳ್ಳಬಹುದು.

* ಲೋಳೆಸರದ ಜ್ಯೂಸ್ : ಲೋಳೆಸರ ಅಥವಾ ಆಲೋವೆರಾದ ತಿರುಳಿನ ರಸದ ಸೇವನೆಯಿಂದ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ಹಾರ್ಮೋನ್ ಹೆಚ್ಚು ಉತ್ಪಾದನೆಯಾಗುತ್ತದೆ. ಇದರಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ನಿಮಿರು ದೌರ್ಬಲ್ಯ ಸಮಸ್ಯೆಯು ಕಡಿಮೆಯಾಗುತ್ತದೆ. ಈ ಲೋಳೆಸರದ ಪಾನೀಯದ ನಿಯಮಿತ ಸೇವನೆಯು ಕೇವಲ ಲೈಂಗಿಕ ಶಕ್ತಿಯ ಹೆಚ್ಚಳದೊಂದಿಗೆ ಆರೋಗ್ಯ ವೃದ್ಧಿಗೂ ಸಹಾಕಾರಿಯಾಗಿದೆ.

* ಬಾಳೆಹಣ್ಣಿನ ರಸಾಯನ: ಲೈಂಗಿಕ ಶಕ್ತಿ ಹಾಗೂ ಕಾಮಾಸಕ್ತಿಯನ್ನು ಹೆಚ್ಚಿಸಲು ಬಾಳೆಹಣ್ಣು ರಾಸಾಯನ ಉತ್ತಮ ಆಯ್ಕೆಯಾಗಿದೆ. ಈ ಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಉತ್ತಮ ಲೈಂಗಿಕ ಶಕ್ತಿ ವರ್ಧಿಸುತ್ತದೆ. ಇದರಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು, ವಿಟಮಿನ್ ಹಾಗೂ ಖನಿಜಗಳಿದ್ದು, ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಿ ಲೈಂಗಿಕತೆಯನ್ನು ಹೆಚ್ಚಿಸುತ್ತದೆ.

* ದಾಳಿಂಬೆ ಹಣ್ಣಿನ ರಸ : ದಾಳಿಂಬೆ ಹಣ್ಣಿನ ರಸದಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳಿದ್ದು ರಕ್ತಪರಿಚಲನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಹಣ್ಣಿನ ರಸದ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡುವುದಲ್ಲದೆ ನಿಮಿರು ದೌರ್ಬಲ್ಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

* ಕಲ್ಲಂಗಡಿ ಹಣ್ಣಿನ ಜ್ಯೂಸ್ : ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶವು ಅಧಿಕವಾಗಿದ್ದು, ಇದರಲ್ಲಿರುವ ಎಲ್-ಸಿಟ್ರುಲೈನ್ ಎಂಬ ಪೋಷಕಾಂಶವು ಲೈಂಗಿಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಇದರ ನಿಯಮಿತ ಸೇವನೆಯು ಜೀರ್ಣರಸಗಳಿಂದ ಎಲ್-ಆರ್ಜಿನೈನ್ ಎಂಬ ಪೋಷಕಾಂಶವಾಗಿ ಬದಲಾಗುತ್ತದೆ. ಇದು ರಕ್ತಕ್ಕೆ ಸೇರಿದ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಪುರುಷರ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಹೆಚ್ಚಿಸಿ ಲೈಂಗಿಕ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಮಿಲನದ ವೇಳೆ ಪುರುಷರು ಈ ನಾಲ್ಕು ಸಂಗತಿಗಳಿಂದಲೇ ಮಹಿಳೆಯತ್ತ ಆಕರ್ಷಿತರಾಗುವುದಂತೆ

* ಹಾಲು ಮತ್ತು ಜೇನು : ಲೈಂಗಿಕಾಸಕ್ತಿನ ಕಡಿಮೆಯಿರುವ ಪುರುಷರು ಹಾಲಿಗೆ ಜೇನು ಬೆರೆಸಿ ಕುಡಿಯಬಹುದು. ಜೇನು ನೈಸರ್ಗಿಕ ಸಿಹಿಕಾರಕವಾಗಿದ್ದು, ಕಾಮೋತ್ತೇಜನಕ್ಕೆ ಸಹಕಾರಿಯಾಗಿದೆ. ಈ ಹಾಲಿಗೆ ಜೇನು ಬೆರೆಸಿ ಕುಡಿದರೆ ಲೈಂಗಿಕ ಶಕ್ತಿಯು ಹೆಚ್ಚಾಗುತ್ತದೆ. ಈ ಹಾಲಿನಲ್ಲಿರುವ ಅಗತ್ಯ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