ಚಳಿಗಾಲದಲ್ಲಿ ತಾಪಮಾನ ಇಳಿಕೆಯಾದಾಗ ಚರ್ಮವು ಒಣಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ ತುಟಿಗಳು ಸಾಕಷ್ಟು ಮೃದುವಾಗಿರುವುದರಿಂದ ಚಳಿಗಾಲದಲ್ಲಿ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಈಗ ಲಿಪ್ ಆಯಿಲ್‌ಗಳು ಸಾಕಷ್ಟು ಲಭ್ಯವಿರುವುದರಿಂದ ನೀವು ಪ್ರತಿ ಹಚ್ಚುವುದು ಅತ್ಯಂತ ಅಗತ್ಯವಾಗಿದೆ. ಇದಲ್ಲದೇ ನೀವು ಮನೆಯಲ್ಲಿಯೇ ಲಭ್ಯವಿರುವ ತೆಂಗಿನ ಕಾಯಿಯ ಎಣ್ಣೆ ಅಥವಾ ತುಪ್ಪವನ್ನು ನಿಮ್ಮ ತುಟಿಗೆ ಹಚ್ಚಬಹುದು.
ಒಣ ಮತ್ತು ಒಡೆದ ತುಟಿಗಳು ನಿಮ್ಮ ಸೌಂದರ್ಯ ಮೇಲೂ ಪರಿಣಾಮ ಬೀರುವುದು ಮಾತ್ರವಲ್ಲದೇ ಯಾವುದೇ ಆಹಾರವನ್ನು ತಿನ್ನುವಾಗಲೂ ಉರಿಯುವ ಸಾಧ್ಯತೆ ಹೆಚ್ಚಿದೆ. ಲಿಪ್ ಆಯಿಲ್ ನಿಮ್ಮ ತುಟಿಗಳಿಗೆ ಹೆಚ್ಚು ಅಗತ್ಯವಿರುವ ತೇವಾಂಶವನ್ನು ಸೇರಿಸುವುದರ ಜೊತೆಗೆ ತುಟಿಯನ್ನು ಮೃದುಗೊಳಿಸುತ್ತದೆ.
ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವ ಸಮಸ್ಯೆ ದೂರವಾಗುತ್ತದೆ. ತುಟಿ ಮೃದುವಾಗುತ್ತದೆ. ನಿತ್ಯ ಜೇನನ್ನು ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಹೆಚ್ಚುತ್ತದೆ.
ರಾತ್ರಿ ಮಲಗುವ ಮುನ್ನ ಕೊಂಚ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿ ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ರಾತ್ರಿಯ ಸಮಯದಲ್ಲಿ ತುಟಿಗಳು ಒಡೆಯುವುದನ್ನು ತಪ್ಪಿಸಬಹುದು.
ಇದನ್ನು ಓದಿ: ನಿಮ್ಮ ಕಣ್ಣಿನ ರಪ್ಪೆ ಆಕರ್ಷಕವಾಗಿ ಕಾಣಲು ಇಲ್ಲಿದೆ ಸಲಹೆ
ನಿಮ್ಮ ತುಟಿ ಆರೈಕೆಗೆ ಮಾಯಿಶ್ಚರೈಸೇಶನ್ ಅಗತ್ಯವಾಗಿದೆ. ನಿಮ್ಮ ತುಟಿಗಳಿಗೆ ತೇವಾಂಶವನ್ನು ನೀಡಲು ಲಿಪ್ ಆಯಿಲ್‌ಗಳನ್ನು ಹಚ್ಚುವುದು ಉತ್ತಮ ಮಾರ್ಗವಾಗಿದೆ. ಚಳಿಗಾಲದಲ್ಲಿ ನಿಮ್ಮ ತುಟಿಗಳಿಗೆ ಹೆಚ್ಚುವರಿ ಪೋಷಣೆಯ ಅಗತ್ಯವಿರುತ್ತದೆ. ಆದ್ದರಿಂದ ಲಿಪ್ ಆಯಿಲ್, ಲಿಪ್ ಬಾಮ್ ಗಳನ್ನು ಬಳಸುವುದು ಅತ್ಯಂತ ಅಗತ್ಯವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:10 pm, Wed, 7 December 22