ಭಾರತೀಯ ಸಂಸ್ಕ್ರತಿಯಲ್ಲಿ ಸೀರೆಗೆ ಅತ್ಯುನ್ನತ ಸ್ಥಾನವಿದೆ. ಪುರಾತನ ಕಾಲದಿಂದಲೂ ಸೀರೆ ಹೆಂಗಳೆಯರ ನೆಚ್ಚಿನ ಉಡುಪು ಸೀರೆ (Sari). ಕಾಲ ಬದಲಾದಂತೆ ಸೀರೆಯ ಶೈಲಿಯಲ್ಲಿ ಬದಲಾವಣೆಯಾಗಿದೆ. ವಿವಿಧ ವಸ್ತ್ರ ವಿನ್ಯಾಸಕಾರರ ಕೈಚಳಕದಿಂದ ಸೀರೆಗೂ ಮಾಡರ್ನ್ ಟಚ್ (Modern Touch) ಸಿಕ್ಕಿದೆ. ಪ್ರತಿದಿನವೂ ಟ್ರೆಂಡ್ (Trend) ಬದಲಾಗುತ್ತಲೇ ಇರುತ್ತದೆ. ಅದೇ ರೀತಿ ಸೀರೆಯ ಟ್ರೆಂಡ್ ಕೂಡ ಬದಲಾಗುತ್ತದೆ. ಇತ್ತೀಚೆಗೆ ಮಾಡರ್ನ್ ಡ್ರೆಸ್ ಇಷ್ಟಪಡುವ ಕಾಲೇಜು ಹುಡುಗಿಯರಿಗೂ ಸೀರೆ ನೆಚ್ಚಿನ ಉಡುಗೆ. ವಿವಿಧ ರೀತಿಯ ಪ್ಯಾಷನ್ (Fashion), ಟ್ರೆಂಡ್ಗಳಿಂದ ಅಂದಿಗೂ,ಇಂದಿಗೂ ಸೀರೆ ಮಹಿಳೆಯರ ಫೇವರೆಟ್ ಅಗಿದೆ. ಆದರೆ ಚಳಿಗಾಲದಲ್ಲಿ ಸೀರೆಯನ್ನು ಧರಿಸುವುದು ಕಷ್ಟವಾದ ವಿಷಯ, ಮೈಗೆ ಸೋಕುವ ಚಳಿಗಾಳಿ, ಒಡೆದ ಚರ್ಮವನ್ನು ಸೀರೆಯಿಂದ ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪ್ಯಾಷನ್ ಪ್ರಿಯರು ಸೀರೆಗೆ ಹೊಸ ಹೊಸ ಲುಕ್ ನೀಡಿ ಚಳಿಗಾಲಕ್ಕೂ ಅನುಕೂಲವಾಗುವಂತಹ ಸೀರೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಹಾಗಾದರೆ ಅಂತಹ ಸೀರೆಗಳು ಯಾವೆಲ್ಲ? ಚಳಿಗಾಲದಲ್ಲಿ ಎಂತಹ ಸೀರೆಗಳನ್ನು ಧರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ,
ಲಾಂಗ್ ಕೋಟ್ ಧರಿಸುವುದು
ಸೇರೆಯ ಮೇಲೆ ಉದ್ದವಾದ ಕೋಟ್ ಧರಿಸಿ. ಇದು ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ. ಜತೆಗೆ ಚಳಿಯಿಂದಲೂ ರಕ್ಷಣೆ ನೀಡುತ್ತದೆ. ಕಪ್ಪು, ಗಾಢ ನೀಲಿ, ಬಿಳಿ ಬಣ್ಣದ ಕೋಟ್ಗಳು ಸಾಮಾನ್ಯವಾಗಿ ಎಲ್ಲ ತರಹದ ಬಣ್ಣದ ಸೀರೆಗೆ ಒಪ್ಪುತ್ತದೆ. ಹೀಗಾಗಿ ಸೀರೆಯ ಮೇಲೆ ಸ್ವಲ್ಪ ಎಥ್ನಿಕ್ ಮತ್ತು ಟ್ರೆಡಿಷನಲ್ ಲುಕ್ ಇರುವ ಕೋಟ್ ಧರಿಸಿ. ಕೋಟಿನ ಮೇಲೆ ಥ್ರೆಡ್ ವರ್ಕ್ಸ್ಗಳಿದ್ದರೆ ಇನ್ನಷ್ಟು ಲುಕ್ ಅಗಿ ಕಾಣಿಸುತ್ತದೆ. ಈ ಉಡುಪು ಮದುವೆಗಳಿಗೆ ಮಾತ್ರವಲ್ಲದೆ ಕೆಲವು ಪಾರ್ಟಿಗಳಿಗೂ ಧರಿಸಬಹುದು. ರಾತ್ರಿ ಪಾರ್ಟಿಗಳಲ್ಲಿ ಚಳಿಗೆ ಮುದುಡಿಕೊಂಡು ಕೂರುವ ಅಗತ್ಯವೂ ಇರುವುದಿಲ್ಲ.
