Relationship : ಮಿಲನದ ವೇಳೆ ಪುರುಷರು ಈ ನಾಲ್ಕು ಸಂಗತಿಗಳಿಂದಲೇ ಮಹಿಳೆಯತ್ತ ಆಕರ್ಷಿತರಾಗುವುದಂತೆ
ದಾಂಪತ್ಯ ಜೀವನದಲ್ಲಿ ಪತಿ ಪತ್ನಿಯರಿಬ್ಬರೂ ಪ್ರೀತಿ ವಿಶ್ವಾಸದೊಂದಿಗೆ ಒಬ್ಬರ ಆಸೆ ಆಕಾಂಕ್ಷೆಗಳಿಗೆ ಬೆಲೆ ನೀಡಬೇಕು. ಸಂಗಾತಿಗಳಿಬ್ಬರೂ ಭಾವನಾತ್ಮಕ ಸಂಬಂಧದ ಜೊತೆಗೆ ದೈಹಿಕವಾಗಿ ಹತ್ತಿರವಾಗಿದ್ದರೆ ಮಾತ್ರ ಸಂಬಂಧವು ಗಟ್ಟಿಯಾಗಿರುತ್ತದೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ಮೊದ ಮೊದಲು ತೊಡಗಿಸಿಕೊಳ್ಳುವ ವೇಳೆ ಮಹಿಳೆಯರಲ್ಲಿ ಭಯ ಹಾಗೂ ಮುಜುಗರವು ಕಾಡುವುದು ಸಹಜ. ಆದರೆ ಮಿಲನದ ವೇಳೆಯಲ್ಲಿ ಪುರುಷರು ತನ್ನ ಮಹಿಳಾ ಸಂಗಾತಿಯಲ್ಲಿ ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ದಾಂಪತ್ಯ ಜೀವನದಲ್ಲಿ ಮಿಲನ ಕ್ರಿಯೆಯೂ ಪತಿ ಪತ್ನಿಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವು ಈ ಲೈಂಗಿಕ ಕ್ರಿಯೆಯಿಂದ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೇ, ಕೆಲವೊಂದು ರೋಗಗಳನ್ನು ನಿವಾರಣೆ ಮಾಡುತ್ತದೆ. ಆದರೆ ದೈಹಿಕ ಸಂಬಂಧದ ಸಮಯದಲ್ಲಿ, ಪುರುಷರು ತಮ್ಮ ಮಹಿಳೆಯ ಬಗ್ಗೆ ಅನೇಕ ವಿಷಯಗಳನ್ನು ಗಮನಿಸುತ್ತಾರೆ. ಈ ವಿಚಾರಗಳು ಸೂಕ್ಷ್ಮವಾಗಿದ್ದರೂ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ವಿಚಾರಗಳು ಪುರುಷರನ್ನು ತನ್ನ ಸಂಗಾತಿಯತ್ತ ಆಕರ್ಷಿಸಲು ಕಾರಣವಾಗುತ್ತದೆ.
* ದೇಹದ ಚಲನೆಯತ್ತ ಗಮನ : ತನ್ನ ಸಂಗಾತಿಯೊಂದಿಗೆ ಲೈಂಗಿಕತೆಯಲ್ಲಿ ತೊಡಗಿಕೊಂಡ ವೇಳೆಯಲ್ಲಿ ಪುರುಷನು ತಮ್ಮ ಸಂಗಾತಿಯ ದೇಹವು ಹೇಗೆ ಚಲಿಸುತ್ತದೆ, ದೇಹದ ಚಲನೆಯೂ ಕಠಿಣವಾಗಿದೆಯೇ ಎಂದು ಗಮನ ಹರಿಸುತ್ತಾರೆ. ಈ ವೇಳೆಯಲ್ಲಿ ತನ್ನ ಸಂಗಾತಿಗೆ ಪುರುಷರು ಹೆಚ್ಚು ಹತ್ತಿರವಾಗಲು ಬಯಸುತ್ತಾರೆ.
