Event Calendar January 2024: ಜನವರಿ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ

| Updated By: ಅಕ್ಷತಾ ವರ್ಕಾಡಿ

Updated on: Dec 24, 2023 | 2:44 PM

ಜನವರಿ ವರ್ಷದ ಮೊದಲ ತಿಂಗಳಾಗಿದ್ದು, ಈ ತಿಂಗಳಲ್ಲಿ ನಿರ್ದಿಷ್ಟ ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ.

Event Calendar January 2024: ಜನವರಿ ತಿಂಗಳಲ್ಲಿ ಆಚರಿಸಲಾಗುವ  ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ
January 2024
Follow us on

2024 ರ ಆರಂಭಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹೊಸ ವರ್ಷವು ಹೊಸತನ ಮತ್ತು ಹೊಸ ಆರಂಭದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಈ ವರ್ಷದ ಪ್ರತಿಯೊಂದು ದಿನವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ರಾಷ್ಟ್ರೀಯ , ಅಂತರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಮಾನ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಮುಖ ದಿನಗಳನ್ನು ವರ್ಷದ ಪ್ರತಿ ತಿಂಗಳಲ್ಲೂ ಆಚರಿಸಲಾಗುತ್ತದೆ. ಈ ಪ್ರತಿಯೊಂದು ಆಚರಣೆಗಳನ್ನು ನಿರ್ಧಿಷ್ಟ ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಹಾಗಿದ್ದರೆ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ.