ಟೀ ಶರ್ಟ್ ಬ್ಲೌಸ್ಗಳನ್ನು ಆಯ್ದುಕೊಳ್ಳಿ
ಸೀರೆಗಳ ಮೇಲೆ ಫುಲ್ ಸ್ಲೀವ್ ಟೀ ಶರ್ಟ್ ಧರಿಸುವುದರಿಂದ ನಿಮಗೆ ಕ್ಯಾಶುವಲ್ ಲುಕ್ ನೀಡುತ್ತದೆ. ಟೀ ಶರ್ಟ್ ರೀತಿಯ ಬ್ಲೌಸ್ಗಳು ನಿಮ್ಮ ಸೀರೆಗೂ ಹೊಸ ಲುಕ್ ನೀಡುತ್ತದೆ. ಇಂತಹ ಬ್ಲೌಸ್ಗಳನ್ನು ಧರಿಸಿದಾಗ ನೀವು ಸೆರಗನ್ನು ಇಳಿಬಿಟ್ಟರೆ ಸುಂದರವಾಗಿ ಕಾಣಿಸುತ್ತೀರಿ. ಬ್ಲೌಸ್ನ ಕೈತೋಳಿನ ತುದಿಗೆ ಒಂದಷ್ಟು ಗ್ರ್ಯಾಂಡ್ ಲುಕ್ ಇರುವಂತೆ ನೋಡಿಕೊಳ್ಳಿ. ಇಂತಹ ಸೀರೆಗಳನ್ನು ಧರಿಸಿದಾಗ ಕೂದಲನ್ನು ತಲೆಯ ಮೇಲೆ ತುರುಬಿನಂತೆ ಕಟ್ಟಿ ಹೂವು ಮುಡಿದುಕೊಳ್ಳಿ. ಇದು ನಿಮಗೆ ಸಾಂಪ್ರದಾಯಿಕ ಲುಕ್ ನೀಡುತ್ತದೆ.
ಅನಾರ್ಕಲಿ ಕುರ್ತಾ
ಸೀರೆಯ ಮೇಲೆ ಅನಾರ್ಕಲಿ ಕುರ್ತಾ ಧರಿಸಿ. ಸೀರೆಯನ್ನು ಉಟ್ಟ ನಂತರ ಅನಾರ್ಕಲಿ ಕುರ್ತಾ ಧರಿಸಿ ಸೆರಗನ್ನು ಕುತ್ತಿಗೆಯ ಬಳಿ ಇಳಿಬಿಡಿ. ಇದು ನಿಮಗೆ ಸ್ಟೈಲಿಷ್ ಲುಕ್ ನೀಡುತ್ತದೆ. ಕುರ್ತಾ ಧರಿಸಿದಾಗ ಆಕರ್ಷಕವಾದ ಆಭರಣಗಳನ್ನು ಧರಿಸಿ. ಕುತ್ತಿಗೆಯ ಸುತ್ತ ಸ್ಕಾರ್ಪ್ಗಳನ್ನು ಧರಿಸಿದರೂ ಸಖತ್ ಲುಕ್ ನೀಡುತ್ತದೆ, ಚಳಿಗಾಲದಲ್ಲಿ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನಾರ್ಕಲಿ ಕುರ್ತಾದೊಂದಿಗಿನ ಸೀರೆ ಡಿಫರೆಂಟ್ ಲುಕ್ ನೀಡುತ್ತದೆ.
ಲೆದರ್ ಜಾಕೆಟ್
ಲೆದರ್ ಜಾಕೆಟ್ಗಳು ನಿಮ್ಮ ದೇಹವನ್ನು ಚಳಿಯಿಂದ ಬೆಚ್ಚಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಪ್ಪು ಅಥವಾ ಸ್ಕಿನ್ ಕಲರ್ನ ಲೆದರ್ ಜಾಕೆಟ್ಗಳು ಕುತ್ತಿಗೆಯವರೆಗೆ ಹಾಗೂ ನಿಮ್ಮ ಕೈಗಳನ್ನು ಕವರ್ ಮಾಡುತ್ತದೆ. ಇದು ನಿಮಗೆ ಸ್ಟೈಲಿಷ್ ಲುಕ್ ನೀಡುವುದರಲ್ಲಿ ಅನುಮಾನವಿಲ್ಲ. ಜಾಕೆಟ್ ಧರಿಸಿದಾಗ ಒಂದಷ್ಟು ಆಭರಣಗಳನ್ನು ಧರಿಸಿ ಇದು ನಿಮ್ಮ ಡ್ರೆಸ್ಅನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಹೈನೆಕ್ ಬ್ಲೌಸ್
ಹೈನೆಕ್ ಬ್ಲೌಸ್ಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗುತ್ತದೆ. ಜಾಕೆಟ್ಗಳಂತೆ ಕಾಣುವ ಹೈನೆಕ್ ಬ್ಲೌಸ್ಗಳು ಚಳಿಯಿಂದ ರಕ್ಷಣೆ ನೀಡುತ್ತವೆ. ಈ ರೀತಿಯ ಬ್ಲೌಸ್ಗಳ ಮೇಲೆ ನೀವು ಆಕರ್ಷಕವಾದ ನೆಕ್ಲೆಸ್ನಂತಹ ಆಭರಣಗಳನ್ನು ಧರಿಸಬಹುದು. ಡಿನ್ನರ್ಗಳಿಗೆ ಇಂತಹ ಉಡುಪು ನಿಮ್ಮನ್ನು ಆಕರ್ಷಿಸುವಂತೆ ಮಾಡುತ್ತದೆ. ಅಲ್ಲದೆ ಚಳಿಯಿಂದಲೂ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ:
Handwriting; ಹ್ಯಾಂಡ್ರೈಟಿಂಗ್ ಕೂಡ ವ್ಯಕ್ತಿತ್ವವನ್ನು ಹೇಳುತ್ತದೆ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
Published On - 1:26 pm, Sat, 22 January 22