* ಕಣ್ಣುಗಳ ನೋಟ : ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಪುರುಷರು ತಮ್ಮ ಸಂಗಾತಿಯ ಕಣ್ಣುಗಳನ್ನು ಹೆಚ್ಚು ನೋಡುತ್ತಾರೆ. ಪುರುಷನು ಅವಳು ನನ್ನ ದೇಹವನ್ನು ಇಷ್ಟಪಡುತ್ತಾಳೆಯೇ ಅಥವಾ ಅವಳು ನನ್ನನ್ನು ಪರೀಕ್ಷಿಸುತ್ತಿದ್ದಾಳಾ?ಎಂದು ಆಕೆಯ ನೋಟದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮೂಲಕ ಕಣ್ಣಿನಲ್ಲಿ ಕಣ್ಣನ್ನಿಟ್ಟು ನೋಡುವ ಮೂಲಕ ತನ್ನ ಸಂಗಾತಿಯೊಂದಿಗೆ ಆತ್ಮೀಯವಾಗಲು ಬಯಸುತ್ತಾರೆ.
* ಸಂಗಾತಿಯ ಒಳಉಡುಪು : ಲೈಂಗಿಕತೆಯ ವೇಳೆಯಲ್ಲಿ ಪುರುಷರು ತನ್ನ ಸಂಗಾತಿಯ ಒಳಉಡುಪಿನ ಬಗ್ಗೆ ಹೆಚ್ಚು ಗಮನಹರಿಸುತ್ತಾರಂತೆ. ಒಳಉಡುಪು ಹಳೆಯದಾಗಿದೆಯೇ, ಸವೆದಿದೆಯೇ ಎಂದು ನೋಡಿ ಆಕೆಯು ಒಳ ಉಡುಪಿನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂದು ಅರ್ಥೈಸಿಕೊಳ್ಳುತ್ತಾರೆ. ಹೆಚ್ಚಿನ ಪುರುಷರು ತನ್ನ ಸಂಗಾತಿಯೂ ತನ್ನನ್ನು ಲೈಂಗಿಕತೆಯತ್ತ ಆಕರ್ಷಿಸುವಂತಹ ಒಳಉಡುಪುಗಳನ್ನು ಧರಿಸಬೇಕು ಎಂದು ಬಯಸುತ್ತಾರೆ.
ಇದನ್ನೂ ಓದಿ: ಮದುವೆಯಾಗಿದ್ರು ಪರ ಸ್ತ್ರೀ ಮೇಲೆ ಪುರುಷರು ಆಕರ್ಷಿತರಾಗೋದು ಏಕೆ? ಚಾಣಕ್ಯ ಬಿಚ್ಚಿಟ್ಟ ಕಾರಣ
* ಧ್ವನಿಯಲ್ಲಿನ ಏರಿಳಿತ : ಹಾಸಿಗೆಯಲ್ಲಿ ಪುರುಷರು ತನ್ನ ಸಂಗಾತಿಯ ಧ್ವನಿಯು ಬಗ್ಗೆ ಹೆಚ್ಚು ಗಮನಿಸುತ್ತಾರೆ. ಆಕೆಯ ಧ್ವನಿಯೂ ಹೆಚ್ಚು ಆಳವಾಗಿದ್ದರೆ, ಆಕೆಯು ಅತಿಯಾಗಿ ಉತ್ಸುಕರಾಗಿದ್ದಾಳೆ ಎಂದುಕೊಳ್ಳುತ್ತಾರೆ. ಹೆಚ್ಚು ಹುಮ್ಮಸ್ಸಿನಿಂದ ತನ್ನೊಂದಿಗೆ ಮುಂದುವರೆಯುತ್ತಾಳೆ ಎಂದು ಪುರುಷರಿಗೆ ಸ್ಪಷ್ಟವಾಗುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