ಜನವರಿ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಜನವರಿ 01, ಜಾಗತಿಕ ಕುಟುಂಬ ದಿನ: ಪ್ರತಿಯೊಬ್ಬರೂ ತಮ್ಮ ಕುಟುಂಬವನ್ನು ಪ್ರೀತಿಸಬೇಕು, ಈ ಮೂಲಕ ದ್ವೇಷ ಮತ್ತು ಅಸೂಯೆಗಳನ್ನು ಮರೆತು ಇಡೀ ವಿಶ್ವವನ್ನೇ ಪ್ರೀತಿಸಬೇಕು ಎಂಬ ಪರಿಕಲ್ಪನೆಯಡಿಯಲ್ಲಿ ಇಡೀ ಜಗತ್ತನ್ನು ನಮಗೆಲ್ಲರಿಗೂ ಜೀವಿಸಲು ಉತ್ತಮ ಸ್ಥಳವನ್ನಾಗಿಸಲು 01 ರಂದು ಪ್ರತಿವರ್ಷ ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 03, ಅಂತರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನ:ಜನರು ತಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಜನವರಿ 03 ರಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 4: ವಿಶ್ವ ಬ್ರೈಲ್ ಡೇ: ಬ್ರೈಲ್ ಲಿಪಿಯ ಸಂಶೋಧಕ ಲೂಯಿಸ್ ಬ್ರೈಲ್ ಅವರ ಜನ್ಮದದ ನೆನಪಿಗಾಗಿ ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 5: ರಾಷ್ಟ್ರೀಯ ಪಕ್ಷಿ ದಿನ: ನಮ್ಮ ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅಳಿವಿನಂಚಿನಲ್ಲಿರುವ ಪಕ್ಷಿಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷ ಜನವರಿ 05 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 11, ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ಜಾಗೃತಿ ದಿನ: ಮಾನವ ಕಳ್ಳಸಾಗಾಣಿಕೆಯ ನಿರಂತರ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸಲು ಪ್ರತಿವರ್ಷ ಜನವರಿ 11 ರಂದು ಮಾನವ ಕಳ್ಳಸಾಗಾಣಿಕೆಯ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 11-17, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ: ಜವಬ್ದಾರಿಯುತ ವಾಹನ ಚಾಲನಾ ಅಭ್ಯಾಸಗಳನ್ನು ಉತ್ತೇಜಿಸಲು, ಅಪಘಾತಗಳನ್ನು ತಡೆಗಟ್ಟಲು ಪ್ರತಿವರ್ಷ ಜನವರಿ 11 ರಿಂದ ಜನವರಿ 17 ರ ವರೆಗೆ ರಾಷ್ಟ್ರ ಮಟ್ಟದಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತದೆ.
  • ಜನವರಿ 12, ರಾಷ್ಟ್ರೀಯ ಯುವ ದಿನ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಸವಿ ನೆನಪಿಗಾರಿ ಪ್ರತಿವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 15, ಭಾರತೀಯ ಸೇನಾ ದಿನ: ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿದ ಸೈನಿಕರ ಗೌರವಾರ್ಥವಾಗಿ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 16, (ಸ್ಟಾರ್ಟ್ ಅಪ್ ಡೇ) ರಾಷ್ಟ್ರೀಯ ನವೋದ್ಯಮ ದಿನ: ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಉದ್ದೇಶದಿಂದ ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು (ಸ್ಟಾರ್ಟ್ ಅಪ್ ಡೇ) ಆಚರಿಸಲಾಗುತ್ತದೆ.
  • ಜನವರಿ 20, ಪೆಂಗ್ವಿನ್ ಜಾಗೃತಿ ದಿನ: ಹವಾಮಾನ ವೈಪರಿತ್ಯಗಳಿಂದ ಪೆಂಗ್ವಿನ್ ಆವಾಸಸ್ಥಾನಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಪೆಂಗ್ವಿನ್ ಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಜನವರಿ 20 ರಂದು ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 23, ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ: ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಸವಿನೆನಪಿಗಾಗಿ ಭಾರತದಲ್ಲಿ ಜನವರಿ 23 ರಂದು ಪರಾಕ್ರಮ ದಿವಸವನ್ನು ಆಚರಿಸಲಾಗುತ್ತದೆ.
  • ಜನವರಿ 24, ಅಂತರಾಷ್ಟ್ರೀಯ ಶಿಕ್ಷಣ ದಿನ: ಶಾಂತಿ ಮತ್ತು ಅಭಿವೃದ್ಧಿಗಾಗಿ ಶಿಕ್ಷಣದ ಪ್ರಾಮುಖ್ಯತೆ, ಅದರ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಜನವರಿ 24 ರಂದು ಅಂತರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 24: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಹಾಗೂ ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಜಾಗೃತಿ ಮೂಡಿಸಲು ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 25, ರಾಷ್ಟ್ರೀಯ ಮತದಾರರ ದಿನ: ಮತ ಚಲಾವಣೆಯ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ, 25, ರಾಷ್ಟ್ರೀಯ ಪ್ರವಾಸೋದ್ಯಮ ದಿನ: ಪ್ರವಾಸೋದ್ಯಮದ ಪ್ರಾಮುಖ್ಯತೆ ಮತ್ತು ಭಾರತೀಯ ಆರ್ಥಿಕತೆಯಲ್ಲಿ ಅದು ವಹಿಸುವ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಜನವರಿ 25 ರಂದು ಭಾರತದಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 26, ಗಣರಾಜ್ಯೋತ್ಸವ ದಿನ: 26 ನವೆಂಬರ್ 1949 ರಂದು ಭಾರತೀಯ ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. ಮತ್ತು ಜನವರಿ 26 ಜನವರಿ 1950 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಈ ದಿನದ ನೆನಪಿಗಾಗಿ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 24, ಅಂತರಾಷ್ಟ್ರೀಯ ಕಸ್ಟಮ್ಸ್ ದಿನ: ಗಡಿ ಭದ್ರತೆಯನ್ನು ಕಾಪಾಡುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ಏಜೆನ್ಸಿಗಳ ಪ್ರಾತವನ್ನು ಗುರುತಿಸಲು ಕಸ್ಟಮ್ಸ್ ಸಂಸ್ಥೆಯು ಪ್ರತಿ ವರ್ಷ ಜನವರಿ 26 ರಂದು ಅಂತರಾಷ್ಟ್ರೀಯ ಕಸ್ಟಮ್ಸ್ ದಿನವನ್ನು ಆಚರಿಸುತ್ತದೆ.
  • ಜನವರಿ 28, ವಿಶ್ವ ಕುಷ್ಠರೋಗ ದಿನ: ಸಾರ್ವಜನಿಕರಲ್ಲಿ ದೀರ್ಘಕಾಲಿಕ ಸಾಂಕ್ರಾಮಿಕ ರೋಗವಾದ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜನವರಿ ತಿಂಗಳ ಕೊನೆಯ ಭಾನುವಾರದಂದು ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸಲಾಗುತ್ತದೆ.
  • ಜನವರಿ 31, ಅಂತರಾಷ್ಟ್ರೀಯ ಜೀಬ್ರಾ ದಿನ: ಪರಿಸರ ನಾಶಗಳ ಕಾರಣದಿಂದಾಗಿ ಜೀಬ್ರಾಗಳ ಸಂತತಿ ಅಳಿವಿನಂಚಿನಲ್ಲಿವೆ. ಈ ನಿಟ್ಟಿನಲ್ಲಿ ಈ ಪ್ರಾಣಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ಅಂತರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: